#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kolkata Horror: ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣ; 17 ಲಕ್ಷ ಪರಿಹಾರ ತಿರಸ್ಕರಿಸಿದ ಪೋಷಕರು

ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಲ್ಕತ್ತಾದ ಟ್ರೈನಿ ವೈದೈಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದ್ದು,ಅಪರಾಧಿಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ಪ್ರಕಟಿಸಿದೆ. ವೈದ್ಯೆಯ ಪೋಷಕರಿಗೆ 17 ಲಕ್ಷ ರುಪಾಯಿ ಪಾವತಿಸಬೇಕೆಂದು ನಗರ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರದ ಹಣವನ್ನು ಪೋಷಕರು ತಿರಸ್ಕರಿಸಿದ್ದು,ನಮಗೆ ಹಣ ಬೇಡ ನ್ಯಾಯ ಬೇಕು ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.

ಯಾವ ಹಣವೂ ಬೇಡ... ನ್ಯಾಯ ಬೇಕು ಎಂದ ಕೊಲ್ಕತ್ತಾ ವೈದ್ಯೆಯ ಪೋಷಕರು!

Kolkata Rape and Murder

Profile Deekshith Nair Jan 20, 2025 5:46 PM

ಕೊಲ್ಕತ್ತಾ: ಕಳೆದ ವರ್ಷ ಆಗಸ್ಟ್​ 10ರಂದು ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಅಪರಾಧಿ ಸಂಜಯ್​ ರಾಯ್​ಗೆ ಕೋರ್ಟ್​ ಇಂದು(ಜ.20) ಜೀವಾವಧಿ ಶಿಕ್ಷೆ ಪ್ರಕಟಿಸಿದೆ(Kolkata Rape and Murder)

ಆರ್‌ಜಿಕರ್‌ ಕಾಲೇಜಿನ ಪ್ರಕರಣದ ತೀರ್ಪು ಪ್ರಕಟವಾಗಿದ್ದು,ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಅಮಾನುಷವಾಗಿ ಹತೈಗೈದ ಅಪರಾಧಿಗೆ ಜೀವಾವಧಿ ಶಿಕ್ಷೆಯಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರಿಗೆ 17 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸಲು ನಗರ ನ್ಯಾಯಾಲಯದ ಆದೇಶಿಸಿದೆ. ಈ ಬಗ್ಗೆ​ ಪ್ರತಿಕ್ರಿಯಿಸಿರುವ ಪೋಷಕರು ನಾವು ಯಾವುದೇ ಹಣಕಾಸಿನ ನೆರವು ಬಯಸುವುದಿಲ್ಲ, ನ್ಯಾಯ ಮಾತ್ರ ಸಾಕು ಎಂದಿದ್ದಾರೆ.



ಕೋರ್ಟ್​ನಿಂದ 17 ಲಕ್ಷ ರೂ. ಪರಿಹಾರಕ್ಕೆ ಸೂಚನೆ

ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದ ಆರ್‌ಜಿಕರ್‌ ಕಾಲೇಜಿನ ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದೆ. ಎರಡು ದಿನಗಳ ಹಿಂದೆ ಮಾಜಿ ನಾಗರಿಕ ಪೊಲೀಸ್ ಸ್ವಯಂಸೇವಕ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್​ ಹೇಳಿತ್ತು. ಇಂದು ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತೀರ್ಪು ನೀಡಿದ ಸೀಲ್ದಾ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಸಂತ್ರಸ್ತೆಯ ಪೋಷಕರಿಗೆ 17 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಸೂಚಿಸಿದರು.

ಈ ಸುದ್ದಿಯನ್ನೂ ಓದಿ:Crime News: ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪಾಪಿ ಪತಿ; ವೈರಲ್‌ ವಿಡಿಯೊ ಇಲ್ಲಿದೆ

ನ್ಯಾಯಾಲಯದ ಕಲಾಪಕ್ಕೆ ಹಾಜರಾದ ಸಂತ್ರಸ್ತೆಯ ಪೋಷಕರು, ತಮಗೆ ಪರಿಹಾರ ಬೇಡ, ನ್ಯಾಯ ಬೇಕು ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ನ್ಯಾಯಾಧೀಶರು ತಾವು ಈಗಾಗಲೇ ಆದೇಶವನ್ನು ನೀಡಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಹಣವನ್ನು ಹೇಗೆ ಬೇಕಾದರೂ ಬಳಸಲು ನೀವು ಸ್ವತಂತ್ರರು ಎಂದಿರುವ ನ್ಯಾಯಾಧೀಶರು ಇದನ್ನು ಅತ್ಯಾಚಾರ ಮತ್ತು ಕೊಲೆಗೆ ಪರಿಹಾರವಾಗಿ ನೋಡಬೇಡಿ, ಆದರೆ ಕಾನೂನು ನಿಬಂಧನೆಗಳ ಭಾಗವಾಗಿ ನೋಡಬೇಕೆಂದು ಪೋಷಕರಿಗೆ ತಿಳಿಸಿದ್ದಾರೆ.