Tumkur (Gubbi)News: ಕಡಬದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ದಸಂಸ ಒತ್ತಾಯ
ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆ ಮಾಡಿ ಎಲ್ಲಾ ಸದಸ್ಯರ ನಿರ್ಣಯದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಹಣವನ್ನು ಬಳಸಬೇಕು. ಗ್ರಾಮ ಪಂಚಾಯಿತಿ ಸಮೀಪದಲ್ಲೇ ಪುತ್ಥಳಿ ಅನಾವರಣ ಮಾಡಬೇಕು. ಮುಂದಿನ ಸಭೆಯಲ್ಲಿ ತೀರ್ಮಾನ ಮಾಡಬೇಕು. ವಿಳಂಬ ಧೋರಣೆ ಅನುಸರಿಸಿದರೆ ಪಂಚಾಯಿತಿ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಲಿದೆ


ಗುಬ್ಬಿ: ಇತಿಹಾಸ ಪ್ರಸಿದ್ಧ ಕಡಬ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡಬೇಕು. ಹಾಗೆಯೇ ಪುತ್ಥಳಿ ನಿರ್ಮಿಸಿ ಅನಾವರಣ ಗೊಳಿಸುವ ಸಂಪೂರ್ಣ ಜವಾಬ್ದಾರಿ ಸ್ಥಳೀಯ ಗ್ರಾಮ ಪಂಚಾಯಿತಿ ಮೀಸಲು ಹಣದಲ್ಲಿ ನಡೆಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಒತ್ತಾಯಿಸಿದರು. ತಾಲ್ಲೂಕಿನ ಕಡಬ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಹಾಗೂ ಪಿಡಿಓ ಅವರಿಗೆ ಮನವಿ ನೀಡಿ ಮಾತನಾಡಿದ ಅವರು ನಾಲ್ಕು ಲಕ್ಷ ಅಂದಾಜು ವೆಚ್ಚದ ಪ್ರತಿಮೆ ನಿರ್ಮಾಣಕ್ಕೆ ಪಂಚಾಯಿತಿವತಿಯಿಂದ ಶೇಕಡಾ 25 ಮೀಸಲು ಹಣ ಬಳಕೆ ಮಾಡಲು ಅನುವು ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Tumkur (Chikkanayakanahalli): ಬೆಂಕಿ ಅನಾಹುತ: 16 ಗುಡಿಸಲು ಭಸ್ಮ
ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆ ಮಾಡಿ ಎಲ್ಲಾ ಸದಸ್ಯರ ನಿರ್ಣಯದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಹಣವನ್ನು ಬಳಸಬೇಕು. ಗ್ರಾಮ ಪಂಚಾಯಿತಿ ಸಮೀಪದಲ್ಲೇ ಪುತ್ಥಳಿ ಅನಾವರಣ ಮಾಡಬೇಕು. ಮುಂದಿನ ಸಭೆ ಯಲ್ಲಿ ತೀರ್ಮಾನ ಮಾಡಬೇಕು. ವಿಳಂಬ ಧೋರಣೆ ಅನುಸರಿಸಿದರೆ ಪಂಚಾಯಿತಿ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಕಲ್ಪನಾ ಹಾಗೂ ಪಿಡಿಓ ನಟರಾಜ್ ಮುಂದಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಸದಸ್ಯರ ಒಮ್ಮತ ಪಡೆದು ಕೆಲಸ ಮಾಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸುರೇಶ್, ರಾಮಯ್ಯ, ಗೋಪಿಕೃಷ್ಣ, ದಯಾನಂದ್, ಗೋವಿಂದಯ್ಯ, ರಾಜು, ರಂಗರಾಜು, ಸೋಮಶೇಖರ್, ರಾಕೇಶ್, ತೇಜಸ್ ಕುಮಾರ್ ಇತರರು ಇದ್ದರು.