Actor Darshan: ನಿಮ್ಮನ್ನು ಪಡೆದಿರುವ ನಾನೇ ಧನ್ಯ... ನೀವೇ ನನ್ನ ಆಸ್ತಿ: ಪ್ರೀತಿಯ ಸೆಲೆಬ್ರಿಟಿಸ್‌ಗೆ ದರ್ಶನ್ ಕೃತಜ್ಞತೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಪೋಸ್ಟ್‌ವೊಂದನ್ನು ಮಾಡಿದ್ದು, ಆ ಮೂಲಕ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಫೆ.16ರಂದು ಬರ್ತ್ ಡೇ ರಂದು ದರ್ಶನ್ ಬರ್ತ್ ಡೇ ಇತ್ತು. ಇದಕ್ಕೂ ಮುನ್ನ ವಿಡಿಯೊ ಮಾಡಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದ ದರ್ಶನ್, ಆರೋಗ್ಯ ಸಮಸ್ಯೆಯಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿಲ್ಲ ಎಂದು ತಿಳಿಸಿದ್ದರು. ಇದೀಗ ಅವರು ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಧನ್ಯವಾದ ತಿಳಿಸಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ.


ಬೆಂಗಳೂರು: ಈ ಬಾರಿ ಆರೋಗ್ಯ ಸಮಸ್ಯೆಯಿಂದಾಗಿ ಬರ್ತ್ ಡೇ(Darshna Birthday) ಆಚರಿಸಿಕೊಳ್ಳದ ಚಾಲೆಂಜಿಂಗ್ ಸ್ಟಾರ್ ದರ್ಶನ್(Actor Darshan) ಹೊಸ ಪೋಸ್ಟ್‌ವೊಂದನ್ನು ಮಾಡಿದ್ದು, ಆ ಮೂಲಕ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಫೆ.16ರಂದು ಬರ್ತ್ ಡೇ ರಂದು ದರ್ಶನ್ ಬರ್ತ್ ಡೇ ಇತ್ತು. ಇದಕ್ಕೂ ಮುನ್ನ ವಿಡಿಯೊ ಮಾಡಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದ ದರ್ಶನ್, ಆರೋಗ್ಯ ಸಮಸ್ಯೆಯಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿಲ್ಲ ಎಂದು ತಿಳಿಸಿದ್ದರು. ಅದಾಗ್ಯೂ ಅಭಿಮಾನಿಗಳು ಮಾತ್ರ ಅವರ ಫೊಟೋವನ್ನು ಕಾಮನ್ ಡಿಪಿಯನ್ನಾಗಿ ಬಳಸಿ, ಸೋಶಿಯಲ್ ಮೀಡಿಯಾಗಳಲ್ಲಿ ಶುಭಾಶಯ ತಿಳಿಸಿ ಸಂಭ್ರಮಿಸಿದ್ದರು. ಇದೀಗ ಅವರು ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಧನ್ಯವಾದ ತಿಳಿಸಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ.

ದರ್ಶನ್ ಪೋಸ್ಟ್‌ನಲ್ಲೇನಿದೆ?
ಪ್ರೀತಿಯ ಸೆಲೆಬ್ರಿಟಿಸ್ ಗಳೇ ನಮಸ್ಕಾರ,
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲ್ಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ .
ನಿಮ್ಮ ದಾಸ ದರ್ಶನ್
ಈ ಸುದ್ದಿಯನ್ನೂ ಓದಿ: Darshan Birthday: ದರ್ಶನ್ ಹುಟ್ಟುಹಬ್ಬ; ಕಾಮನ್ ಡಿಪಿ ರಿಲೀಸ್ ಮಾಡಿದ ವಿಜಯಲಕ್ಷ್ಮೀ
ಬರ್ತ್ ಡೇಗೂ ಮುನ್ನ ವಿಡಿಯೊ ಮಾಡಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದ ದರ್ಶನ್, ಆರೋಗ್ಯ ಸಮಸ್ಯೆಯಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿಲ್ಲ ಎಂದು ತಿಳಿಸಿದ್ದರು. ʻಫೆ.16ಕ್ಕೆ ನನ್ನ ಹುಟ್ಟುಹಬ್ಬ. ಪ್ರತಿಯೊಬ್ಬರನ್ನೂ ಭೇಟಿಯಾಗಿ ಥ್ಯಾಂಕ್ಸ್ ಹೇಳೋಣ ಎನ್ನುವ ಆಸೆ ಇತ್ತು. ಆದರೆ ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲʼಎಂದು ತಿಳಿಸಿದ್ದರು.
ʻನಿಂತುಕೊಂಡು ಎಲ್ಲರಿಗೂ ವಿಶ್ ಮಾಡಲು ನನ್ನಿಂದ ಆಗುತ್ತಲ್ಲ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುಟ್ಟಿ. ಅದು ನನಗೂ ಗೊತ್ತು. ಅದನ್ನು ಮುಂದೆ ಮಾಡಿಸಲೇಬೇಕು. ಈಗಾಗಲೇ ಒಪ್ಪಿಕೊಂಡಿರುವ ಕೆಲಸ ಮುಗಿಸಬೇಕಿದೆ. ನನ್ನ ನಿರ್ಮಾಪಕರು ಇಷ್ಟು ದಿನ ನನಗಾಗಿ ಕಾದಿದ್ದಾರೆ. ಅವರಿಗೆ ಧನ್ಯವಾದಗಳು. ಅವರಿಗೆ ನಾನು ಅನ್ಯಾಯ ಮಾಡಬಾರದು ಎನ್ನುವ ಕಾರಣಕ್ಕೆ ಎಷ್ಟು ದಿನ ಸಾಧ್ಯವಾಗುತ್ತದೋ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕಲು ನೋಡ್ತಾ ಇದ್ದೇನೆ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ. ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿʼ ಎಂದು ಮನವಿ ಮಾಡಿದ್ದರು.