BBK 11 TRP: ಬಿಗ್ ಬಾಸ್ ಫಿನಾಲೆಗೆ ಸಿಕ್ಕ TRP ಎಷ್ಟು ಗೊತ್ತೇ?: ದಾಖಲೆ ಬರೆದ ಹನುಮಂತ ವಿನ್ ಆದ ಎಪಿಸೋಡ್
ಇದೀಗ ಗ್ರ್ಯಾಂಡ್ ಫಿನಾಲೆ ದಿನ ಕೂಡ ಬಿಗ್ ಬಾಸ್ ಟಿಆರ್ಪಿ ವಿಚಾರದಲ್ಲಿ ದಾಖಲೆ ಬರೆದಿದೆ. ಅದರಲ್ಲೂ ಹನುಮಂತ ಕಪ್ ಎತ್ತಿ ಹಿಡಿದ ಭಾನುವಾರದ ಎಪಿಸೋಡ್ಗೆ ಅದ್ಭುತ ಪ್ರತಿಕ್ರಿಯೆ ಬಂದಿದೆ. ಶನಿವಾರದ ಎಪಿಸೋಡ್ 9.9 ಟಿವಿಆರ್ ಭಾನುವಾರದ ಎಪಿಸೋಡ್ ಬರೋಬ್ಬರಿ 13.7 ಟಿವಿಆರ್ ಪಡೆದುಕೊಂಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡು ಸುಮಾರು ಒಂದೂವರೆ ವಾರ ಕಳೆದಿದೆ. ಈ ಬಾರಿಯ ಸೀಸನ್ನಲ್ಲಿ ಹಳ್ಳಿ ಹೈದ ಹನುಮಂತ ಕಮಾಣಿ 50 ಲಕ್ಷ ರೂಪಾಯಿ ಜೊತೆಗೆ ಟ್ರೋಫಿ ಗೆದ್ದರೆ, ತ್ರಿವಿಕ್ರಮ್ ಅವರು ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ಈ ಬಾರಿಯ ಬಿಗ್ ಬಾಸ್ ಅನೇಕ ದಾಖಲೆ ಸೃಷ್ಟಿಸಿದೆ. ಅದು ಟಿಆರ್ಪಿ ವಿಚಾರದಲ್ಲೂ ಇದೆ. ಶೋ ಆರಂಭವಾದಾಗ ಬಿಗ್ ಬಾಸ್ಗೆ ದೊಡ್ಡ ಮಟ್ಟದ ಟಿಆರ್ಪಿ ಇರಲಿಲ್ಲ. ಪ್ರತಿದಿನ ಮನೆಯೊಳಗೆ ಬರೀ ಜಗಳಗಳೇ ತುಂಬಿತ್ತು. ಕಿಚ್ಚ ಸುದೀಪ್ ಬರುವ ವೀಕೆಂಡ್ನಲ್ಲಿ ಮಾತ್ರ ಟಿಆರ್ಪಿ ಕೊಂಚ ಅಧಿಕವಿತ್ತು.
ಲಾಯರ್ ಜಗದೀಶ್ ಮನೆಯಿಂದ ಹೊರಹೋಗಿ ಹನುಮಂತ ಲಮಾಣಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಳಿಕ ಬಿಗ್ ಬಾಸ್ ಕನ್ನಡ 11 ಟಿಆರ್ಪಿ ಗಗನಕ್ಕೇರಿತು. ವೀಕೆಂಡ್ನಲ್ಲಿ ಕೂಡ ವಾರದ ಕತೆ ಮತ್ತು ಸೂಪರ್ ಸಂಡೇ ಎಪಿಸೋಡ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂತು. ಇದೀಗ ಗ್ರ್ಯಾಂಡ್ ಫಿನಾಲೆ ದಿನ ಕೂಡ ಬಿಗ್ ಬಾಸ್ ಟಿಆರ್ಪಿ ವಿಚಾರದಲ್ಲಿ ದಾಖಲೆ ಬರೆದಿದೆ. ಅದರಲ್ಲೂ ಹನುಮಂತ ಕಪ್ ಎತ್ತಿ ಹಿಡಿದ ಭಾನುವಾರದ ಎಪಿಸೋಡ್ಗೆ ಅದ್ಭುತ ಪ್ರತಿಕ್ರಿಯೆ ಬಂದಿದೆ.
ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆಯ ಶನಿವಾರದ ಎಪಿಸೋಡ್ 9.9 ಟಿವಿಆರ್ ಬಂದಿದೆ. ಅದೇ ಭಾನುವಾರದ ಎಪಿಸೋಡ್ ಬರೋಬ್ಬರಿ 13.7 ಟಿವಿಆರ್ ಪಡೆದುಕೊಂಡಿದೆ. ಈ ಮೂಲಕ ಈ ರಿಯಾಲಿಟಿ ಶೋ ದಾಖಲೆಯ ಟಿಆರ್ಪಿ ಪಡೆದುಕೊಂಡಿದೆ. ಕಳೆದ ಸೀಸನ್ಗಿಂತ ಈ ಸೀಸನ್ ಉತ್ತಮ ಟಿಆರ್ಪಿ ಪಡೆದು ಸೀಸನ್ನ ಕೊನೆಗೊಳಿಸಿದೆ.
ಸೀರಿಯಲ್ಗಳ ವಿಚಾರಕ್ಕೆ ಬರೋದಾದರೆ ಜೀ ಕನ್ನಡದ ಯುವ ಜೋಡಿಯ ನವಿರು ಕಥೆ ಶ್ರಾವಣಿ ಸುಬ್ರಮಣ್ಯ. ಮದುವೆ ವಿಚಾರವಾಗಿ ಸುದ್ದಿಯಲ್ಲಿರುವ ಈ ಸೀರಿಯಲ್ ಇದೀಗ ಮೂರನೇ ವಾರದ ಟಿಆರ್‌ಪಿಯಲ್ಲಿ ಟಾಪ್ ಬಂದಿದೆ. 9.5 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿದೆ. ಅಂತೆಯೆ ಇತ್ತೀಚೆಗೆ ಪ್ರಸಾರ ಆರಂಭಿಸಿರುವ ನಾ ನಿನ್ನ ಬಿಡಲಾರೆ ಧಾರಾವಾಹಿ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ. ಈ ಧಾರಾವಾಹಿ, ನಗರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ. ಓಪನಿಂಗ್ ವೀಕ್ನಲ್ಲಿ ಇಷ್ಟು ಒಳ್ಳೆಯ ಟಿಆರ್ಪಿ ಪಡೆದುಕೊಂಡಿದ್ದು ತಂಡಕ್ಕೆ ಖುಷಿ ನೀಡಿದೆ.
ಜೀ ಕನ್ನಡದಲ್ಲಿ ಒಂದು ಗಂಟೆಯ ಅವಧಿಯ ಹಿಟ್ ಸೀರಿಯಲ್ ಲಕ್ಷ್ಮೀ ನಿವಾಸ, ಸದಾ ಮೊದಲ ಸ್ಥಾನದಲ್ಲಿಯೇ ಇರುತ್ತಿತ್ತು. ಇದೀಗ ಇತ್ತೀಚಿನ ಕೆಲ ವಾರಗಳಿಂದ ಅದೇ ಸೀರಿಯಲ್‌ಗೆ ಟಫ್ ಕಾಂಪಿಟೇಷನ್ ನೀಡುತ್ತಿವೆ ಹಲವು ಸೀರಿಯಲ್. ಇದು ಒಟ್ಟಾರೆಯಾಗಿ ಎರಡನೇ ಸ್ಥಾನದಲ್ಲಿದೆ.
ಅತ್ತ ಸೀತಾ ರಾಮ ಧಾರಾವಾಹಿಯ ಸಮಯ ಬದಲಾವಣೆ ಆಗಿದೆ. ಈ ಧಾರಾವಾಹಿಯನ್ನು ರಾತ್ರಿ 9.30 ರಿಂದ ಸಂಜೆ 5.30ಕ್ಕೆ ಶಿಫ್ಟ್ ಮಾಡಲಾಗಿದೆ. ಇದು ಧಾರಾವಾಹಿ ಟಿಆರ್ಪಿ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಧಾರಾವಾಹಿಯ ಟಿಆರ್ಪಿ ಮತ್ತಷ್ಟು ಕುಸಿದಿದೆ. ಜೀ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತಿರುವ ಬ್ರಹ್ಮಗಂಟು ಸೀರಿಯಲ್ 6.3 ಟಿಆರ್‌ಪಿ ಪಡೆದುಕೊಂಡಿದೆ. ಭಾಗ್ಯಲಕ್ಷ್ಮೀ ಸೀರಿಯಲ್ ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ. ಈ ಸೀರಿಯಲ್ 5.1 ರೇಟಿಂಗ್ ಪಡೆದು 9ನೇ ಸ್ಥಾನದಲ್ಲಿದೆ. ನಿನಗಾಗಿ ಸೀರಿಯಲ್ ಕೂಡ 5.0 ಟಿಆರ್‌ಪಿ ಪಡೆದು ಪಾತಾಳಕ್ಕೆ ಕುಸಿದಿದೆ.
Mokshitha Pai, BBK 11: ತಪ್ಪೇ ಮಾಡಿಲ್ಲ ಕ್ಲಾರಿಫಿಕೇಷನ್ ಯಾಕೆ ಕೊಡ್ಬೇಕು?: ಮೋಕ್ಷಿತಾ ಖಡಕ್ ಮಾತು