Hanumantha BBK 11: ಬಿಗ್ ಬಾಸ್ ವಿನ್ನರ್ ಹನುಮಂತ SSLC ನಲ್ಲಿ ಗಳಿಸಿದ ಅಂಕ ಎಷ್ಟು ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರ
ಸರಾಗವಾಗಿ ಹಾಡು ಹಾಡುವ ಹನುಮಂತು ಇಂಗ್ಲಿಷ್ ಪದ ಉಚ್ಚರಿಸಲು ತೊಳಲಾಡಿ ಬಿಡುತ್ತಾರೆ. ಹೀಗಾಗಿ ಅವರು ಹೆಚ್ಚೇನು ಓದಿಲ್ಲ ಎಂದಿ ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ, ಈ ಸೀದಾ ಸಾದಾ ಹಳ್ಳಿ ಹೈದಾ ಹಾಡಿನಂತೆಯೇ ಶಾಲೆಯ ಕಲಿಕಾ ವಿಷಯದಲ್ಲಿಯೂ ಎತ್ತಿದ ಕೈ.
![Hanumantha SSLC Marks](https://cdn-vishwavani-prod.hindverse.com/media/images/Hanumantha_SSLC_Marks.max-1280x720.jpg)
![Profile](https://vishwavani.news/static/img/user.5c7ca8245eec.png)
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಟ್ರೋಫಿ ಗೆದ್ದಿರುವ ಹನುಮಂತ ಲಮಾಣಿ ಈ ಫುಲ್ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ಸ್ನಲ್ಲಿ ಪಾಲ್ಗೊಂಡಿದ್ದಾರೆ. ಇದರ ಮಧ್ಯೆ ಹುಟ್ಟೂರಿಗೆ ತೆರಳಿ ಅಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ ರೋಡ್ ಶೋ ನಡೆಸಿದರು. ಇದೀಗ ಮತ್ತೆ ಬೆಂಗಳೂರಿನತ್ತ ಹನುಮಂತ ಮುಖ ಮಾಡಿದ್ದಾರೆ. ಜೊತೆಗೆ ಹನುಮಂತ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಕೂಡ ಬರುತ್ತಿವೆಯಂತೆ.
ಇವೆಲ್ಲದರ ಮಧ್ಯೆ ಸದ್ಯ ಹನುಮಂತ ಅವರು ಎಸ್ಎಸ್ಎಲ್ಸಿಯಲ್ಲಿ ಗಳಿಸಿದ ಅಂಕಗಳ ಕುರಿತ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹನುಮಂತ ಲಮಾಣಿ ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ. ಕುರಿಗಾಹಿಯಾಗಿದ್ದ ಹನುಮಂತ, ತನ್ನ ಗಾಯನದಿಂದ ಮೋಡಿ ಮಾಡಿದ್ದರು. ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದ ಹನುಮಂತ ಗಮನ ಸೆಳೆದಿದ್ದರು. ಹೆಚ್ಚಿನವರು ಅಂದುಕೊಂಡಿದ್ದಾರೆ ಹನುಮಂತ ಅವರು ಶಾಲೆಗೇ ಹೋಗಿಲ್ಲ ಎಂದು.
ಸರಾಗವಾಗಿ ಹಾಡು ಹಾಡುವ ಹನುಮಂತು ಇಂಗ್ಲಿಷ್ ಪದ ಉಚ್ಚರಿಸಲು ತೊಳಲಾಡಿ ಬಿಡುತ್ತಾರೆ. ಹೀಗಾಗಿ ಅವರು ಹೆಚ್ಚೇನು ಓದಿಲ್ಲ ಎಂದಿ ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ, ಈ ಸೀದಾ ಸಾದಾ ಹಳ್ಳಿ ಹೈದಾ ಹಾಡಿನಂತೆಯೇ ಶಾಲೆಯ ಕಲಿಕಾ ವಿಷಯದಲ್ಲಿಯೂ ಎತ್ತಿದ ಕೈ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇವರು ಚಿಲ್ಲೂರು ಬಡ್ನಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರು ಎಂದರೆ ನಂಬಲೇ ಬೇಕು.
ಹೌದು.. ಹನುಮಂತ ಹಾಡುವುದರಲ್ಲಿ ಮಾತ್ರ ಅಲ್ಲ ಓದುವುದರಲ್ಲೂ ಮೇಲುಗೈ ಸಾಧಿಸಿದ್ದಾರೆ. ಹನುಮಂತ ಉನ್ನತ ಮಟ್ಟದ ವಿಧ್ಯಾಭ್ಯಾಸ ಪಡೆಯಲು ಸಾಧ್ಯವಾಗಿಲ್ಲ ನಿಜ. ಆದರೂ ಕೂಡ ಓದಿದಷ್ಟು ಉತ್ತಮ ವಿದ್ಯಾರ್ಥಿ ಅಂತಲೇ ಗುರುತಿಸಿಕೊಂಡಿದ್ದಾರೆ. ಹನುಮಂತ ಹಾಡಿನಲ್ಲಿ ಮಾತ್ರವಲ್ಲ ಶಾಲೆಯಲ್ಲೂ ತುಂಬಾ ಚೆನ್ನಾಗಿ ಓದಿ ಸೈ ಎನಿಸಿಕೊಂಡಿದ್ದಾರೆ.
ಹನುಮಂತ ತನ್ನ ಹುಟ್ಟೂರಿನಲ್ಲೇ ಎಸ್‌ಎಸ್‌ಎಲ್‌ಸಿಯನ್ನು ಮುಗಿಸಿದ್ದಾರೆ. ಹಾವೇರಿಯ ಚಿಲ್ಲೂರು ಬಡ್ನಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಬಾಹ್ಯ ವಿದ್ಯಾರ್ಥಿಯಾಗಿ 2020-21ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 532 ಅಂಕ ಗಳಿಸಿದ್ದಾರೆ ಹನುಮಂತ. ಇವರ ಓದು, ಕಲಿಕೆ, ಗುಣ ನಡತೆಯ ಬಗ್ಗೆ ಶಾಲೆಯ ಶಿಕ್ಷಕರಿಗೂ ಹೆಮ್ಮೆ ಇದೆ. ಊರಿಗೆ ಬಂದಾಗಲೆಲ್ಲ ಹನುಮಂತ ಅವರು ಶಾಲೆಗೆ ಭೇಟಿ ನೀಡುತ್ತಾರಂತೆ.
Bhavya Gowda: Boys vs Girls ಶೋನಿಂದ ಭವ್ಯಾ ಗೌಡ ಹೊರಬರಲು ಕಾರಣ ಬಹಿರಂಗ: ಇಲ್ಲಿದೆ ನೋಡಿ ಮಾಹಿತಿ