ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Donald Trump : ವಿದೇಶಗಳಿಗೆ ನೀಡುತ್ತಿದ್ದ ನೆರವು ಹಣಕ್ಕೆ ಬಿತ್ತು ಬ್ರೇಕ್‌ ; ಡೊನಾಲ್ಡ್‌ ಟ್ರಂಪ್‌ ಮಹತ್ವದ ಆದೇಶ

ಅಮೆರಿಕ ನೀಡುತ್ತಿದ್ದ ಎಲ್ಲಾ ರೀತಿಯ ವಿದೇಶಿ ನೆರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಇಸ್ರೇಲ್ ಮತ್ತು ಈಜಿಪ್ಟ್‌ಗೆ ತುರ್ತು ಆಹಾರ ಮತ್ತು ಮಿಲಿಟರಿ ನಿಧಿಯನ್ನು ಸ್ಥಗಿತಗೊಳಿಸಿಲ್ಲ. ಹೊಸ ಆರ್ಥಿಕ ನೆರವನ್ನು ನೀಡದಂತೆ ಅಮೆರಿಕದ ರಾಜ್ಯಗಳಿಗೆ ಅಮೆರಿಕದ ವಿದೇಶಾಂಗ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.

ಅಮೆರಿಕದಿಂದ ವಿದೇಶಗಳಿಗೆ  ಕೊಡುತ್ತಿದ್ದ ನೆರವು ಹಣಕ್ಕೆ ಕತ್ತರಿ;  ಡೊನಾಲ್ಡ್‌ ಟ್ರಂಪ್‌ರಿಂದ ಆದೇಶ

Donald Trump

Profile Vishakha Bhat Jan 25, 2025 11:53 AM

ವಾಷಿಂಗ್ಟನ್‌ : ಅಮೆರಿಕದ (America) ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಟ್ರಂಪ್‌ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿಯೇ ಅಮೆರಿಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಟ್ರಂಪ್‌ ಕೆಲ ನೂತನ ಕಾಯಿದೆ ಜಾರಿಗೆ ತಂದರೆ ಕೆಲ ಹಳೆ ಕಾಯಿದೆಯನ್ನು ರದ್ದು ಮಾಡಿದ್ದಾರೆ. ಇತ್ತೀಚೆಗೆ ಜನ್ಮದತ್ತ ಪೌರತ್ವ ರದ್ಧತಿ ಆದೇಶಕ್ಕೆ ಸಹಿ ಹಾಕಿದ್ದರು. ನಂತರ ವಿಶ್ವಸಂಸ್ಥೆಗೆ ನೀಡುವ ಅನುದಾನವನ್ನು ಕಡಿತಗೊಳಿಸಿದ್ದರು. ಇದೀಗ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಟ್ರಂಪ್‌ ಸರ್ಕಾರ ಇಸ್ರೇಲ್ ಮತ್ತು ಈಜಿಪ್ಟ್ ಅನ್ನು ಹೊರತುಪಡಿಸಿ ಉಕ್ರೇನ್ ಸೇರಿದಂತೆ ಎಲ್ಲಾ ವಿದೇಶಿ ನೆರವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ.

ಜಗತ್ತಿನ ಅತೀ ದೊಡ್ಡ ದಾನಿಯಾಗಿರುವ ಅಮೆರಿಕ ಉಕ್ರೇನ್‌ ದೇಶಕ್ಕೆ ಅಮೆರಿಕ ನೀಡುತ್ತಿದ್ದ ಎಲ್ಲಾ ರೀತಿಯ ವಿದೇಶಿ ನೆರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಇಸ್ರೇಲ್ ಮತ್ತು ಈಜಿಪ್ಟ್‌ಗೆ ತುರ್ತು ಆಹಾರ ಮತ್ತು ಮಿಲಿಟರಿ ನಿಧಿಯನ್ನು ಸ್ಥಗಿತಗೊಳಿಸಿಲ್ಲ. ಹೊಸ ಆರ್ಥಿಕ ನೆರವನ್ನು ನೀಡದಂತೆ ಅಮೆರಿಕದ ರಾಜ್ಯಗಳಿಗೆ ಅಮೆರಿಕದ ವಿದೇಶಾಂಗ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಈ ಆದೇಶದ ಪ್ರತಿಯನ್ನು ಹೊರಡಿಸಿದ್ದಾರೆ.

ಮಾನವೀಯ ದೃಷ್ಟಿಯಿಂದ ಕೆಲವೊಂದು ತುರ್ತು ಹಾಗೂ ಆರೋಗ್ಯ ಸೇವೆಗಳಿಗೆ ನೀಡುವ ನೆರವನ್ನು ಮುಂದುವರಿಸಲು ಅಮೆರಿಕ ನಿರ್ಧರಿಸಿದೆ. ಆಸ್ಪತ್ರೆಗಳು, ಔಷಧಿ ಸೇರಿದಂತೆ ತುರ್ತು ಆರೋಗ್ಯ ಸೇವೆಗಳಿಗೆ ನಿರ್ದಿಷ್ಟ ವಿನಾಯಿತಿ ಕೊಡುವುದಾಗಿ ಅಮೆರಿಕ ಹೇಳಿದೆ. ಆದರೆ, ಏಡ್ಸ್‌ ಜಾಗೃತಿ ಹಾಗೂ ಪರಿಹಾರ ಮೊತ್ತವನ್ನು ಸಹ ತಡೆಹಿಡಿಯಲಾಗಿದೆ. ಈ ಹಿಂದೆ 2003 ರಲ್ಲಿ ಜಾರ್ಜ್ W. ಬುಷ್ ಅವರು ಅಧ್ಯಕ್ಷರಾಗಿದ್ದಾಗ, ಮಾನವೀಯ ದೃಷ್ಟಿಯಲ್ಲಿ ನೆರವು ನೀಡುವುದನ್ನು ಜಾರಿಗೆ ತಂದಿದ್ದರು. ಇದೀಗ ಟ್ರಂಪ್‌ ಅದಕ್ಕೆ ಕೋಕ್‌ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Dr Vijay Darda Column: ಡೊನಾಲ್ಡ್‌ ಟ್ರಂಪ್‌ ದೌಲತ್ತಿನಿಂದ ಜಗತ್ತಿಗೆ ಆತಂಕ !

2023ನೇ ಸಾಲಿನಲ್ಲಿ 60 ಶತಕೋಟಿ ಡಾಲರ್‌ ನೆರವನ್ನು ಅಮೆರಿಕ ಕೊಟ್ಟಿತ್ತು. ಇದು ಅಮೆರಿಕದ ಬಜೆಟ್‌ನ ಶೇ 1ರಷ್ಟು ಮೊತ್ತವಾಗಿದೆ. ಬೈಡನ್‌ ಅಧ್ಯಕ್ಷರಾಗಿದ್ದಾಗ ಉಕ್ರೇನ್‌ಗೆ ಸಹಾಯ ಮಾಡಿದ್ದರು. ಇದೀಗ ಟ್ರಂಪ್‌ ಅವರು ಎಲ್ಲದಕ್ಕೂ ಕಡಿವಾಣ ಹಾಕಲಿದ್ದಾರೆ.