Actor Darshan: ದರ್ಶನ್ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ಮುಂದಾದ ಖ್ಯಾತ ಕಾಂಗ್ರೆಸ್ ನಾಯಕ!
ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ತಮ್ಮ ಪರವಾಗಿ ವಾದಿಸುವಂತೆ ಕಪಿಲ್ ಸಿಬಲ್ ಭೇಟಿಯಾಗಿ ದರ್ಶನ್ ಕುಟುಂಬಸ್ಥರು ಚರ್ಚೆ ನಡೆಸಿದ್ದಾರೆ.

ನಟ ದರ್ಶನ್

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ತಮ್ಮ ಪರವಾಗಿ ವಾದಿಸುವಂತೆ ನಟ ದರ್ಶನ್ (Actor Darshan) ಹಾಗೂ ಕುಟುಂಬ ಖ್ಯಾತ ಕಾಂಗ್ರೆಸ್ ನಾಯಕ, ಸುಪ್ರೀಂ ಕೋರ್ಟ್‌ನ (Supreme Court) ನ್ಯಾಯವಾದಿ ಕಪಿಲ್ ಸಿಬಲ್ (Congress leader Kapil Sibal) ಅವರ ಮೊರೆ ಹೋಗಿದ್ದಾರೆ. ತಮ್ಮ ಪರ ವಾದಿಸುವಂತೆ ದರ್ಶನ್ ಕುಟುಂಬದವರು ಕಪಿಲ್ ಸಿಬಲ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ ಎಂದು ತಿಳಿದುಬಂದಿದ್ದು, ದರ್ಶನ್ ಪರ ವಾದಿಸಲು ಕಪಿಲ್ ಸಿಬಲ್ ಒಪ್ಪಿದ್ದಾರೆ ಎನ್ನಲಾಗಿದೆ.
ದರ್ಶನ್ & ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಈಗಾಗಲೇ ದರ್ಶನ್, ಪವಿತ್ರಾ ಗೌಡ ಮತ್ತಿತರ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ತಮ್ಮ ಪರವಾಗಿ ವಾದಿಸುವಂತೆ ಕಪಿಲ್ ಸಿಬಲ್ ಭೇಟಿಯಾಗಿ ದರ್ಶನ್ ಕುಟುಂಬಸ್ಥರು ಚರ್ಚೆ ನಡೆಸಿದ್ದಾರೆ.
ಸಿಬಲ್ ಅವರನ್ನು ಭೇಟಿಯಾದ ದರ್ಶನ್ ಕುಟುಂಬಸ್ಥರು ಹೈಕೋರ್ಟ್ನಲ್ಲಿ ನಡೆದ ವಾದ ಪ್ರತಿವಾದ, ಕೇಸ್ ಹಿಸ್ಟರಿ ಮಾಹಿತಿ ನೀಡಿದ್ದಾರೆ. ಮಾರ್ಚ್ 18ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆ ನಿಗದಿಯಾಗಿದೆ. ಅಂದು ದರ್ಶನ್ ಸೇರಿ 7 ಆರೋಪಿಗಳ ಪರ ವಕೀಲ ಕಪಿಲ್ ಸಿಬಲ್ ವಾದಿಸಲಿದ್ದಾರೆ ಎಂದು ಗೊತ್ತಾಗಿದೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ2 ಆರೋಪಿ ಆಗಿದ್ದಾರೆ. ಅವರು ಬೆನ್ನು ನೋವಿನ ಕಾರಣ ಹೇಳಿ ಜಾಮೀನು ಪಡೆದಿದ್ದರು. ಇದನ್ನು ಸರ್ಕಾರಿ ಪರ ವಕೀಲರು ವಿರೋಧಿಸಿದ್ದರು. ನಂತರ ಹೈಕೋರ್ಟ್ ರೆಗ್ಯುಲರ್ ಜಾಮೀನು ನೀಡಿತ್ತು. ನಂತರ ಸರ್ಕಾರ ಇದನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಿತ್ತು. ದರ್ಶನ್ ಅವರು ಈವರೆಗೆ ಯಾವುದೇ ಆಪರೇಷನ್ ಮಾಡಿಸಿಕೊಂಡಿಲ್ಲ. ಈ ಬಗ್ಗೆ ಹಲವು ಅನುಮಾನಗಳು ಎದ್ದಿವೆ.
ಈ ನಡುವೆ, ಹುಟ್ಟುಹಬ್ಬದಂದು ತಮಗಾಗಿ ಹಾರೈಸಿದ ಅಭಿಮಾನಿಗಳಿಗೆ ದರ್ಶನ್ ಕೃತಜ್ಞತೆ ಅರ್ಪಿಸಿದ್ದಾರೆ. "ಪ್ರೀತಿಯ ಸೆಲೆಬ್ರಿಟಿಗಳೇ.. ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತಹ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ" ಎಂದಿದ್ದಾರೆ ನಟ ದರ್ಶನ್ ತೂಗುದೀಪ.
ಇದನ್ನೂ ಓದಿ: Actor Darshan: ನಿಮ್ಮನ್ನು ಪಡೆದಿರುವ ನಾನೇ ಧನ್ಯ... ನೀವೇ ನನ್ನ ಆಸ್ತಿ: ಪ್ರೀತಿಯ ಸೆಲೆಬ್ರಿಟಿಸ್‌ಗೆ ದರ್ಶನ್ ಕೃತಜ್ಞತೆ