ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Germany Election: ಜರ್ಮನಿಯಲ್ಲಿ ಕನ್ಸರ್ವೇಟಿವ್‌ ಮೈತ್ರಿಕೂಟದ ವಿಜಯ ; ಶುಭ ಕೋರಿದ ಟ್ರಂಪ್‌

ಜರ್ಮನಿಯಲ್ಲಿ ನಡೆದ ಚುನಾವಣೆಯಲ್ಲಿ ಫ್ರೆಡ್ರಿಕ್ ಮೆರ್ಝ್ ಗೆಲುವಿನ ನಗೆ ಬೀರಿದ್ದಾರೆ. ಫ್ರೆಡ್ರಿಕ್ ಮೆರ್ಜ್ ನೇತೃತ್ವದ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಅಭಿನಂದಿಸಿದ್ದಾರೆ . ಫ್ರೆಡ್ರಿಕ್ ಮೆರ್ಜ್ ಜರ್ಮಿನಿಯ ನೂತನ ಚಾನ್ಸಲರ್‌ ಆಗಿ ಅಯ್ಕೆಯಾಗಿದ್ದಾರೆ.

ಜರ್ಮನಿ ಚುನಾವಣೆ

ಬರ್ಲಿನ್‌: ರವಿವಾರ ಜರ್ಮನಿಯಲ್ಲಿ ನಡೆದ (Germany Election) ಚುನಾವಣೆಯಲ್ಲಿ ಕ ಫ್ರೆಡ್ರಿಕ್ ಮೆರ್ಝ್ ಗೆಲುವಿನ ನಗೆ ಬೀರಿದ್ದಾರೆ. ಫ್ರೆಡ್ರಿಕ್ ಮೆರ್ಜ್ ನೇತೃತ್ವದ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋಮವಾರ ಅಭಿನಂದಿಸಿದ್ದಾರೆ . ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ ಮೀಡಿಯಾದಲ್ಲಿ ಅವರು ಶುಭ ಕೋರಿದ್ದಾರೆ. ಈ ಫಲಿತಾಂಶಗಳು ದೇಶದ ರಾಜಕೀಯ ಭೂಪಟದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸಿದ್ದು, ಫ್ರೆಡ್ರಿಕ್ ಮೆರ್ಜ್ ಜರ್ಮಿನಿಯ ನೂತನ ಚಾನ್ಸಲರ್‌ ಆಗಿ ಅಯ್ಕೆಯಾಗಿದ್ದಾರೆ. ಜರ್ಮನಿಯ ಜನರು ಓಲಾಫ್ ಷೋಲ್ಜ್ ನೇತೃತ್ವದ ಮಧ್ಯ-ಎಡ ಸರ್ಕಾರದ ಸಾಮಾನ್ಯ ಜ್ಞಾನದ ಕೊರತೆಯ ನೀತಿಗಳನ್ನು ತಿರಸ್ಕರಿಸಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌ ಜರ್ಮಿನಿಯ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.

ಅಮೆರಿಕದಂತೆಯೇ, ಜರ್ಮನಿಯ ಜನ ಕೂಡ ಸಾಮಾನ್ಯ ಜ್ಞಾನದ ಕೊರತೆಯ ಕಾರ್ಯಸೂಚಿಯಿಂದ ಬೇಸತ್ತಿದ್ದರು. ವಿಶೇಷವಾಗಿ ಓಲಾಫ್ ಷೋಲ್ಜ್ ಅವರ ಸರ್ಕಾರದ ವಲಸೆ ನೀತಿ ಜರ್ಮನಿಯ ಜನರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಕನ್ಸರ್ವೇಟಿವ್‌ ಮೈತ್ರಿಕೂಟ ಅಧಿಕಾರಕ್ಕೆ ಬಂದಿರುವುದು, ಜರ್ಮನಿಗೆ ಒಳ್ಳೆಯ ದಿನಗಳನ್ನು ತರಲಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಬಿಲಿಯನೇರ್‌ ಉದ್ಯಮಿ ಎಲಾನ್‌ ಮಸ್ಕ್‌ ಸೇರಿದಂತೆ ಹಲವು ಅಮೆರಿಕನ್‌ ಖ್ಯಾತನಾಮರು, ಜರ್ಮನಿಯ ರಾಷ್ಟ್ರೀಯ ಚುನಾವಣೆಯಲ್ಲಿ AfD ಪಕ್ಷಕ್ಕೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರು. ಪರಿಣಾಮವಾಗಿ AfD ಪಕ್ಷ ಚುನಾವಣೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಜರ್ಮನಿಯ ರಾಜಕಾರಣ ಮತ್ತೊಮ್ಮೆ ಮಧ್ಯ-ಬಲಪಂಥದತ್ತ ವಾಲಿದೆ.

ಈ ಸುದ್ದಿಯನ್ನೂ ಓದಿ : Donald Trump: ಭಾರತಕ್ಕೆ ಎಂಟ್ರಿ ಕೊಡಲು ಟೆಸ್ಲಾ ಸಿದ್ಧತೆ; ಎಲಾನ್‌ ಮಸ್ಕ್‌ ನಿರ್ಧಾರ ಅನ್ಯಾಯ ಎಂದ ಡೊನಾಲ್ಡ್‌ ಟ್ರಂಪ್‌

ಇವೆಲ್ಲವುದರ ನಡುವೆ ಫ್ರೆಡ್ರಿಕ್ ಮೆರ್ಜ್‌ ಮೆರಿಕ, ರಷ್ಯಾದ ಪ್ರಭಾವದಿಂದ ಜರ್ಮನಿಯನ್ನು ಹೊರತರಲು ಬಯಸಿದ್ದು, ಯುರೋಪ್‌ ಕೇಂದ್ರಿತ ರಾಜಕಾರಣದತ್ತ ಅವರು ಹೆಚ್ಚು ಒಲವು ಹೊಂದಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಟ್ರಂಪ್ ಆಡಳಿತದ ಜತೆಗಿನ ಸಂಬಂಧ, ರಷ್ಯಾ- ಉಕ್ರೇನ್ ಸಂಘರ್ಷ ಮತ್ತು ಯೂರೋಪ್ ಖಂಡದ ಭದ್ರತಾ ಕಳವಳಗಳು ಸೇರಿದಂತೆ ಯುರೋಪಿಯನ್ ಸವಾಲುಗಳ ನಡುವೆಯೇ ನಡೆದಿರುವ ಚುನಾವಣೆಯಲ್ಲಿ ಸರ್ಕಾರ ರಚಿಸಲು ಮೆರ್ಜ್‌ ಸಜ್ಜಾಗಿದ್ದಾರೆ.