#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Dil Raju: 'ಗೇಮ್‌ ಚೇಂಜರ್‌' ನಿರ್ಮಾಪಕನಿಗೆ ಬಿಗ್‌ ಶಾಕ್‌ ! ದಿಲ್‌ ರಾಜು ಮನೆ ಮೇಲೆ IT ರೇಡ್‌

Dil Raju: ನಿರ್ಮಾಪಕ ಹಾಗೂ ಉದ್ಯಮಿ ದಿಲ್‌ ರಾಜು ಅವರ ಮನೆ ಮೇಲೆ ಆದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ 8 ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ಇವರ ಜತೆಗೆ 'ಪುಷ್ಪ 2' ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರು ಸಹ ತನಿಖೆ ಎದುರಿಸುತ್ತಿದ್ದಾರೆ.

ದಿಲ್‌ ರಾಜು ಮನೆ ಮೇಲೆ IT ರೇಡ್‌ ! ಕಚೇರಿ ಸೇರಿದಂತೆ 8 ಸ್ಥಳಗಳ ಮೇಲೆ  ಏಕಕಾಲದಲ್ಲಿ ದಾಳಿ

Dil Raju

Profile Vishakha Bhat Jan 21, 2025 5:16 PM

ಹೈದರಾಬಾದ್‌: ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ (FDC) ಅಧ್ಯಕ್ಷ ದಿಲ್ ರಾಜು (Dil Raju) ಅವರಿಗೆ ಆದಾಯ ತೆರಿಗೆ ಇಲಾಖೆ (Income Tax officer) ಶಾಕ್‌ ಕೊಟ್ಟಿದೆ. ಒಟ್ಟು 55 ತಂಡಗಳು ನಿರ್ಮಾಪಕ ದಿಲ್‌ ರಾಜು ಅವರ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿವೆ. ಹೈದರಾಬಾದ್‌ನ ಜೂಬ್ಲಿಹಿಲ್ಸ್, ಬಂಜಾರಹಿಲ್ಸ್‌ನಲ್ಲಿರುವ ನಿವಾಸಗಳ ಮೇಲೆ, ದಿಲ್ ರಾಜು ಸಹೋದರ ಶಿರೀಷ್, ಪುತ್ರಿ ಹನ್ಸಿತ ರೆಡ್ಡಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದೆ. ಇವರ ಜತೆಗೆ 'ಪುಷ್ಪ 2' ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರು ಸಹ ತನಿಖೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲಾಗುತ್ತಿದೆ. ಸಿನಿಮಾ ನಿರ್ಮಾಣ ವ್ಯವಹಾರ ಮಾತ್ರವಲ್ಲದೇ, ದಿಲ್​ ರಾಜು ರಿಯಲ್ ಎಸ್ಟೇಟ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.



ದಿಲ್ ರಾಜು ಹೆಸರಿನಿಂದ ಫೇಮಸ್ ಆಗಿರುವ ಅವರ ನಿಜವಾದ ಹೆಸರು ವೇಲಂಕುಚ ವೆಂಕಟ ರಮಣ ರೆಡ್ಡಿಯಾಗಿದ್ದು, ತೆಲುಗಿನ ಖ್ಯಾತ ಚಲನಚಿತ್ರ ವಿತರಕರು ಮತ್ತು ನಿರ್ಮಾಪಕರಾಗಿದ್ದಾರೆ. ಜತೆಗೆ ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ಕಳೆದ ವರ್ಷಗಳಲ್ಲಿ ಅವರು ತಮಿಳಿನಲ್ಲಿ ʼವಾರಿಸುʼ, ತೆಲುಗಿನ ʼಶಾಕುಂತಲಂʼ, ʼದಿ ಫ್ಯಾಮಿಲಿ ಸ್ಟಾರ್ʼ, ʼಗೇಮ್ ಚೇಂಜರ್ʼ ಮತ್ತು ʼಸಂಕ್ರಾಂತಿಕಿ ವಸ್ತುನಂʼ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ : Game Changer: ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್‌ ಆಫೀಸ್‌ನಲ್ಲಿ 'ಗೇಮ್‌ ಚೇಂಜರ್‌' ಕಮಾಲ್‌; ರಾಮ್‌ ಚರಣ್‌ ಚಿತ್ರ ಗಳಿಸಿದ್ದೆಷ್ಟು?

ಇತ್ತೀಚೆಗೆ ದಿಲ್‌ ರಾಜು ನಿರ್ಮಾಣದ ರಾಮ್‌ ಚರಣ್‌ ತೇಜಾ ನಟನೆಯ ʼಗೇಮ್‌ ಚೇಂಜರ್‌ʼ ಚಿತ್ರ ಬಿಡುಗಡೆಯಾಗಿದೆ. ಆದರೆ ಇದು ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಿಲ್ಲ. ಅವರೇ ನಿರ್ಮಿಸಿದ ಇನ್ನೊಂದು ಸಿನಿಮಾ ʼಸಂಕ್ರಾಂತಿಕಿ ವಸ್ತುನ್ನಂʼ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಅವರ ಮೇಲೆ ಐಟಿ ರೇಡ್‌ ಆಗಿರುವುದು ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.