#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BOB Recruitment 2025: ಬ್ಯಾಂಕ್‌ ಆಫ್‌ ಬರೋಡಾದ 1,267 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

BOB Recruitment 2025: 1,267 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಬ್ಯಾಂಕ್‌ ಆಫ್‌ ಬರೋಡಾ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜ. 17 ಎಂದು ಹೇಳಲಾಗಿತ್ತು. ಇದೀಗ ಕೊನೆಯ ದಿನಾಂಕವನ್ನು ಜ. 27ರ ತನಕ ವಿಸ್ತರಿಸಲಾಗಿದೆ. ಮ್ಯಾನೇಜರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಆಫೀಸರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಮ್ಯಾನೇಜರ್‌, ಮ್ಯಾನೇಜರ್‌-ಸೇಲ್ಸ್‌ ಸೇರಿದಂತೆ ಒಟ್ಟು 1,267 ಹುದ್ದೆಗಳಿಗೆ. ಪದವಿ, ಸ್ನಾತಕೋತ್ತರ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಬ್ಯಾಂಕ್‌ ಆಫ್‌ ಬರೋಡಾದ 1,267 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಸಾಂದರ್ಭಿಕ ಚಿತ್ರ

Profile Ramesh B Jan 19, 2025 3:54 PM

ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಗುಡ್‌ನ್ಯೂಸ್‌ ಹೊರ ಬಿದ್ದಿದೆ. ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ದೇಶದ ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಬರೋಡಾ (Bank of Baroda) ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿದೆ (BOB Recruitment 2025). ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜ. 17 ಎಂದು ಹೇಳಲಾಗಿತ್ತು. ಇದೀಗ ಕೊನೆಯ ದಿನಾಂಕವನ್ನು ಜ. 27ರ ತನಕ ವಿಸ್ತರಿಸಲಾಗಿದೆ. ಮ್ಯಾನೇಜರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಆಫೀಸರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಮ್ಯಾನೇಜರ್‌, ಮ್ಯಾನೇಜರ್‌-ಸೇಲ್ಸ್‌ ಸೇರಿದಂತೆ ಒಟ್ಟು 1,267 ಹುದ್ದೆಗಳಿಗೆ. ಪದವಿ, ಸ್ನಾತಕೋತ್ತರ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಆಫೀಸರ್‌ - 150 ಹುದ್ದೆ

ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಮ್ಯಾನೇಜರ್‌ - 50 ಹುದ್ದೆ

ಮ್ಯಾನೇಜರ್ - ಸೇಲ್ಸ್ - 450 ಹುದ್ದೆ

ಮ್ಯಾನೇಜರ್ - ಕ್ರೆಡಿಟ್ ಅನಾಲಿಸ್ಟ್ - 78 ಹುದ್ದೆ

ಸೀನಿಯರ್ ಮ್ಯಾನೇಜರ್ - ಕ್ರೆಡಿಟ್ ಅನಾಲಿಸ್ಟ್ - 46 ಹುದ್ದೆ

ಸೀನಿಯರ್ ಮ್ಯಾನೇಜರ್ - ಎಂಎಸ್ಎಂಇ ರಿಲೇಷನ್‌ಶಿಪ್‌ - 205 ಹುದ್ದೆ

ಹೆಡ್ - ಎಸ್ಎಂಇ ಸೆಲ್ - 12 ಹುದ್ದೆ

ಆಫೀಸರ್ - ಸೆಕ್ಯುರಿಟಿ ಅನಾಲಿಸ್ಟ್ - 5 ಹುದ್ದೆ

ಮ್ಯಾನೇಜರ್ - ಸೆಕ್ಯುರಿಟಿ ಅನಾಲಿಸ್ಟ್ - 2 ಹುದ್ದೆ

ಸೀನಿಯರ್ ಮ್ಯಾನೇಜರ್ - ಸೆಕ್ಯುರಿಟಿ ಅನಾಲಿಸ್ಟ್ - 2 ಹುದ್ದೆ

ಟೆಕ್ನಿಕಲ್ ಆಫೀಸರ್-ಸಿವಿಲ್ ಎಂಜಿನಿಯರ್ - 6 ಹುದ್ದೆ

ಟೆಕ್ನಿಕಲ್ ಮ್ಯಾನೇಜರ್ - ಸಿವಿಲ್ ಎಂಜಿನಿಯರ್ - 2 ಹುದ್ದೆ

ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ - ಸಿವಿಲ್ ಎಂಜಿನಿಯರ್ - 4 ಹುದ್ದೆ

ಟೆಕ್ನಿಕಲ್ ಆಫೀಸರ್-ಎಲೆಕ್ಟ್ರಿಕಲ್ ಎಂಜಿನಿಯರ್ - 4 ಹುದ್ದೆ

ಟೆಕ್ನಿಕಲ್ ಮ್ಯಾನೇಜರ್ - ಎಲೆಕ್ಟ್ರಿಕಲ್ ಎಂಜಿನಿಯರ್ - 2 ಹುದ್ದೆ

ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ - ಎಲೆಕ್ಟ್ರಿಕಲ್ ಎಂಜಿನಿಯರ್ - 2 ಹುದ್ದೆ

ಟೆಕ್ನಿಕಲ್ ಮ್ಯಾನೇಜರ್ - ಆರ್ಕಿಟೆಕ್ಟ್ - 2 ಹುದ್ದೆ

ಸೀನಿಯರ್ ಮ್ಯಾನೇಜರ್ - ಸಿ & ಐಸಿ ರಿಲೇಷನ್‌ಶಿಪ್‌ ಮ್ಯಾನೇಜರ್ - 10 ಹುದ್ದೆ

ಚೀಫ್ ಮ್ಯಾನೇಜರ್ - ಸಿ & ಐಸಿ ರಿಲೇಷನ್‌ಶಿಪ್‌ ಮ್ಯಾನೇಜರ್ - 5 ಹುದ್ದೆ

ಸೀನಿಯರ್ ಮ್ಯಾನೇಜರ್-ಸಿ & ಐಸಿ ಕ್ರೆಡಿಟ್ ಅನಾಲಿಸ್ಟ್ - 5 ಹುದ್ದೆ

ಚೀಫ್ ಮ್ಯಾನೇಜರ್ - ಸಿ & ಐಸಿ ಕ್ರೆಡಿಟ್ ಅನಾಲಿಸ್ಟ್ - 10 ಹುದ್ದೆ

ಸೀನಿಯರ್ ಮ್ಯಾನೇಜರ್ - ಬಿಸಿನೆಸ್ ಫೈನಾನ್ಸ್ - 5 ಹುದ್ದೆ

ಚೀಫ್ ಮ್ಯಾನೇಜರ್ - ಬಿಸಿನೆಸ್ ಫೈನಾನ್ಸ್ - 5 ಹುದ್ದೆ

ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ - ಬಿಸಿನೆಸ್ ಫೈನಾನ್ಸ್ - 3 ಹುದ್ದೆ

ಸೀನಿಯರ್ ಡೆವಲಪರ್ ಫುಲ್ ಸ್ಟ್ಯಾಕ್ ಜಾವಾ - 26 ಹುದ್ದೆ

ಡೆವಲಪರ್ ಫುಲ್ ಸ್ಟ್ಯಾಕ್ ಜಾವಾ - 20 ಹುದ್ದೆ

ಸೀನಿಯರ್ ಡೆವಲಪರ್ - ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್‌ - 10 ಹುದ್ದೆ

ಡೆವಲಪರ್ - ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್‌ - 10 ಹುದ್ದೆ

ಕ್ಲೌಡ್ ಎಂಜಿನಿಯರ್ - 6 ಹುದ್ದೆ

ಇಟಿಎಲ್ ಡೆವಲಪರ್ - 7 ಹುದ್ದೆ

ಸೀನಿಯರ್ ಇಟಿಎಲ್ ಡೆವಲಪರ್ - 5 ಹುದ್ದೆ

ಎಐ ಎಂಜಿನಿಯರ್ - 20 ಹುದ್ದೆ

ಸೀನಿಯರ್ ಎಐ ಎಂಜಿನಿಯರ್ - 4 ಹುದ್ದೆ

ಎಪಿಐ ಡೆವಲಪರ್ - 6 ಹುದ್ದೆ

ಸೀನಿಯರ್ ಎಪಿಐ ಡೆವಲಪರ್ - 8 ಹುದ್ದೆ

ನೆಟ್‌ವರ್ಕ್‌ ನಿರ್ವಾಹಕ - 5 ಹುದ್ದೆ

ಸರ್ವರ್ ನಿರ್ವಾಹಕ (ಲಿನಕ್ಸ್ & ಯುನಿಕ್ಸ್)- 10 ಹುದ್ದೆ

ಸೀನಿಯರ್ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ (ಒರಾಕಲ್)- 6 ಹುದ್ದೆ

ಡೇಟಾಬೇಸ್ ನಿರ್ವಾಹಕ - 8 ಹುದ್ದೆ

ಸೀನಿಯರ್‌ ಸ್ಟೊರೇಜ್‌ ನಿರ್ವಾಹಕ ಮತ್ತು ಬ್ಯಾಕಪ್ - 2 ಹುದ್ದೆ

ಸ್ಟೊರೇಜ್‌ ನಿರ್ವಾಹಕ ಮತ್ತು ಬ್ಯಾಕಪ್ 6 ಹುದ್ದೆ

ಪೋಸ್ಟ್‌ಗ್ರೆಸ್‌ ನಿರ್ವಾಹಕ - 2 ಹುದ್ದೆ

ಫಿನಾಕಲ್ ಡೆವಲಪರ್ - 10 ಹುದ್ದೆ

ಸೀನಿಯರ್ ಫಿನಾಕಲ್ ಡೆವಲಪರ್ - 6 ಹುದ್ದೆ

ಸೀನಿಯರ್ ಮ್ಯಾನೇಜರ್-ಡೇಟಾ ಸೈಂಟಿಸ್ಟ್ - 2 ಹುದ್ದೆ

ಚೀಫ್ ಮ್ಯಾನೇಜರ್ - ಡೇಟಾ ಸೈಂಟಿಸ್ಟ್ - 1 ಹುದ್ದೆ

ಡೇಟಾ ವೇರ್‌ಹೌಸ್‌ ಕಾರ್ಯಾಚರಣೆ - 3 ಹುದ್ದೆ

ನೆಟ್‌ ಡೆವಲಪರ್ - 2 ಹುದ್ದೆಐಟಿ ಇಂಜಿನಿಯರ್ - 1 ಹುದ್ದೆ

ಡಿಕ್ಯೂ ಅನಾಲಿಸ್ಟ್‌ - 1 ಹುದ್ದೆ

ಡೇಟಾ ಪ್ರೊಫೈಲಿಂಗ್ - 1 ಹುದ್ದೆ

ಮ್ಯಾನೇಜರ್ - ನಿಯಂತ್ರಕ ರಿಟರ್ನ್ಸ್‌ನ ಆಟೋಮೇಷನ್ ಮತ್ತು ನಿರ್ವಹಣೆ - 3 ಹುದ್ದೆ

ಸೀನಿಯರ್ ಮ್ಯಾನೇಜರ್ - ಇನ್ಫರ್ಮೇಷನ್‌ ಸೆಕ್ಯುರಿಟಿ ಆಫೀಸರ್ - 1 ಹುದ್ದೆ

ಚೀಫ್ ಮ್ಯಾನೇಜರ್ - ಮಾಹಿತಿ ಭದ್ರತಾ ಅಧಿಕಾರಿ - 1 ಹುದ್ದೆ

ಸೀನಿಯರ್ ಮ್ಯಾನೇಜರ್ - ಡೇಟಾ ಗೌಪ್ಯತೆ ಅಧಿಕಾರಿ - 1 ಹುದ್ದೆ

ಚೀಫ್ ಮ್ಯಾನೇಜರ್ - ಡೇಟಾ ಗೌಪ್ಯತೆ ಅನುಸರಣೆ ಅಧಿಕಾರಿ - 1 ಹುದ್ದೆ

ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್‌ & ಮೆಟಾಡೇಟಾ - 2 ಹುದ್ದೆ

ಸೀನಿಯರ್ ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್‌ & ಮೆಟಾಡೇಟಾ - 1 ಹುದ್ದೆ

ಚೀಫ್ ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್‌ & ಮೆಟಾಡೇಟಾ - 1 ಹುದ್ದೆ ಮ್ಯಾನೇಜರ್ - ಕ್ಯೂಲಿಕ್ ಸೆನ್ಸ್ ಡೆವಲಪರ್ - 2 ಹುದ್ದೆ

ಸೀನಿಯರ್ ಮ್ಯಾನೇಜರ್ - ಕ್ಯೂಲಿಕ್ ಸೆನ್ಸ್ ಡೆವಲಪರ್ - 1 ಹುದ್ದೆ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಎಂ, ಬಿ.ಇ ಅಥವಾ ಬಿ.ಟೆಕ್‌, ಎಂಸಿಎ, ಎಂ.ಎಸ್‌ಸಿ, ಪಿಜಿಡಿಎಂ ಮತ್ತು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ವಯೋಮಿತಿ ವಿವಿಧ ಹುದ್ದೆಗಳಿಗೆ ಅನುಗುಣವಾಗಿ 22 ವರ್ಷಗಳಿಂದ 45 ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಸಾಮಾನ್ಯ/ಇಡಬ್ಲ್ಯುಎಸ್‌/ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 600 ರೂ. ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್‌.

ಆಯ್ಕೆ ವಿಧಾನ

ಆನ್‌ಲೈನ್‌ ಟೆಸ್ಟ್‌, ಸೈಕೋಮೆಟ್ರಿಕ್‌ ಟೆಸ್ಟ್‌ (Psychometric Test), ಗ್ರೂಪ್‌ ಡಿಸ್ಕಷನ್‌, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ದಿನಾಂಕ ವಿಸ್ತರಣೆಯ ಪ್ರಕಟಣೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

* ಅರ್ಜಿ ಸಲ್ಲಿಸುವ ವಿಧಾನ
(
https://ibpsonline.ibps.in/bobsodec24/)

* ಹೆಸರು ನೋಂದಾಯಿಸಿ.

* ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.

* ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.

* ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.

* ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.

* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಈ ಸುದ್ದಿಯನ್ನೂ ಓದಿ: BEL Recruitment 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿದೆ 350 ಹುದ್ದೆ; ಹೀಗೆ ಅಪ್ಲೈ ಮಾಡಿ