Karna Serial: ಭವ್ಯಾ, ಮೋಕ್ಷಿತಾ, ರಂಜನಿಯೂ ಅಲ್ಲ: ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?
ಪ್ರೊಮೋ ಬಿಡುಗಡೆ ಆದಾಗಿನಿಂದ ಕರ್ಣ ಧಾರಾವಾಹಿಗೆ ನಾಯಕಿ ಯಾರು?, ಕಿರಣ್ ರಾಜ್ಗೆ ಜೋಡಿ ಯಾರು? ಎಂಬ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಟ್ರೆಂಡಿಂಗ್ನಲ್ಲಿರುವ ನಾಯಕಿಯರೆಂದರೆ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ. ಆದರೆ, ಈ ಧಾರಾವಾಹಿಗೆ ನಾಯಕಿಯರು ಇವರಲ್ವಂತೆ.

Karna Serial Heroin

ಝೀ ಕನ್ನಡ ವಾಹಿನಿಯು ಕರ್ಣ (Karna Serial) ಎಂಬ ಹೊಸ ಧಾರಾವಾಹಿಯೊಂದನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಈಗಾಗಲೇ ಹೊಸ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ದಾಖಲೆಯ ವೀಕ್ಷಣೆ ಕಂಡಿದೆ. ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವಂತಹ ಕನ್ನಡತಿ ಧಾರಾವಾಹಿಯ ನಾಯಕ ಕಿರಣ್ ರಾಜ್ ಈ ಧಾರಾವಾಹಿಯ ನಾಯಕನಾಗಿದ್ದಾರೆ. ಈ ಮೂಲಕ ಕಿರಣ್ ರಾಜ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಝೀ ಕನ್ನಡ ಇನ್ಸ್ಟಾಗ್ರಾಮ್ನಲ್ಲಿ ಈ ಧಾರಾವಾಹಿಯ ಪ್ರೊಮೋಗೆ 10 ಮಿಲಿಯನ್ಗೂ ಅಧಿಕ ವೀವ್ಸ್ ಆಗಿದೆ. ಹೀಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿಗೆ ನಾಯಕಿ ಯಾರು?.
ಪ್ರೊಮೋ ಬಿಡುಗಡೆ ಆದಾಗಿನಿಂದ ಈ ಧಾರಾವಾಹಿಗೆ ನಾಯಕಿ ಯಾರು?, ಕಿರಣ್ ರಾಜ್ಗೆ ಜೋಡಿ ಯಾರು? ಎಂಬ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಟ್ರೆಂಡಿಂಗ್ನಲ್ಲಿರುವ ನಾಯಕಿಯರೆಂದರೆ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ. ಇತ್ತೀಚೆಗಷ್ಟೆ ಇವರಿಬ್ಬರು ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭಾಗವಹಿಸಿದ್ದರು. ಕರ್ನಾಟಕ ಜನತೆಗೆ ಹತ್ತಿರವಾಗಿರುವ ಈ ಇವರಿಬ್ಬರ ಪೈಕಿ ಒಬ್ಬರು ಕರ್ಣನ ನಾಯಕಿಯರಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಇವರಲ್ವಂತೆ.
ಇನ್ನು ಕನ್ನಡತಿ ಧಾರಾವಾಹಿಯಲ್ಲಿ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರು ಒಟ್ಟಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಈ ಧಾರಾವಾಹಿ ಪೂರ್ಣಗೊಂಡು ಹಲವು ಸಮಯ ಕಳೆದಿದೆ. ಇದು ಮುಗಿದರೂ ಈ ಜೋಡಿಯನ್ನು ವೀಕ್ಷಕರು ಮರೆತಿಲ್ಲ. ಹೀಗಾಗಿ ಮತ್ತೆ ಈ ಸೂಪರ್ ಹಿಟ್ ಜೋಡಿ ಕರ್ಣದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅನೇಕರು ರಂಜನಿ ಅವರೇ ನಾಯಕಿ ಆಗಲಿ ಎಂದು ಕೋರಿದ್ದಾರೆ.
ಆದರೆ, ಇವೆಲ್ಲಾ ಅಭಿಮಾನಿಗಳ ಬಾಯಿಂದ ಕೇಳಿಬರುತ್ತಿರುವ ಹೆಸರುಗಳು. ಆದರೆ, ಕರ್ಣನಿಗೆ ನಾಯಕಿ ಇವರು ಯಾರು ಅಲ್ಲ. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಗೆ ನಾಯಕಿಯಾಗಿ ಹೊಸ ಮುಖವನ್ನು ಹುಡುಕುತ್ತಿದ್ದಾರಂತೆ. ನಾಯಕಿ ಇನ್ನು ಫೈನಲ್ ಆಗಿಲ್ಲ. ಮೂಲಗಳ ಪ್ರಕಾರ, ಪ್ರೋಮೋ ಶೂಟಿಂಗ್ ಮಾತ್ರ ಆಗಿದ್ದು, ಇನ್ನು ಧಾರಾವಾಹಿ ಶೂಟಿಂಗ್ ಆರಂಭವಾಗಿಲ್ಲ. ಹೀಗಾಗಿ ಯಾರ ಆ ಹೊಸ ಮುಖ ಎಂಬುದು ಇನ್ನಷ್ಟೆ ರಿವೀಲ್ ಆಗಬೇಕಿದೆ.
Bhavya Gowda: ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?