Bhagya Lakshmi Serial: ನನ್ನ ಮುಂದೆ ತಪ್ಪಾಯಿತು ಅಂತ ಕೇಳ್ಕೊ ಎಂದ ತಾಂಡವ್ಗೆ ಭಾಗ್ಯ ಹೇಳಿದ್ದೇನು ಗೊತ್ತೇ?
ತಾಂಡವ್, ನನ್ನ ಮುಂದೆ ಬಂದು ಕೈ ಮುಗಿದು ಬೇಡ್ಕೊ.. ತಪ್ಪಾಯ್ತು ಅಂತ ಎಂದು ಹೇಳುತ್ತಾನೆ. ಇವರ ಮಾತಿನಿಂದ ತಾಳ್ಮೆ ಕಳೆದುಕೊಂಡ ಭಾಗ್ಯಾ, ನಾನು ಮುಂದೆ ಕೈಮುಗಿದು ಬೇಡ್ಕೋಬೇಕಾ?.. ನನ್ನ ಕೈಯಲ್ಲಿ ಏನಾಗುತ್ತೆ ಅಂತ ಮಾಡಿ ತೋರಿಸ್ತೀನಿ.. ಯಾವಗ ನೋಡಿದ್ರು ಇನ್ನೊಬ್ಬರ ಜೀವನ ನೋಡಿ ಆಡಿ ನಗೋದೇ ನಿಮ್ಮ ಕೆಲಸ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಭಾಗ್ಯಾ ತಾಂಡವ್ನ ಕುತಂತ್ರದಿಂದ ಇದ್ದ ಒಂದು ಸಣ್ಣ ಕೆಲಸ ಕೂಡ ಕಳೆದುಕೊಂಡಿದ್ದಾಳೆ. ಭಾಗ್ಯಾ ಜೋಕರ್ ವೇಷ ಹಾಕಿಕೊಂಡು ರೆಸಾರ್ಟ್ನಲ್ಲಿ ನೃತ್ಯ ಮಾಡುತ್ತಾಳೆ ಎಂಬ ವಿಚಾರವನ್ನು ತಿಳಿದ ತಾಂಡವ್ ಇದಕ್ಕೂ ಕಲ್ಲು ಹಾಕಿದ್ದಾನೆ. ಪರಿಣಾಮ ರೆಸಾರ್ಟ್ ಮ್ಯಾನೇಜರ್ ಭಾಗ್ಯಾಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಸದ್ಯ ಹೊಸ ಕೆಲಸಕ್ಕೆ ಮತ್ತೆ ಅಲಿಯಬೇಕಾಗಿ ಬಂದಿದೆ. ಆದರೆ, ತಾಂಡವ್ಗೆ ಭಾಗ್ಯ ಸರಿಯಾಗೇ ಮಾತಿನ ಮೂಲಕ ತಿರುಗೇಟು ಕೊಟ್ಟಿದ್ದಾಳೆ. ತನಗೆ ಹೀಯಾಳಿಸಲು ಬಂದ ತಾಂಡವ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾಳೆ.
ಭಾಗ್ಯ ಎಂದಿನಂತೆ ಗುಂಡಣ್ಣನನ್ನು ಕರೆದುಕೊಂಡು ಶಾಲೆಗೆ ಹೊರಡುತ್ತಾಳೆ. ಅವನನ್ನು ಸ್ಕೂಲ್‌ಗೆ ಬಿಟ್ಟ ಭಾಗ್ಯ, ನಂತರ ಅಲ್ಲಿಂದ ರೆಸಾರ್ಟ್‌ಗೆ ಕೆಲಸಕ್ಕೆ ಹೋಗುತ್ತಾಳೆ. ಅವಳು ಬರುವುದನ್ನೇ ರೆಸಾರ್ಟ್‌ನ ಮ್ಯಾನೇಜರ್ ಕಾಯುತ್ತಾ ಕುಳಿತಿರುತ್ತಾಣೆ. ಭಾಗ್ಯ ಬಂದ ಕೂಡಲೇ ಅವಳನ್ನು ತರಾಟೆಗೆ ತೆಗೆದುಕೊಂಡು, ನೀನು ಇನ್ನು ಕೆಲಸಕ್ಕೆ ಬರಬೇಡ ಎಂದು ಹೇಳಿದ್ದಾನೆ. ನಾನು ಈಗಾಗಲೇ ಬೇರೊಬ್ಬನನ್ನು ಕೆಲಸಕ್ಕೆ ಸೇರಿಸಿಕೊಂಡು ಆಗಿದೆ. ಅವನು ಕೆಲಸ ಶುರು ಮಾಡಿಯೂ ಆಗಿದೆ, ಇನ್ನು ನಿನ್ನ ಅಗತ್ಯವಿಲ್ಲ, ನೀನು ಹೋಗಬಹುದು ಎಂದು ಹೇಳುತ್ತಾನೆ.
ಭಾಗ್ಯ ಅಂಗಲಾಚಿ ಬೇಡಿಕೊಂಡರೂ, ಕೆಲಸದಿಂದ ತೆಗೆದುಹಾಕಬೇಡಿ ಎಂದು ಕೇಳಿಕೊಂಡರೂ ಮ್ಯಾನೇಜರ್ ಕೇಳುವುದಿಲ್ಲ. ಬಳಿಕ ರೆಸಾರ್ಟ್ನಿಂದ ಹೊರಬರುತ್ತಿದ್ದಂತೆ ಅಲ್ಲಿಗೆ ತಾಂಡವ್ ಮತ್ತು ಶ್ರೇಷ್ಠಾ ಬಂದಿದ್ದಾರೆ. ಭಾಗ್ಯ ಮತ್ತೊಮ್ಮೆ ಕೆಲಸ ಕಳೆದುಕೊಂಡಿರುವುದನ್ನು ಅವರಿಬ್ಬರು ಜೋರಾಗಿ ನಗುತ್ತಾರೆ. ತಾಂಡವ್ ಶ್ರೇಷ್ಠಾ ಬಳಿ, ಶ್ರೇಷ್ಠಾ ನಿನಗೆ ನಾನು ಕೋತಿ ಕುಣಿಯುವುದನ್ನು ತೋರಿಸುತ್ತಿದ್ದೆ. ಸ್ವಲ್ಪದರಲ್ಲಿ ಮಿಸ್ ಆಯಿತು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಭಾಗ್ಯ ಕೊಂಚ ಗಟ್ಟಿಯಾಗಿ ನಿಮಗೆ ಏನು ನನ್ನ ಹಿಂದೆಯೇ ಸುತ್ತುವ ಚಾಳಿ ಏನಾದರು ಶುರುವಾಗಿದೆ ಎಂದು ಹೇಳುತ್ತಾಳೆ.
ಈ ಮಾತನ್ನು ಕೇಳಿ ತಾಂಡವ್ ಹಾಗೂ ಶ್ರೇಷ್ಠಾ ಅಲ್ಲ ಭಾಗ್ಯ ನೀನು ಇಲ್ಲಿ ಈ ತರ ಕೆಲಸ ಮಾಡುತ್ತಿದ್ದಿಯ? ಇದೀಗ ಈ ಕೆಲಸವೂ ಕೂಡ ನಿನ್ನ ಕೈಯಿಂದ ಹೋಯಿತು. ಇನ್ನು ಮುಂದಿನ ಗತಿ ಏನು?. ಭಾಗ್ಯಾಳಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು ಎಂದು ಶ್ರೇಷ್ಠಾ ಹೇಳುತ್ತಾಳೆ. ಅಲ್ಲದೆ ತಾಂಡವ್, ನನ್ನ ಮುಂದೆ ಬಂದು ಕೈ ಮುಗಿದು ಬೇಡ್ಕೊ.. ತಪ್ಪಾಯ್ತು ಅಂತ ಎಂದು ಹೇಳುತ್ತಾನೆ. ಇವರ ಮಾತಿನಿಂದ ತಾಳ್ಮೆ ಕಳೆದುಕೊಂಡ ಭಾಗ್ಯಾ, ನಾನು ಮುಂದೆ ಕೈಮುಗಿದು ಬೇಡ್ಕೋಬೇಕಾ?.. ನನ್ನ ಕೈಯಲ್ಲಿ ಏನಾಗುತ್ತೆ ಅಂತ ಮಾಡಿ ತೋರಿಸ್ತೀನಿ.. ಯಾವಗ ನೋಡಿದ್ರು ಇನ್ನೊಬ್ಬರ ಜೀವನ ನೋಡಿ ಆಡಿ ನಗೋದೇ ನಿಮ್ಮ ಕೆಲಸ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.
ಸದ್ಯ ಭಾಗ್ಯಾಳ ಹೊಸ ಕೆಲಸ ಏನು?, ರುಚಿ ರುಚಿಯಾಗಿ ಅಡುಗೆ ಮಾಡುವ ಭಾಗ್ಯ ಇದೇ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಸ್ವಂತವಾಗಿ ಮಾಡುತ್ತಾಳಾ?, ಅತ್ತ ತಾಂಡವ್-ಶ್ರೇಷ್ಠಾರ ಮುಂದಿನ ಪ್ಲ್ಯಾನ್ ಏನು ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ತಿಳಿದುಬರಬೇಕಿದೆ.
Karna Serial: ಭವ್ಯಾ, ಮೋಕ್ಷಿತಾ, ರಂಜನಿಯೂ ಅಲ್ಲ: ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?