ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡು ಒಂದು ವಾರ ಕಳೆದಿದ್ದು, ಹಳ್ಳಿ- ಹೈದ ಹನುಮಂತ ಟ್ರೋಫಿ ಎತ್ತಿ ಹಿಡಿದರೆ ತ್ರಿವಿಕ್ರಮ್ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಸದ್ಯ ಟಾಪ್ 6 ಫೈನಲಿಸ್ಟ್ಗಳು ದೊಡ್ಮನೆಯಿಂದ ಹೊರಬಂದು ಫುಲ್ ಬ್ಯುಸಿಯಾಗಿದ್ದಾರೆ. ಕೆಲವರು ಇಂಟರ್ವ್ಯೂ ಕೊಡುತ್ತಿದ್ದರೆ ಇನ್ನೂ ಕೆಲವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಭವ್ಯಾ ಗೌಡಾ, ತ್ರಿವಿಕ್ರಮ್, ರಜತ್, ಹನುಮಂತ, ಮಂಜು ಹಾಗೂ ಮೋಕ್ಷಿತಾ ಪೈ ಹೀಗೆ ಎಲ್ಲರೂ ಮಾಧ್ಯಮದ ಮುಂದೆ ಬಂದು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.
ಸದ್ಯ ಮೋಕ್ಷಿತಾ ಪೈ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ತನ್ನ ಬಿಗ್ ಬಾಸ್ ಅನುಭವದ ಕುರಿತು ಮಾತನಾಡಿದ್ದಾರೆ. ಜೊತೆಗೆ ದೊಡ್ಮನೆಯೊಳಗೆ ಇದ್ದಾಗ ಹೊರಗಡೆ ನಡೆದ ಟ್ರೋಲ್ ಕುರಿತು ಕೂಡ ಮಾತನಾಡಿದ್ದಾರೆ. ಮುಖ್ಯವಾಗಿ ಬಿಗ್ ಬಾಸ್ ಮನೆಯೊಳಗೆ ಇದ್ದಾಗ, ಈ ಹಿಂದೆ ಮಗುವನ್ನ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ರು ಎಂಬ ಸುದ್ದಿ ವೈಲರ್ ಆಗಿತ್ತು. 2014ರಲ್ಲಿ ಬಾಲಕಿಯೊಬ್ಬಳನ್ನು ಗೆಳೆಯನ ಜೊತೆಗೂಡಿ ಅಪಹರಣ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅವರು ಜೈಲಿಗೂ ಹೋಗಿ ಬಂದಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. ಮೋಕ್ಷಿತಾ ಮಕ್ಕಳ ಕಳ್ಳಿ ಅಂತಾನೇ ಟ್ರೋಲ್ ಮಾಡಿದ್ದರು. ಅವರು ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಹಳೆಯ ಘಟನೆಯನ್ನು ವೈರಲ್ ಮಾಡಲಾಗಿತ್ತು. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳ ಕಳ್ಳಿ ಎಂದವರ ಮೋಕ್ಷಿತಾ ತಿರುಗೇಟು ನೀಡಿದ್ದಾರೆ.
‘ನಾನು ನಿರಪರಾಧಿ ಎಂದು ಕೋರ್ಟ್ ಹೇಳಾಗಿದೆ. ಹೀಗಿದ್ರೂ ಮತ್ತೆ-ಮತ್ತೆ ಅದೇ ಪ್ರಕರಣದ ಬಗ್ಗೆ ಮಾತನಾಡುತ್ತಾರೆ ಎಂದರೆ ನನ್ನ ಕೆಳಗೆ ಹಾಕೋಕೆ ನೋಡ್ತಿದ್ದಾರೆ ಅಂತ ಅರ್ಥ. ನನ್ನ ಅಭಿಮಾನಿಗಳೇ ಇದಕ್ಕೆಲ್ಲ ಉತ್ತರ ಕೊಟ್ಟಿದ್ದಾರೆ. ನನ್ನ ಅಭಿಮಾನಿಗಳು ನನ್ನ ಮೇಲೆ ಇಟ್ಟಿದ್ದಾರೆ. ಅದಕ್ಕೆ ತುಂಬಾ ಖುಷಿ ಇದೆ. ಒಬ್ಬರನ್ನು ಯಾಕೆ ಕೆಳಗೆ ಹಾಕೋಕೆ ನೋಡ್ತಾರೆ ಅಂತಾ ಗೊತ್ತಿಲ್ಲ. ಅವರಿಗೆ ಇದರಿಂದ ಲಾಭ ಇರಬಹುದು.
ನನ್ನವರಿಗೆ ನಾನು ಏನು ಅಂತ ಗೊತ್ತು. ಈ ಘಟನೆ ನಡೆದಾಗ ಯಾರಿಗೆ ಏನು ತಲುಪಿಸಬೇಕೊ ಅದನ್ನ ನನ್ನ ಅಮ್ಮ ಮಾಡಿದ್ದಾರೆ. ನಾನು ಹೊರಗಡೆ ಬಂದು ಇದರ ಕುರಿತು ಕ್ಲಾಸರಿಫಿಕೇಷನ್ ಕೊಡುತ್ತೇನೆ ಎಂದು ಅವರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ.