Rishabh Pant: ಚಾಂಪಿಯನ್ಸ್ ಟ್ರೋಫಿಯಿಂದ ಪಂತ್ ಹೊರಬೀಳುವ ಸಾಧ್ಯತೆ
ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ನಾಳೆ ದುಬೈ ಅಂಗಳದಲ್ಲಿ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಇತ್ತಂಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇದುವರೆಗೂ ಕೇವಲ ಒಂದು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗೆಲುವು ಸಾಧಿಸಿದೆ.


ಮುಂಬೈ: ಅಭ್ಯಾಸದ ವೇಳೆ ಗಾಯಗೊಂಡ ರಿಷಭ್ ಪಂತ್(Rishabh Pant) ಅವರು ಚಾಂಪಿಯನ್ಸ್ ಟ್ರೋಫಿಯಿಂದ(Champions Trophy) ಹೊರಬೀಳುವ ಸಾಧ್ಯತೆ ಇದೆ ಎಂದು ವದರಿಯಾಗಿದೆ. ಜತೆಗೆ ಪಂತ್ ಸ್ಥಾನಕ್ಕೆ ಮೂವರು ಆಟಗಾರರ ಹೆಸರನ್ನು ಬಿಸಿಸಿಐ ಶಾರ್ಟ್ ಲೀಸ್ಟ್ ಮಾಡಿದೆ ಎಂದು ತಿಳಿದುಬಂದಿದೆ. ಶಿವಂ ದುಬೆ, ರಿಯಾನ್ ಪರಾಗ್ ಮತ್ತು ಇಶಾನ್ ಕಿಶನ್ ಈ ಮೂವರು ಆಟಗಾರರೆಂದು ಹೇಳಲಾಗಿದೆ.
ಪಂತ್ ಕಳೆದ ಭಾನುವಾರ ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಅವರ ಮಂಡಿಗೆ ಚೆಂಡು ಬಡಿದು ಗಾಯಗೊಂಡಿದ್ದರು. ಕೂಡಲೇ ಅವರನ್ನು ವೈದ್ಯಕೀಯ ತಂಡ ಉಪಚರಿಸಿತ್ತು. ಚಿಕಿತ್ಸೆ ಬಳಿಕ ಪಂತ್ ಯಾವುದೇ ಅಭ್ಯಾಸದಲ್ಲಿ ತೊಡಗಿಲ್ಲ. ಅಂದು ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆ ಮಾಡಿಸಿದ್ದ ಕಾಲಿಗೆ ಮತ್ತೆ ಗಾಯಗೊಂಡ ಕಾರಣ ಬಿಸಿಸಿಐ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈ ಬಿಟ್ಟರೂ ಅಚ್ಚರಿಯಿಲ್ಲ.
2023ರ ಏಕದಿನ ವಿಶ್ವಕಪ್ ವೇಳೆ ಪಂತ್ ಅಲಭ್ಯರಾಗಿದ್ದಾಗ ಇಶಾನ್ ಕಿಶನ್ ತಂಡದ ಬ್ಯಾಕ್ ಆಪ್ ಕೀಪರ್ ಆಗಿ ಆಯ್ಕೆಯಾಗಿದ್ದರು. ಕನ್ನಡಿಗ ಕೆ.ಎಲ್ ರಾಹುಲ್ ಸಂಪೂರ್ಣವಾಗಿ ಕೀಪಿಂಗ್ ನಡೆಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ರಾಹುಲ್ ಮೊದಲ ಆಯ್ಕೆಯ ಕೀಪರ್ ಆಗಿದ್ದಾರೆ.
ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಬಹುದೆಂದರೆ ಅವರು ಕೂಡ ಗಾಯದಿಂದ ಬಳಲುತ್ತಿದ್ದಾರೆ. ರಣಜಿ ಅಭ್ಯಾಸ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದರು.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಫರ್ಗುಸನ್: ಜೇಮಿಸನ್ ಬದಲಿ ಆಟಗಾರ
ನಾಳೆ ಭಾರತ-ಬಾಂಗ್ಲಾ ಮೊದಲ ಫೈಟ್
ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ನಾಳೆ ದುಬೈ ಅಂಗಳದಲ್ಲಿ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಇತ್ತಂಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇದುವರೆಗೂ ಕೇವಲ ಒಂದು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗೆಲುವು ಸಾಧಿಸಿದೆ. ಒಟ್ಟಾರೆ ಉಭಯ ತಂಡಗಳು ಏಕದಿನದಲ್ಲಿ 41 ಪಂದ್ಯಗಳನ್ನಾಡಿದೆ. ಈ ಪೈಕಿ ಭಾರತ ಗರಿಷ್ಠ 32 ಪಂದ್ಯ ಗೆದ್ದರೆ, ಬಾಂಗ್ಲಾದೇಶ 8 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಬಲಾಬಲ ನೋಡುವಾಗ ಭಾರತವೇ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಆದರೂ ಸವಾಲನ್ನು ಹಗುರವಾಗಿ ಕಾಣುವಂತಿಲ್ಲ.
ಭಾರತ ತಂಡ
ರೋಹಿತ್ ಶರ್ಮ (ನಾಯಕ), ಶುಭಮಾನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರಿಷಭ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಮೊಹಮದ್ ಶಮಿ, ಅರ್ಷದೀಪ್ ಸಿಂಗ್.