Delhi Elections 2025: ಆಪ್‌ಗೆ ಮತ್ತೊಮ್ಮೆ ಡೆಲ್ಲಿ ಗದ್ದುಗೆ ಫಿಕ್ಸ್- ಸಟ್ಟಾ ಬಜಾರ್ ಸ್ಫೋಟಕ ಭವಿಷ್ಯ!
Delhi Elections 2025: ದೆಹಲಿ ವಿಧಾನಸಭಾ ಚುನಾವಣೆಯ ಭವಿಷ್ಯವನ್ನು ಸಟ್ಟಾ ಬಜಾರ್ ಹೇಳಿದೆ.
![Delhi Elections 2025: ಆಪ್‌ಗೆ ಮತ್ತೊಮ್ಮೆ ಡೆಲ್ಲಿ ಗದ್ದುಗೆ ಫಿಕ್ಸ್- ಸಟ್ಟಾ ಬಜಾರ್ ಸ್ಫೋಟಕ ಭವಿಷ್ಯ!](https://cdn-vishwavani-prod.hindverse.com/media/original_images/image-7d4052ad-b55a-4da2-80b8-ae8828db13dd.jpg)
![Profile](https://vishwavani.news/static/img/user.png)
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ತಿಂಗಳಷ್ಟೇ ಬಾಕಿಯಿದೆ. ರಾಜಕೀಯ ಪಡಸಾಲೆಯಲ್ಲಿ ರಾಷ್ಟ್ರ ರಾಜಧಾನಿಯ ಚುನಾವಣೆಯು ಬಹು ಚರ್ಚಿತ ವಿಷಯವಾಗಿದೆ. ಈ ಬಾರಿ ದೆಹಲಿ ಗದ್ದುಗೆ ಯಾರು ಏರುತ್ತಾರೆಂಬ ಸಹಜ ಕುತೂಹಲ ಹಲವರಲ್ಲಿದೆ. ಈ ನಡುವೆ ಆಪ್ ಮತ್ತೆ ಸರಳ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ ಎಂದು ಫಲೋಡಿ ಸಟ್ಟಾ ಬಜಾರ್ ಭವಿಷ್ಯ ನುಡಿದಿದೆ(Delhi Elections 2025)
🚨 SHOCKING Phalodi Satta Bazaar Delhi Predictions -AAP : 30-40BJP : 25-35CONG : 3BJP set to surprise entire Nation if these numbers hold true.— Times Algebra (@TimesAlgebraIND) January 11, 2025
ನಿಖರ ರಾಜಕೀಯ ಭವಿಷ್ಯಕ್ಕೆ ಹೆಸರಾದ ರಾಜಸ್ಥಾನದ ಹೆಸರಾಂತ ಬೆಟ್ಟಿಂಗ್ ಬಜಾರ್ ಆದ ಫಲೋಡಿ ಸಟ್ಟಾ ಬಜಾರ್ (Satta Bazar Prediction) ಇದೀಗ ದೆಹಲಿ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದೆ. ಫೆಬ್ರವರಿ 5, 2025 ರಂದು ದೆಹಲಿ ವಿಧಾನಸಭಾ ಚುನಾವಣೆಗಳಿಗೆ ಮತದಾನ ನಡೆಯಲಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡಿದೆ. ಈ ಮಧ್ಯೆ ಸಟ್ಟಾ ಬಜಾರ್ ನುಡಿದಿರುವ ಭವಿಷ್ಯ ರಾಜಕೀಯ ರಂಗದಲ್ಲಿ ಹಲವರ ಆಸಕ್ತಿಯನ್ನು ಕೆರಳಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವು ಈ ಬಾರಿಯೂ ಗೆಲುವನ್ನು ಸಾಧಿಸುತ್ತದೆ. ಆದರೆ ಭಾರೀ ಅಂತರದ ಗೆಲುವು ಕಷ್ಟ ಸಾಧ್ಯವಾಗಿದ್ದು,ಸರಳ ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ ಎಂದು ಸಟ್ಟಾ ಬಜಾರ್ ಹೇಳಿದೆ. ಎಎಪಿ ಪಕ್ಷವು ಕೇವಲ 37 ರಿಂದ 39 ಸ್ಥಾನಗಳನ್ನು ಗಳಿಸಲಿದೆ. ಈ ಸರಳ ಬಹುಮತವು ಮತ್ತೊಮ್ಮೆ ಅಧಿಕಾರ ಹಿಡಿಯಲು ಸಾಕು ಎನ್ನಲಾಗಿದೆ. ಸಟ್ಟಾ ಬಜಾರ್‌ನ ಭವಿಷ್ಯ ಸುಳ್ಳಾಗುವುದು ತೀರಾ ಅಪರೂಪವಾಗಿದ್ದು ನಿಖರ ಭವಿಷ್ಯವಾಣಿಗೆ ಅದು ಪ್ರಸಿದ್ಧಿ ಪಡೆದುಕೊಂಡಿದೆ. ಈ ಬಾರಿಯೂ ಅದರ ಭವಿಷ್ಯ ನಿಜವಾಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಟ್ಟಾ ಬಜಾರ್ ಭವಿಷ್ಯದ ನಿಖರತೆಯ ಬಗ್ಗೆ ಫೆಬ್ರವರಿ ತಿಂಗಳಿನಲ್ಲಿ ತಿಳಿಯಬಹುದು.
ದೆಹಲಿ ವಿಧಾನಸಭೆ ಚುನಾವಣೆ-2025
ಅಧಿಸೂಚನೆ: ಜನವರಿ 10, 2025
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 17, 2025
ನಾಮಪತ್ರ ಪರಿಶೀಲನೆ: ಜನವರಿ 18, 2025
ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ: ಜನವರಿ 20, 2025
ಮತದಾನದ ದಿನಾಂಕ: ಫೆಬ್ರವರಿ 5, 2025
ಮತ ಎಣಿಕೆ: ಫೆಬ್ರವರಿ 8, 2025
ಈ ಸುದ್ದಿಯನ್ನೂ ಓದಿ:Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?