BHEL Jobs: ಬಿಎಚ್‌ಇಎಲ್‌ನಲ್ಲಿ 400 ಟ್ರೈನಿ ಹುದ್ದೆಗಳಿಗೆ ಬಿಇ, ಡಿಪ್ಲೊಮ ಪಾಸಾದವರಿಂದ ಅರ್ಜಿ ಆಹ್ವಾನ

ಬಿಹೆಚ್‌ಇಎಲ್‌ನ ಈ ಹುದ್ದೆಗಳನ್ನು ಮೆಕ್ಯಾನಿಕಲ್ / ಸಿವಿಲ್ / ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್‌ / ಕೆಮಿಕಲ್ / ಮೆಟಾಲರ್ಜಿ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

BHEL
Profile ಹರೀಶ್‌ ಕೇರ January 21, 2025 67

ಬೆಂಗಳೂರು: ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್‌ (ಬಿಹೆಚ್‌ಇಎಲ್) ನಲ್ಲಿ ಇಂಜಿನಿಯರ್ ಟ್ರೈನಿ ಹುದ್ದೆಗಳು, ಸೂಪರ್‌ವೈಸರ್‌ ಟ್ರೈನಿ ಹುದ್ದೆಗಳನ್ನು (Trainee posts) ಭರ್ತಿ ಮಾಡಲು ನೇಮಕ (BHEL Jobs) ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ (Job news) ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಬಿಹೆಚ್‌ಇಎಲ್‌ನ ಈ ಹುದ್ದೆಗಳನ್ನು ಮೆಕ್ಯಾನಿಕಲ್ / ಸಿವಿಲ್ / ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್‌ / ಕೆಮಿಕಲ್ / ಮೆಟಾಲರ್ಜಿ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 400 ಹುದ್ದೆಗಳಿದ್ದು, ಅರ್ಹ ಮತ್ತು ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.

ಉದ್ಯೋಗ ಸಂಸ್ಥೆ : ಭಾರತ್ ಹೆವಿ ಇಲೆಕ್ಟ್ರಿಕಲ್ಸ್‌ ಲಿಮಿಟೆಡ್

ಹುದ್ದೆಗಳ ಹೆಸರು : ಇಂಜಿನಿಯರ್ ಟ್ರೈನಿ, ಸೂಪರ್‌ವೈಸರ್ ಟ್ರೈನಿ

ಒಟ್ಟು ಹುದ್ದೆಗಳ ಸಂಖ್ಯೆ: 400

ಬಿಹೆಚ್‌ಇಎಲ್‌ ಇಂಜಿನಿಯರ್ ಟ್ರೈನಿಗಳ ಬ್ರ್ಯಾಂಚ್‌ವಾರು ಹುದ್ದೆಗಳ ವಿವರ

ಮೆಕ್ಯಾನಿಕಲ್ : 70 ಇಲೆಕ್ಟ್ರಿಕಲ್: 25 ಸಿವಿಲ್ : 25 ಇಲೆಕ್ಟ್ರಾನಿಕ್ಸ್‌ : 20 ಕೆಮಿಕಲ್: 05 ಮೆಟಾಲರ್ಜಿ : 05 ಒಟ್ಟು ಹುದ್ದೆಗಳ ಸಂಖ್ಯೆ: 150

ಇಂಜಿನಿಯರ್ ಟ್ರೈನಿ ವಿದ್ಯಾರ್ಹತೆ ವಿವರ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಐದು ವರ್ಷದ ಮಾಸ್ಟರ್ ಡಿಗ್ರಿ / ಡ್ಯುಯಲ್ ಡಿಗ್ರಿ ಪ್ರೋಗ್ರಾಮ್‌ ಅನ್ನು ಪಾಸ್‌ ಮಾಡಿರಬೇಕು.

ಬಿಹೆಚ್‌ಇಎಲ್‌ ಸೂಪರ್‌ವೈಸರ್ ಟ್ರೈನಿಗಳ ಬ್ರ್ಯಾಂಚ್‌ವಾರು ಹುದ್ದೆಗಳ ವಿವರ ಮೆಕ್ಯಾನಿಕಲ್ : 140 ಇಲೆಕ್ಟ್ರಿಕಲ್: 55 ಸಿವಿಲ್ : 35 ಇಲೆಕ್ಟ್ರಾನಿಕ್ಸ್‌ : 20 ಒಟ್ಟು: 250

ಸೂಪರ್‌ವೈಸರ್ ಟ್ರೈನಿ ವಿದ್ಯಾರ್ಹತೆ ವಿವರ

ಪೂರ್ಣಕಾಲಿಕ ಡಿಪ್ಲೊಮವನ್ನು ಶೇಕಡ.65 ಅಂಕಗಳೊಂದಿಗೆ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಪಾಸ್ ಮಾಡಿರಬೇಕು.

ವಯಸ್ಸಿನ ಅರ್ಹತೆ

ಅರ್ಜಿ ಸಲ್ಲಿಸಲು ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಒಬಿಸಿ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು

ರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 01-02-2025

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 28-02-2025

ಅರ್ಜಿ ಸಲ್ಲಿಸುವ ವಿಧಾನ

- ಬಿಹೆಚ್‌ಇಎಲ್‌ ಕರಿಯರ್ ವೆಬ್‌ಪೇಜ್‌ಗೆ ಭೇಟಿ ನೀಡಿ.

- ಓಪನ್ ಆದ ಪೇಜ್‌ನಲ್ಲಿ 'Apply Online >> Candidate Login' ಎಂದಿರುವಲ್ಲಿ ಕ್ಲಿಕ್ ಮಾಡಿ.

- ಹೆಸರು, ಮೊಬೈಲ್ ನಂಬರ್, ಇ-ಮೇಲ್‌ ವಿಳಾಸ ನೀಡಿ ರಿಜಿಸ್ಟ್ರೇಷನ್‌ ಪಡೆಯಿರಿ.

- ನಂತರ ಮತ್ತೆ ಲಾಗಿನ್‌ ಆಗುವ ಮೂಲಕ ವಿದ್ಯಾರ್ಹತೆ, ಕೇಳಲಾದ ಇತರೆ ಸವಿವರ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ ಮಾಹಿತಿ ಸಾಮಾನ್ಯ / ಆರ್ಥಿಕವಾಗಿ ಹಿಂದುಳಿದ / ಒಬಿಸಿ ಅಭ್ಯರ್ಥಿಗಳಿಗೆ ರೂ.795. ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.295. ಅಪ್ಲಿಕೇಶನ್ ಶುಲ್ಕವನ್ನು ಇಂಟರ್‌ನೆಟ್‌ ಬ್ಯಾಂಕಿಂಗ್, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡಬಹುದು.

ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ. ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದು ಆಯ್ಕೆಯಾದವರಿಗೆ ಆಕರ್ಷಕ ಸಂಬಳ ನೀಡಲಾಗುತ್ತದೆ. ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್‌ ನ ಅಧಿಕೃತ ವೆಬ್‌ಸೈಟ್‌ ವಿಳಾಸ: https://www.bhel.com/

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ