Rinku Singh: ಅತಿ ಕಿರಿಯ ಸಂಸದೆ ಪ್ರಿಯಾ ಜತೆ ರಿಂಕು ಸಿಂಗ್ ನಿಶ್ಚಿತಾರ್ಥ?
Rinku Singh: ರಿಂಕು ಸಿಂಗ್ ಅವರ ಮ್ಯಾನೇಜರ್ ಅರ್ಜುನ್ ಸಿಂಗ್ ಫಕೀರಾ ಅವರು ಎರಡು ಕುಟುಂಬಗಳು ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದು, ಅಂತಿಮ ಚರ್ಚೆಯ ನಂತರವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಲಕ್ನೋ, ಜ.17, 2025: ಟೀಮ್ ಇಂಡಿಯಾದ ಟಿ20 ಸ್ಪೆಷಲಿಸ್ಟ್ ರಿಂಕು ಸಿಂಗ್(Rinku Singh) ಅವರು ಅತಿ ಕಿರಿಯ ಸಂಸದೆಯಾಗಿ ಗುರುತಿಸಿಕೊಂಡಿರುವ ಸಮಾಜವಾದಿ ಪಕ್ಷದ(Samajwadi Party) ಪ್ರಿಯಾ ಸರೋಜಾ(MP Priya Saroj) ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಧಿಕೃತವಾಗಿ ಈ ಸುದ್ದಿ ಪ್ರಟಕಗೊಳ್ಳಲಿದ್ದರೂ ಅಭಿಮಾನಿಗಳು ರಿಂಕು ಸಿಂಗ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರಲಾರಂಭಿಸಿದ್ದಾರೆ. ಇಬ್ಬರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
25 ವರ್ಷದ ಪ್ರಿಯಾ ಸರೋಜ್ ಅವರು ಕಳೆದ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದ ಸಮಾಜವಾದಿ ಪಕ್ಷದಿಂದ (ಎಸ್ಪಿ) ಸ್ಪರ್ಧಿಸಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದರು. 23 ನವೆಂಬರ್ 1998ರಲ್ಲಿ ಜನಿಸಿದ ಪ್ರಿಯಾ, ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
Rinku Singh gets engaged to Samajwadi Party MP Priya Saroj. 💍
— Mufaddal Vohra (@mufaddal_vohra) January 17, 2025
- Many congratulations to them! ❤️ pic.twitter.com/7b7Hb0D2Em
ರಿಂಕು ಸಿಂಗ್ ಅವರ ಮ್ಯಾನೇಜರ್ ಅರ್ಜುನ್ ಸಿಂಗ್ ಫಕೀರಾ ಅವರು ಎರಡು ಕುಟುಂಬಗಳು ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದು, ಅಂತಿಮ ಚರ್ಚೆಯ ನಂತರವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸದ್ಯ ರಿಂಕು ಸಿಂಗ್ ಅವರು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಅಭ್ಯಾಸ ನಿರತರಾಗಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಜ.22 ರಿಂದ ಆರಂಭಗೊಳ್ಳಲಿದೆ. ರಿಂಕು ಸಿಂಗ್ ಭಾರತ ಪರ ಇದುವರೆಗೆ 30 ಟಿ20 ಪಂದ್ಯಗಳಲ್ಲಿ 46ಕ್ಕೂ ಹೆಚ್ಚು ಸರಾಸರಿಯಲ್ಲಿ 507 ರನ್ ಬಾರಿಸಿದ್ದಾರೆ. 2023ರ ಐಪಿಎಲ್ ಆವೃತ್ತಿಯಲ್ಲಿ ಯಶ್ ದಯಾಳ್ ಅವರ ಓವರ್‌ನಲ್ಲಿ ಸತತ 5 ಸಿಕ್ಸರ್ ಬಾರಿಸಿದ ಬಳಿಕ ರಿಂಕು ಅವರ ಖ್ಯಾತಿ ಹೆಚ್ಚಾಗುವಂತೆ ಮಾಡಿತು.