DC vs RCB: ಡೆಲ್ಲಿ ಎದುರು ಆರ್‌ಸಿಬಿಗೆ ಸೇಡಿನ ಪಂದ್ಯ
IPL 2025: ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಂತೆ ಬ್ಯಾಟಿಂಗ್ ಸ್ನೇಹಿಯಾಗಿದೆ. ವೇಗದ ಔಟ್‌ಫೀಲ್ಡ್‌ನೊಂದಿಗೆ ಹೆಚ್ಚಿನ ಸ್ಕೋರಿಂಗ್ ಅವಕಾಶ ಇದೆ. ಫ್ಲಾಟ್ ವಿಕೆಟ್ ಮತ್ತು ಸಣ್ಣ ಬೌಂಡರಿ ಇರುವ ಕಾರಣ ರನ್ ಮಳೆ ನಿರೀಕ್ಷೆ ಮಾಡಬಹುದು.


ನವದೆಹಲಿ: ಅಂಕಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(DC vs RCB) ತಂಡಗಳು ದ್ವಿತೀಯ ಸುತ್ತಿನ ಮುಖಾಮುಖಿಗೆ ಸಜ್ಜಾಗಿದೆ. ಭಾನುವಾರ ನಡೆಯುವ ಐಪಿಎಲ್(IPL 2025)ನ 46ನೇ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಆರ್‌ಸಿಬಿ(RCB) ಪಾಲಿಗೆ ಇದು ಸೇಡಿನ ಪಂದ್ಯ. ಚಿನ್ನಸ್ವಾಮಿಯನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ತಂಡ 6 ವಿಕೆಟ್ ಅಂತರದಿಂದ ಬೆಂಗಳೂರು ತಂಡವನ್ನು ಮಗುಚಿತ್ತು. ಇದಕ್ಕೀಗ ಆರ್‌ಸಿಬಿ ಪ್ರತಿಕಾರ ತೀರಿಸಬೇಕಿದೆ.
ಇನ್ನೊಂಡೆದೆ ಈ ಪಂದ್ಯ ರಾಹುಲ್ vs ಕೊಹ್ಲಿ ಎಂದೇ ಬಣ್ಣಿಸಲಾಗಿದೆ. ಹೌದು ಚಿನ್ನಸ್ವಾಮಿ ಮೈದಾನದಲ್ಲಿ ರಾಹುಲ್ ಅಬ್ಬರ ಬ್ಯಾಟಿಂಗ್ ನಡೆಸಿ ತವರು ಮೈದಾನದಲ್ಲಿ ನಾನೇ ಕಿಂಗ್ ಎಂದು ಪಂದ್ಯದ ಬಳಿಕ ಸಂಭ್ರಮಿಸಿದ್ದರು. ಇದೀಗ ಕೊಹ್ಲಿ ಕೂಡ ತಮ್ಮ ತವರಾದ ಡೆಲ್ಲಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಸಂಭ್ರಮಿಸಲಿದ್ದಾರಾ? ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹಾಲಿ ಆವೃತ್ತಿಯಲ್ಲಿ ಪ್ರಚಂಡ ಬ್ಯಾಟಿಂಗ್ ಫಾರ್ಮ್ ಮೂಲಕ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸುತ್ತಿರುವ ಕೊಹ್ಲಿ ತವರಿನ ಕೋಟ್ಲಾ ಮೈದಾನದಲ್ಲಿಯೂ ರನ್ ಮಳೆ ಸುರಿಸುವ ವಿಶ್ವಾಸದಲ್ಲಿದ್ದಾರೆ.
Ishq, pyaar, aur mohabbat 🏏🫶 pic.twitter.com/xwA2noHDgp
— Delhi Capitals (@DelhiCapitals) April 26, 2025
ಪಿಚ್ ರಿಪೋರ್ಟ್
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಂತೆ ಬ್ಯಾಟಿಂಗ್ ಸ್ನೇಹಿಯಾಗಿದೆ. ವೇಗದ ಔಟ್‌ಫೀಲ್ಡ್‌ನೊಂದಿಗೆ ಹೆಚ್ಚಿನ ಸ್ಕೋರಿಂಗ್ ಅವಕಾಶ ಇದೆ. ಫ್ಲಾಟ್ ವಿಕೆಟ್ ಮತ್ತು ಸಣ್ಣ ಬೌಂಡರಿ ಇರುವ ಕಾರಣ ರನ್ ಮಳೆ ನಿರೀಕ್ಷೆ ಮಾಡಬಹುದು. ರಾತ್ರಿಯ ವೇಳೆ ಇಬ್ಬನಿ ಕಾಟ ಇರುವ ಕಾರಣ ಟಾಸ್ ಗೆಲ್ಲುವ ತಂಡವು ಮೊದಲು ಬೌಲಿಂಗ್ ಆಯ್ದುಕೊಳ್ಳಬಹುದು. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ.
ಇದನ್ನೂ ಓದಿ IPL 2025: ಮತ್ತೆ ಕೆಕೆಆರ್ ತಂಡ ಸೇರಿದ ಉಮ್ರಾನ್ ಮಲಿಕ್
ಸಂಭಾವ್ಯ ತಂಡ
ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿ,ಕೀ.), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಮುಖೇಶ್ ಕುಮಾರ್.
ಆರ್‌ಸಿಬಿ: ಫಿಲಿ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.