ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Droupadi Murmu: ಆರ್ಥಿಕ ಹೊರೆ ಇಳಿಕೆ: ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಯನ್ನು ಬೆಂಬಲಿಸಿದ ರಾಷ್ಟ್ರಪತಿ ದ್ರೌಪದಿ ಮರ್ಮು

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ರಾಜ್ಯದ ಮೇಲಿನ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಉತ್ತಮ ಆಡಳಿತವನ್ನು ಪ್ರತಿಪಾದಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮರ್ಮು ತಿಳಿಸಿದರು.

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮರ್ಮು ಮೆಚ್ಚುಗೆ

ದ್ರೌಪದಿ ಮರ್ಮು

Profile Ramesh B Jan 25, 2025 9:22 PM

ಹೊಸದಿಲ್ಲಿ: ಒಂದು ರಾಷ್ಟ್ರ ಒಂದು ಚುನಾವಣೆ (One Nation One Election) ಮಸೂದೆಗೆ ಬೆಂಬಲ ಸೂಚಿಸಿದ ರಾಷ್ಟ್ರಪತಿ ದ್ರೌಪದಿ ಮರ್ಮು (Droupadi Murmu) ಅವರು, "ಇಷ್ಟು ದೊಡ್ಡ ಸುಧಾರಣೆಗಳಿಗೆ ದೂರದೃಷ್ಟಿಯ ಧೈರ್ಯ ಬೇಕು. ಇದು ಉತ್ತಮ ಆಡಳಿತದ ನಿಯಮಗಳನ್ನು ಮರು ವ್ಯಾಖ್ಯಾನಿಸುತ್ತದೆ. ರಾಜ್ಯದ ಮೇಲಿನ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಉತ್ತಮ ಆಡಳಿತವನ್ನು ಒಂದು ರಾಷ್ಟ್ರ, ಒಂದು ಚುನಾವಣೆ ಪ್ರತಿಪಾದಿಸುತ್ತದೆʼʼ ಎಂದರು. ಗಣರಾಜ್ಯೋತ್ಸವ (Republic Day)ದ ಮುನ್ನಾ ದಿನವಾರ ಶನಿವಾರ (ಜ. 25) ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಿದರು.

"ಸಂವಿಧಾನವು ಭಾರತೀಯರಾದ ನಮ್ಮ ಗುರುತಿಗೆ ಉತ್ತಮ ಅಡಿಪಾಯ ಒದಗಿಸುತ್ತದೆ. ಅದು ನಮ್ಮನ್ನು ಒಂದು ಕುಟುಂಬವಾಗಿ ಒಟ್ಟು ಸೇರಿಸುತ್ತದೆ" ಎಂದು ಅವರು ತಿಳಿಸಿದರು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಯಾವಾಗಲೂ ಭಾರತದ ನಾಗರಿಕ ಪರಂಪರೆಯ ಭಾಗ ಎಂದು ಅವರು ಬಣ್ಣಿಸಿದರು.



"ನಾಗರಿಕ ಸದ್ಗುಣಗಳು ಸಹಸ್ರಮಾನಗಳಿಂದ ನಮ್ಮ ನೈತಿಕ ದಿಕ್ಸೂಚಿಯ ಭಾಗವಾಗಿರುವುದರಿಂದ ಸಂವಿಧಾನವು ಜೀವಂತ ದಾಖಲೆ ಎನಿಸಿಕೊಂಡಿದೆ. ಕಳೆದ 75 ವರ್ಷಗಳಲ್ಲಿ, ಸಂವಿಧಾನವು ನಮ್ಮ ಅಭಿವೃದ್ದಿಗೆ ದಾರಿ ಮಾಡಿಕೊಟ್ಟಿದೆ. ಕರಡು ಸಮಿತಿಯ ಅಧ್ಯಕ್ಷ ಡಾ. ಭೀಮರಾವ್ ಅಂಬೇಡ್ಕರ್ ಮತ್ತು ನಮಗೆ ಸಂವಿಧಾನವನ್ನು ನೀಡಿದ ಇತರ ಸದಸ್ಯರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಸಂವಿಧಾನ ಅನುಷ್ಠಾನಗೊಂಡ ನಂತರದ ಈ 75 ವರ್ಷಗಳು ನಮ್ಮ ಯುವ ಗಣರಾಜ್ಯದ ಸರ್ವಾಂಗೀಣ ಪ್ರಗತಿಯ ಒಡನಾಡಿಗಳಾಗಿವೆ" ಎಂದು ಅವರು ಹೇಳಿದರು.

ತಮ್ಮ 3ನೇ ಗಣರಾಜ್ಯೋತ್ಸವದ ಮುನ್ನಾದಿನದ ಭಾಷಣದಲ್ಲಿ ಮುರ್ಮು ಅವರು, "ಸರ್ಕಾರವು ಅಭಿವೃದ್ಧಿಯ ಕಲ್ಪನೆಯನ್ನು ಮರು ವ್ಯಾಖ್ಯಾನಿಸಿದೆ, ಮೂಲಭೂತ ಅವಶ್ಯಕತೆಗಳನ್ನು ಅರ್ಹತೆಯ ವಿಷಯವನ್ನಾಗಿ ಮಾಡಿದೆ" ಎಂದು ಹೇಳಿದರು.

"ದೇಶದಲ್ಲಿ ದಶಕಗಳಿಂದ ಉಳಿದಿರುವ ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ತೊಡೆದುಹಾಕಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಅದರ ಭಾಗವಾಗಿ ಬ್ರಿಟಿಷ್ ಯುಗದ ಕ್ರಿಮಿನಲ್ ಕಾನೂನುಗಳನ್ನು 3 ಹೊಸ ಆಧುನಿಕ ಕಾನೂನುಗಳನ್ನಾಗಿ ಬದಲಾಯಿಸಲಾಗಿದೆʼʼ ಎಂದು ಅವರು ಉಲ್ಲೇಖಿಸಿದರು.

ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷರತಾ ಅಧಿನಿಯಮ್ ಅನ್ನು ಪರಿಚಯಿಸಿರುವುದನ್ನು ಅವರು ಪ್ರಸ್ತಾವಿಸಿದರು. ಇದು ಕೇವಲ ಶಿಕ್ಷೆಗಿಂತ ನ್ಯಾಯ ವಿತರಣೆಗೆ ಆದ್ಯತೆ ನೀಡುತ್ತದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಆರ್ಥಿಕ ಬೆಳವಣಿಗೆಯ ದರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ʼʼಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ರೈತರು ಮತ್ತು ಕಾರ್ಮಿಕರಿಗೆ ಆದಾಯವನ್ನು ಹೆಚ್ಚಿಸಿದೆ ಮತ್ತು ಅನೇಕರನ್ನು ಬಡತನದಿಂದ ಮೇಲಕ್ಕೆತ್ತಿದೆʼʼ ಎಂದು ಪ್ರತಿಪಾದಿಸಿದರು.

ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಬಲಪಡಿಸಲು ಸರ್ಕಾರ ನಡೆಸಿರುವ ಪ್ರಯತ್ನಗಳನ್ನು ಉಲ್ಲೇಖಿಸಿದರು. 20ನೇ ಶತಮಾನದ ಆರಂಭಿಕ ಸ್ವಾತಂತ್ರ್ಯ ಹೋರಾಟಗಾರರು ಸಂಘಟಿತ ಸ್ವಾತಂತ್ರ್ಯ ಚಳವಳಿಯಲ್ಲಿ ರಾಷ್ಟ್ರವನ್ನು ಒಗ್ಗೂಡಿಸಿದ್ದಕ್ಕಾಗಿ ರಾಷ್ಟ್ರಪತಿ ಅವರನ್ನು ಶ್ಲಾಘಿಸಿದರು ಮತ್ತು ಭಾರತವು ತನ್ನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮರುಶೋಧಿಸಲು ಸಹಾಯ ಮಾಡಿದ ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಅಪ್ರತಿಮ ವ್ಯಕ್ತಿಗಳನ್ನು ನೆನಪಿಸಿಕೊಂಡರು.

ಈ ಸುದ್ದಿಯನ್ನೂ ಓದಿ: Republic Day Special 2025: ಪರಿಸರ ಪ್ರೇಮಿಗಳಿಗಾಗಿ ಬಂತು ಪರಿಸರ ಸ್ನೇಹಿ ಸೀಡ್ ಪೇಪರ್ ಬ್ಯಾಡ್ಜ್