Puttakkana Makkalu: ಪುಟ್ಟಕ್ಕನ ಜೊತೆಯಾದ ಪುಟ್ನಂಜ: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್
ತನ್ನ ಮಗಳು ಯಾವ ತಪ್ಪು ಮಾಡಿಲ್ಲ, ಆಕೆಗೆ ನ್ಯಾಯ ಕೊಡಿಸುವ ಸಲುವಾಗಿ ಸ್ನೇಹ ಅಮ್ಮ ಪುಟ್ಟಕ್ಕ ಧರಣಿ ಕೂತಿದ್ದಾರೆ. ಪುಟ್ಟಕ್ಕನ ಹೋರಾಟಕ್ಕೆ ದೊಡ್ಡ ಶಕ್ತಿಯಾಗಿ, ನ್ಯಾಯ ಕೊಡಿಸಲೆಂದೇ ಮಹಾನಾಯಕ ಕ್ರೇಜಿಸ್ಟಾರ್ ರವಿಚಂದ್ರನ್ ಕೈ ಜೋಡಿಸಿದ್ದಾರೆ.

Puttakkana Makkalu Serial

ಕೆಲವು ತಿಂಗಳುಗಳ ಹಿಂದೆ ಧಾರಾವಾಹಿ ಟಿಆರ್ಪಿಯಲ್ಲಿ ನಂಬರ್ ಸ್ಥಾನದಲ್ಲಿದ್ದು ಆಳುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ವರ್ಷದ ಐದನೇ ವಾರ ಈ ಧಾರಾವಾಹಿಗೆ ಸಿಕ್ಕ ಟಿವಿಆರ್ ಕೇವಲ 4.7 ಆಗಿದೆ. ಸೀರಿಯಲ್‌ನಲ್ಲಿ ಆದ ಪಾತ್ರಗಳ ಬದಲಾವಣೆ ದೊಡ್ಡ ಹೊಡೆತ ಬಿದ್ದಿತು. ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗಲಿಲ್ಲ. ಹೀಗಾಗಿ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ವೀಕ್ಷಕರ ಚಿತ್ತ ತನ್ನತ್ತ ಸೆಳೆಯುವ ಸಲುವಾಗಿ ನಿರ್ದೇಶಕರು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಮ್ಮನ ಕನಸನ್ನು ನನಸು ಮಾಡಿದ್ದಳು ಮಗಳು ಸ್ನೇಹಾ. ಕಷ್ಟಗಳನ್ನು ಎದುರಿಸಿ ಐಎಎಸ್ ಪರೀಕ್ಷೆ ಬರೆದು ಡಿಸಿ ಆಗಿದ್ದಳು. ಸ್ನೇಹಾಳ ಈ ಸಾಧನೆಗೆ ಮನೆ ಮಂದಿ ಮಾತ್ರವಲ್ಲ ಊರವರೂ ಮೆಚ್ಚಿ ಕುಣಿದಾಡಿದ್ದರು. ಆದರೆ, ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಸ್ನೇಹಾ ಭೀಕರ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಆ ಸಾವಿನ ಸುದ್ದಿ ಪುಟ್ಟಕ್ಕನ ಜತೆಗೆ ಇಡೀ ಗ್ರಾಮಕ್ಕೂ ಬರಸಿಡಿಲು ಬಡಿದಂತಾಗುತ್ತದೆ. ಕಣ್ಣೀರಿನಲ್ಲಿಯೇ ಮಗಳಿಗೆ ಶಾಶ್ವತ ವಿದಾಯ ಹೇಳುತ್ತಾಳೆ ಪುಟ್ಟಕ್ಕ.
ಹೀಗೆ ಸ್ನೇಹಾ ಪಾತ್ರ ಕಣ್ಮುಚ್ಚುತ್ತಿದ್ದಂತೆ, ಕಿರುತೆರೆ ವೀಕ್ಷಕರಿಗೂ ಈ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರ ನಡೆಯ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು. ಇನ್ಮೇಲೆ ಸೀರಿಯಲ್ ನೋಡಲ್ಲ ಎಂದೇ ಕಾಮೆಂಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ನೇಹಾ ಸಾವಿನ ನಂತರ ಕಥೆ ಎತ್ತಲೋ ಸಾಗುತ್ತಿದೆ, ಈ ಕಥೆಯೇ ಬೇಡ ಅಂತಾನೂ ಹೇಳ್ತಿದ್ದಾರೆ ಜನ.
ಇದೀಗ ಸತ್ತ ಮೇಲೂ ಡಿಸಿ ಸ್ನೇಹಾ ಮತ್ತೊಂದು ಆರೋಪವನ್ನು ಎದುರಿಸಬೇಕಾಗಿ ಬಂದಿದೆ. ಸ್ನೇಹಾ ಮೇಲೆ ಲಂಚ ತೆಗೆದುಕೊಂಡ ಆರೋಪ ವ್ಯಕ್ತವಾಗಿದ್ದು, ಹಾಗಾಗಿ, ಆಕೆಯ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಜೊತೆಗೆ ಸ್ನೇಹಾಗೆ ಗೌರವಾರ್ತವಾಗಿ ಸಾವಿನ ನಂತರ ನೀಡಲಾದ ರಾಷ್ಟ್ರಧ್ವಜವನ್ನು ಸಹ ವಾಪಾಸ್ ತೆಗೆದುಕೊಂಡಿದ್ದಾರೆ.
ಆದರೆ, ತನ್ನ ಮಗಳು ಯಾವ ತಪ್ಪು ಮಾಡಿಲ್ಲ, ಆಕೆಗೆ ನ್ಯಾಯ ಕೊಡಿಸುವ ಸಲುವಾಗಿ ಸ್ನೇಹ ಅಮ್ಮ ಪುಟ್ಟಕ್ಕ ಧರಣಿ ಕೂತಿದ್ದಾರೆ. ಪುಟ್ಟಕ್ಕನ ಹೋರಾಟಕ್ಕೆ ದೊಡ್ಡ ಶಕ್ತಿಯಾಗಿ, ನ್ಯಾಯ ಕೊಡಿಸಲೆಂದೇ ಮಹಾನಾಯಕ ಕ್ರೇಜಿಸ್ಟಾರ್ ರವಿಚಂದ್ರನ್ ಕೈ ಜೋಡಿಸಿದ್ದಾರೆ. ಇಲ್ಲಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಈ ಕುರಿತ ಪ್ರೊಮೋ ಹಂಚಿಕೊಂಡಿರುವ ಜೀ ಕನ್ನಡ " #JUSTICEFORSNEHA ಅಭಿಯಾನಕ್ಕೆ ಪುಟ್ಟಕ್ಕನ ಜೊತೆ ಕೈ ಜೋಡಿಸಿದ್ರು ಪುಟ್ನಂಜ ಕ್ರೇಜಿ ಸ್ಟಾರ್ ರವಿಚಂದ್ರನ್" ಎಂದು ಬರೆದುಕೊಂಡಿದೆ.
Bhagya Lakshmi Serial: ಭಾಗ್ಯಾಗೆ ಶಾಕ್ ಮೇಲೆ ಶಾಕ್: ಸಂಪೂರ್ಣವಾಗಿ ತಾಂಡವ್ ಕಡೆ ವಾಲುತ್ತಿದೆ ಭಾಗ್ಯಾ ಕುಟುಂಬ