Maja Talkies: ಮಜಾ ಟಾಕೀಸ್ನಲ್ಲಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್: ಅತಿಥಿಗಳು ಯಾರು ನೋಡಿ
ಮಜಾ ಟಾಕೀಸ್ನಲ್ಲಿ ಈ ವಾರ ಮತ್ತಷ್ಟು ಮನರಂಜನೆ ಸಿಗೋದು ಪಕ್ಕಾ ಆಗಿದೆ. ಪ್ರೇಮಿಗಳ ದಿನದ ಪ್ರಯುಕ್ತ ಈ ಶನಿವಾರದ ಎಪಿಸೋಡ್ಗೆ ವಾಸುಕಿ ವೈಭವ್ ಮತ್ತು ಅವರ ಪತ್ನಿ ಬೃಂದಾ ಗೆಸ್ಟ್ ಆಗಿ ಬಂದಿದ್ದಾರೆ. ಜೊತೆಗೆ ನಟ ನಾಗಭೂಷಣ್ ಹಾಗೂ ಅವರ ಪತ್ನಿ ಪೂಜಾ ಸಹ ಮಜಾ ಮನೆಗೆ ಕಾಲಿಟ್ಟಿದ್ದಾರೆ.

Maja Talkies

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್ನಲ್ಲಿ ಎರಡು ಹೊಸ ಶೋ ಆರಂಭವಾಗಿದೆ. ಒಂದು ಬಾಯ್ಸ್ vs ಗರ್ಲ್ಸ್ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್. ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಲು ಶುರುವಾಗಿರುವ ಮಜಾ ಟಾಕೀಸ್ನಲ್ಲಿ ಈ ವಾರ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಪಿಸೋಡ್ ನಡೆಯಲಿದೆ. ಇದಕ್ಕಾಗಿ ಸೆಲೆಬ್ರಿಟಿಗಳು ಕೂಡ ಬಂದಿದ್ದಾರೆ. ಇವರು ಮಜಾ ಸದಸ್ಯರ ಕಾಮಿಡಿಗೆ ನಕ್ಕು-ನಕ್ಕು ಸುಸ್ತಾಗಿದ್ದಾರೆ. ಹಾಗಾದರೆ ಮಜಾ ಟಾಕೀಸ್ ವೇದಿಕೆಗೆ ಈ ವಾರ ಯಾರೆಲ್ಲ ಬಂದಿದ್ದಾರೆ?, ಈ ಕುರಿತು ವರದಿ ಇಲ್ಲಿದೆ ನೋಡಿ.
ಮಜಾ ಟಾಕೀಸ್ನಲ್ಲಿ ಈ ವಾರ ಮತ್ತಷ್ಟು ಮನರಂಜನೆ ಸಿಗೋದು ಪಕ್ಕಾ ಆಗಿದೆ. ಪ್ರೇಮಿಗಳ ದಿನದ ಪ್ರಯುಕ್ತ ಈ ಶನಿವಾರದ ಎಪಿಸೋಡ್ಗೆ ನಾಗಭೂಷಣ್ ಹಾಗೂ ಅವರ ಪತ್ನಿ, ವಾಸುಕಿ ವೈಭನ್ ಹಾಗೂ ಅವರ ಪತ್ನಿ ಆಗಮಿಸಿದ್ದಾರೆ. ಇವರು ಪ್ರೀತಿಸಿ ಮದುವೆ ಆದವರು. ಹೀಗಾಗಿ, ಈ ಸಂಪೂರ್ಣ ಎಪಿಸೋಡ್ ಪೂರ್ತಿಯಾಗಿ ಫನ್ ರೂಪದಲ್ಲಿ ಸಾಗಲಿದೆ.
ಹೌದು, ಫೆಬ್ರವರಿ 15 ರಂದು ಪ್ರಸಾರವಾಗುವ ಕಾರ್ಯಕ್ರಮಕ್ಕೆ ಪ್ರೀತಿಸಿ ಮದುವೆಯಾಗಿರುವ ಬಿಗ್ ಬಾಸ್ ಕನ್ನಡ ಸ್ಪರ್ಧಿ ಹಾಗೂ ಗಾಯಕ ವಾಸುಕಿ ವೈಭವ್ ಮತ್ತು ಅವರ ಪತ್ನಿ ಬೃಂದಾ ಗೆಸ್ಟ್ ಆಗಿ ಬಂದಿದ್ದಾರೆ. ಜೊತೆಗೆ ನಟ ನಾಗಭೂಷಣ್ ಹಾಗೂ ಅವರ ಪತ್ನಿ ಪೂಜಾ ಸಹ ಮಜಾ ಮನೆಗೆ ಕಾಲಿಟ್ಟಿದ್ದಾರೆ.
ಕಲರ್ಸ್ ಕನ್ನಡ ಹಾಗೂ ಮಜಾ ಟಾಕೀಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲಿ ಪ್ರೋಮೋ ಹಂಚಿಕೊಂಡಿದೆ. ಈ ವಾರ ಕೂಡ ಕುರಿ ಪ್ರತಾಪ್ ಹಾಸ್ಯ ಜೋರಾಗಿಯೇ ಇದೆ. ಯೋಗರಾಜ್ ಭಟ್ ಅವರ ಹಾಸ್ಯ, ಪಂಚಿಂಗ್ ಡೈಲಾಗ್ ಕೂಡ ವೀಕ್ಷಕರಿಗೆ ಕಿಕ್ ಕೊಡುವಂತಿದೆ. ಜೊತೆಗೆ ಬಂದ ಅತಿಥಿಗಳಿಗೆ ಸೃಜನ್ ಲೋಕೇಶ್ ಮಜವಾಗಿರುವ ಸ್ಪೆಷಲ್ ಟಾಸ್ಕ್ ಕೊಟ್ಟಿದ್ದಾರೆ. ಇಮೇಜ್‌ಗಳನ್ನು ಸ್ಕ್ರೀನ್ ಮೇಲೆ ಪ್ಲೇ ಮಾಡಲಾಗಿದೆ. ಗಂಡಂದಿರ ಕಣ್ಣಿಗೆ ಬ್ಲೈಂಡ್ ಫೋಲ್ಡ್ ಕಟ್ಟಲಾಗಿದೆ. ಹೆಂಡತಿಯರು ಇಮೇಜ್‌ನಲ್ಲಿ ಕಾಣ ಸಿಗುವ ವಸ್ತುಗಳನ್ನು ಬಾಯಲ್ಲಿ ಸೌಂಡ್ ಮಾಡುವುದರ ಮೂಲಕ ತಮ್ಮ ಗಂಡಂದಿರಿಗೆ ಕನ್ವೇ ಮಾಡಬೇಕು.
ಇಮೇಜ್‌ನಲ್ಲಿ ಮೆಣಸಿನಕಾಯಿ, ಗರಗಸ ಸೇರಿದಂತೆ ಇನ್ನೂ ಹಲವು ವಸ್ತುಗಳನ್ನು ತೋರಿಸಲಾಗಿದೆ. ನಾಗಭೂಷಣ್ ಹೆಂಡತಿ ಪೂಜಾ ಮತ್ತು ವಾಸುಕಿ ಹೆಂಡತಿ ಬೃಂದಾಗೆ ಅದನ್ನ ಕನ್ವೇ ಮಾಡುವಲ್ಲಿ ಸಾಕಾಗಿ ಹೋಗಿದೆ. ಇವರೆಷ್ಟೇ ಪ್ರಯತ್ನ ಪಟ್ಟರೂ ನಾಗಭೂಷಣ್ ಮತ್ತು ವಾಸುಕಿ ಉತ್ತರ ಹೇಳಲಾಗದೆ ಪರದಾಡಿದ್ದಾರೆ. ಒಟ್ಟಾರೆ ಈ ವಾರದ ಮಜಾ ಟಾಕೀಸ್ ನೋಡಲು ವೀಕ್ಷಕರಂತು ಕಾದು ಕುಳಿತಿದ್ದಾರೆ.
Boys vs Girls: ನಾನೇನು ಗತಿಗೆಟ್ಟಿದ್ದೀನಾ..?: ವೇದಿಕೆ ಮೇಲೆ ಗರಂ ಆದ ಚೈತ್ರಾ ಕುಂದಾಪುರ