ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur (Chikkanayakanahalli): ಬೆಂಕಿ ಅನಾಹುತ: 16 ಗುಡಿಸಲು ಭಸ್ಮ

ಬೆಂಕಿ ಹತ್ತಿದ ತಕ್ಷಣ ಜನರು ಜೀವ ಕೈಯಲ್ಲಿಟ್ಟುಕೊಂಡು ಮಕ್ಕಳು ಮರಿಗಳನ್ನು ಎತ್ತಿ ಕೊಂಡು ಕೈಗೆ ಸಿಕ್ಕ ಸಾಮಾನುಗಳನ್ನು ಹಿಡಿದುಕೊಂಡು ಗುಡಿಸಲು ಗಳಿಂದ ಹೊರಗೆ ಓಡಿಬಂದರು. ಆಕಸ್ಮಿಕವಾಗಿ ಒಂದು ಗುಡಿಸಲಿಗೆ ತಗುಲಿದ ಬೆಂಕಿ ಕ್ಷಣಾರ್ಧದಲ್ಲಿ ಉಳಿದ ವಕ್ಕೂ ವ್ಯಾಪಿಸಿತು. ಗಾಳಿ ರಭಸವಾಗಿ ಬೀಸುತ್ತಿದ್ದ ಕಾರಣ ರಾತ್ರಿ ೮ ಗಂಟೆಯವರೆಗೂ ಬೆಂಕಿ ಹೊತ್ತಿ ಉರಿಯುತ್ತಿತ್ತು

ಶೆಡ್‌ನಲ್ಲಿದ್ದ 11 ಹಂದಿಗಳು ಕಾಣೆ

Profile Ashok Nayak Mar 15, 2025 9:36 PM

ಚಿಕ್ಕನಾಯಕನಹಳ್ಳಿ : ಮತಿಘಟ್ಟ ಸಮೀಪದ ಕೈಮರ ಕಾಮಾಲಾಪುರ ರಸ್ತೆಯ ಬದಿ ಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಅಲೆಮಾರಿ ಹಾಗು ಬುಡಕಟ್ಟು ಸಮುದಾ ಯದ 16 ಗುಡಿಸಲುಗಳು ಅಗ್ನಿಗಾಹುತಿಯಾಗಿವೆ. ಶೆಡ್‌ನಲ್ಲಿದ್ದ ೧೧ ಹಂದಿಗಳು ಕಾಣೆಯಾ ಗಿದೆ. ಘಟನೆಯಲ್ಲಿ 10 ಕೋಳಿಗಳು, ಸಾಕು ಪ್ರಾಣಿ ಗಳು ಸಜೀವ ದಹನವಾಗಿದೆ. ಗುಡಿಸಲಿ ನಲ್ಲಿದ್ದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಕೆಲ ದಾಖಲೆಪತ್ರಗಳು ಸುಟ್ಟಿವೆ. ಉಳಿದಂತೆ ಗುಡಿಸಲುಗಳಲ್ಲಿದ್ದ ದವಸಧಾನ್ಯ, ಪಾತ್ರೆ ಪಡಗ, ಬಟ್ಟೆ ಬರೆ, ಶಾಲೆ ಮಕ್ಕಳ ಪುಸ್ತಕ ಚೀಲಗಳು, ಸೈಕಲ್, ಕೂಡಿಸಿಟ್ಟಿದ್ದ ಅಲ್ಪ ಸ್ವಲ್ಪ ಹಣ ಎಲ್ಲವೂ ಭಸ್ಮವಾಗಿದೆ.

ಇದನ್ನೂ ಓದಿ: Tumkur (Gubbi) News: ಕ್ಷೇತ್ರಪಾಲಕ ಗುಬ್ಬಿಯಪ್ಪ ಖ್ಯಾತಿ ಪಡೆದ ಗೋಸಲ ಶ್ರೀ ಚನ್ನ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಬೆಂಕಿ ಹತ್ತಿದ ತಕ್ಷಣ ಜನರು ಜೀವ ಕೈಯಲ್ಲಿಟ್ಟುಕೊಂಡು ಮಕ್ಕಳು ಮರಿಗಳನ್ನು ಎತ್ತಿ ಕೊಂಡು ಕೈಗೆ ಸಿಕ್ಕ ಸಾಮಾನುಗಳನ್ನು ಹಿಡಿದುಕೊಂಡು ಗುಡಿಸಲು ಗಳಿಂದ ಹೊರಗೆ ಓಡಿಬಂದರು. ಆಕಸ್ಮಿಕವಾಗಿ ಒಂದು ಗುಡಿಸಲಿಗೆ ತಗುಲಿದ ಬೆಂಕಿ ಕ್ಷಣಾರ್ಧದಲ್ಲಿ ಉಳಿದ ವಕ್ಕೂ ವ್ಯಾಪಿಸಿತು. ಗಾಳಿ ರಭಸವಾಗಿ ಬೀಸುತ್ತಿದ್ದ ಕಾರಣ ರಾತ್ರಿ ೮ ಗಂಟೆಯವರೆಗೂ ಬೆಂಕಿ ಹೊತ್ತಿ ಉರಿಯುತ್ತಿತ್ತು.

ಸುತ್ತಮುತ್ತಲಿರುವವರು ಬೆಂಕಿ ನಂದಿಸಲು ಧಾವಿಸಿ ಬಂದರಾದರೂ ಬೆಂಕಿಯ ಜ್ವಾಲೆ ಎದುರು ಅಸಹಾಯಕರಾದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸ ಪಟ್ಟಿತು. ಗುಡಿಸಲು ಕಳೆದುಕೊಂಡ ಅಲೆಮಾರಿಗಳ ರೋದನ ಮುಗಿಲು ಮುಟ್ಟಿ ತ್ತು. ನಾಳಿನ ಬದುಕಿನ ಚಿಂತೆ ಅವರನ್ನು ಆವರಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ಶಾಸಕ ಸಿ.ಬಿ.ಸುರೇಶ ಬಾಬು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ನಿರಾಶ್ರಿತರಿಗೆ ರಾತ್ರಿ ತಂಗಲು ವ್ಯವಸ್ಥೆ, ಆಹಾರ ಸೌಲಭ್ಯ ಕಲ್ಪಿಸಿ ಅಧಿಕಾರಿಗಳಿಗೆ ಪರಿಹಾರ ಕಾರ್ಯದಲ್ಲಿ ನಿರತರಾಗು ವಂತೆ ತಿಳಿಸಿದರು.

ತಹಶೀಲ್ದಾರ್ ಭೇಟಿ

ಶನಿವಾರ ಈ ಭಾಗಕ್ಕೆ ತಹಸೀಲ್ದಾರ್ ಪುರಂದರ್, ಸಮಾಜ ಕಲ್ಯಾಣಾಧಿಕಾರಿ ಶ್ರೀಧರ್, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಮುಖಂಡ ಗಾಂಧಿನಗರದ ಮಹೇಶ್ ಕೋಡಿ ಪಾಳ್ಯ ನಾಗರಾಜ್ ಉಜ್ಜಜ್ಜಿ ರಾಜಣ್ಣ ಪರಿಹಾರಕ್ಕೆ ಶೀಘ್ರ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ರಾಮಯ್ಯ, ಶಿವಕುಮಾರ್, ಅಕ್ಷಿತಾ, ಲಕ್ಷ್ಮಮ್ಮ, ಗ್ರಾಮ ಸಹಾಯಕ ಉಪಸ್ಥಿತರಿದ್ದರು.