Tejaswi Surya: ಮ್ಯಾರಥಾನ್‌ನಲ್ಲಿ ಯೂತ್ ಐಕಾನ್ ತೇಜಸ್ವಿ ಸೂರ್ಯ ಭಾಗಿ;ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಿದ ಸಂಸದ
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮುಂಬೈನಲ್ಲಿ ನಡೆದ ಟಾಟಾ ಮುಂಬೈನ ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದು,ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಮುಂಬೈ: ಇತ್ತೀಚೆಗಷ್ಟೇ ಸಂಸದ ತೇಜಸ್ವಿ ಸೂರ್ಯ(Tejaswi Surya) ಗೋವಾದಲ್ಲಿ ಆಯೋಜಿಸಲಾಗಿದ್ದ ಐರನ್‌ಮ್ಯಾನ್ 70.3 ಚಾಲೆಂಜ್‌ನಲ್ಲಿನ ಎಲ್ಲ ಮೂರೂ ವಿಭಾಗಗಳನ್ನು ಪೂರ್ಣಗೊಳಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮುಂಬೈನಲ್ಲಿ ನಡೆದ ಟಾಟಾ ಮುಂಬೈನ ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದು,ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಮಾತನಾಡಿರುವ ತೇಜಸ್ವಿ, ಟಾಟಾ ಮುಂಬೈ ಮ್ಯಾರಥಾನ್ ವಿಶ್ವದ ಅತ್ಯುತ್ತಮ ಮ್ಯಾರಥಾನ್‌ಗಳಲ್ಲಿ ಒಂದಾಗಿದೆ. ಇದು ಶಕ್ತಿ ಸ್ಥಿತಿಸ್ಥಾಪಕತ್ವ ಶಿಸ್ತು ಮತ್ತು ಸಮರ್ಪಣಾ ಮನೋಭಾವವನ್ನು ವೃದ್ಧಿಸುತ್ತದೆ. ಇದರಲ್ಲಿ ಭಾಗವಹಿಸಿದ್ದು ಬಹಳ ಸಂತೋಷವಾಗಿದೆ ಎಂದರು.
#WATCH | Mumbai: Maharashtra Governor CP Radhakrishnan flagged off the Tata Mumbai Marathon 2025 from Chhatrapati Shivaji Maharaj Terminus (CSMT) pic.twitter.com/Bf7x1WH4lJ
— ANI (@ANI) January 19, 2025
ಎಲ್ಲಾ ಯುವಕರು ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ನಾನು ಕೇಳಿಕೊಳ್ಳುತ್ತೇನೆ, ದೈಹಿಕ ಚಟುವಟಿಕೆಯಿಂದಾಗಿ ಶಕ್ತಿ, ಶಿಸ್ತು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ರಾಷ್ಟ್ರವನ್ನು ಮಾಡಲು ಉತ್ತಮ ಮಾರ್ಗವೆಂದರೆ ಮೊದಲು ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ್ದ ಸಂಸದ
ಕಳೆದ ಒಂದಷ್ಟು ತಿಂಗಳುಗಳ ಹಿಂದೆಯಷ್ಟೇ ಗೋವಾದಲ್ಲಿ ನಡೆದ ವಾಕಿಂಗ್, ಸ್ವಿಮ್ಮಿಂಗ್ ಹಾಗೂ ಸೈಕಲ್ ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪಾಲ್ಗೊಂಡು 1,900 ಮೀಟರ್ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟದ ಮೂರು ವಿಭಾಗಗಳಲ್ಲಿ ಭಾಗಿಯಾಗಿದ್ದರು. ಅವರು 8 ಗಂಟೆ, 27 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಈ ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದರು.
ಈ ಸುದ್ದಿಯನ್ನೂ ಓದಿ:Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ
ಗೋವಾದಲ್ಲಿ ನಡೆದ ಐರನ್ ಮ್ಯಾನ್ 70.3 ಚಾಲೆಂಜ್‌ನಲ್ಲಿ ತೇಜಸ್ವಿ ಸೂರ್ಯ ಅವರು ಇತರೆ ಸ್ಪರ್ಧಿಗಳ ಜತೆ ಒಟ್ಟು 113 ಕಿಮೀಯಷ್ಟು ದೂರ ಕ್ರಮಿಸಿದ್ದರು. ಟ್ರಿಯಾಥ್ಲಾನ್ ಸವಾಲಿನಲ್ಲಿ ಪಾಲ್ಗೊಂಡ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ 33 ವರ್ಷದ ತೇಜಸ್ವಿ ಸೂರ್ಯ ಪಾತ್ರರಾಗಿದ್ದರು. ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.