ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Republic Day Special 2025: ಪರಿಸರ ಪ್ರೇಮಿಗಳಿಗಾಗಿ ಬಂತು ಪರಿಸರ ಸ್ನೇಹಿ ಸೀಡ್ ಪೇಪರ್ ಬ್ಯಾಡ್ಜ್

Republic Day Special 2025: ಗಣರಾಜ್ಯೋತ್ಸವದಂದು ರಾಷ್ಟ್ರಪ್ರೇಮ ಬಿಂಬಿಸುವ ಪರಿಸರ ಸ್ನೇಹಿಗಳಿಗಾಗಿ ಸೀಡ್ ಪೇಪರ್ ಬ್ಯಾಡ್ಜ್ ಹಾಗೂ ಕಿಟ್‌ಗಳು ಬಿಡುಗಡೆಗೊಂಡಿವೆ. ಏನಿದು ಸೀಡ್ ಪೇಪರ್ ಬ್ಯಾಡ್ಜ್? ಇಲ್ಲಿದೆ ಡಿಟೇಲ್ಸ್.

Republic Day Special 2025: ಪರಿಸರ ಪ್ರೇಮಿಗಳಿಗಾಗಿ ಬಂತು ಪರಿಸರ ಸ್ನೇಹಿ ಸೀಡ್ ಪೇಪರ್ ಬ್ಯಾಡ್ಜ್

ಚಿತ್ರಗಳು: ಸೀಡ್ ಪೇಪರ್ ಇಂಡಿಯಾ ಬ್ಯಾಡ್ಜ್ & ಕಿಟ್

Profile Siddalinga Swamy Jan 25, 2025 8:03 PM

| ಶೀಲಾ ಸಿ. ಶೆಟ್ಟಿ, ಫ್ಯಾಷನ್ ಪತ್ರಕರ್ತೆ

ಗಣರಾಜ್ಯೋತ್ಸವದಂದು ಉಡುಪಿನೊಂದಿಗೆ ಧರಿಸಬಹುದಾದ ತಿರಂಗಾ ಬ್ಯಾಡ್ಜ್‌ಗಳು (Republic Day Special 2025) ಇದೀಗ ಪರಿಸರ ಸ್ನೇಹಿಯಾಗಿವೆ. ನಾನಾ ವಿನ್ಯಾಸದಲ್ಲಿ ಲಭ್ಯವಿದ್ದ ಇವುಗಳಲ್ಲಿ ಇದೀಗ ಎಕೋ ಫ್ರೆಂಡ್ಲಿ ಬ್ಯಾಡ್ಜ್‌ಗಳು ಆಗಮಿಸಿದ್ದು, ಪರಿಸರ ಪ್ರೇಮಿಗಳನ್ನು ಸೆಳೆದಿವೆ.

ಪರಿಸರ ಸ್ನೇಹಿ ತಿರಂಗಾ ಆಕ್ಸೆಸರೀಸ್

ಈ ಸಂದರ್ಭದಲ್ಲಿ ರಾಷ್ಟ್ರಪ್ರೇಮ ಬಿಂಬಿಸುವ ನಾನಾ ಆಕ್ಸೆಸರೀಸ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಇವುಗಳ ಮಧ್ಯೆ ಪರಿಸರ ಸ್ನೇಹಿ ಸೀಡ್ ಪೇಪರ್ ಬ್ಯಾಡ್ಜ್‌ಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಈಗಾಗಲೇ ಸಾಕಷ್ಟು ಐಟಿ ಹಾಗೂ ಬಿಪಿಒ ಕಂಪನಿಗಳು ಇವುಗಳನ್ನು ಖರೀದಿಸಿ ಉದ್ಯೋಗಿಗಳಿಗೆ ಹಂಚಿವೆ ಎನ್ನಲಾಗಿದೆ. ಇನ್ನು ಸಾಕಷ್ಟು ಸಮಾಜಮುಖಿ ಸಂಘ-ಸಂಸ್ಥೆಗಳು ಕೂಡ ಸೀಡ್ ಪೇಪರ್ ಬ್ಯಾಡ್ಜ್‌ ತಯಾರಿಸುವುದರಲ್ಲಿ ಮತ್ತು ಮಾರಾಟ ಮಾಡುವುದರಲ್ಲಿ ತೊಡಗಿಸಿಕೊಂಡಿವೆ.

4

ಏನಿದು ಸೀಡ್ ಪೇಪರ್ ಬ್ಯಾಡ್ಜ್?

ನಾನಾ ಸಸ್ಯದ ಬೀಜಗಳನ್ನು ಸೇರಿಸಿ, ಜೈವಿಕ ವಸ್ತುಗಳಿಂದ ತಯಾರಿಸಲಾಗುವ ಹ್ಯಾಂಡ್‌ಮೇಡ್ ತಿರಂಗಾ ಬ್ಯಾಡ್ಜ್‌ಗೆ ಸೀಡ್ ಪೇಪರ್ ಬ್ಯಾಡ್ಜ್ ಎಂದು ಕರೆಯಲಾಗುತ್ತದೆ. ಮೆಟಲ್ ಹಾಗೂ ಪ್ಲಾಸ್ಟಿಕ್ ಬ್ಯಾಡ್ಜ್ ಬಳಸುವ ಬದಲು ಈ ಹ್ಯಾಂಡ್‌ಮೇಡ್ ಬ್ಯಾಡ್ಜ್‌ಗಳನ್ನು ಬಳಸಬಹುದು.

ಹಾಗೆಂದು, ಈ ಕಾಗದದ ಬ್ಯಾಡ್ಜ್ ಬಳಸಿದ ನಂತರ ಎಸೆಯಕೂಡದು. ಮರು ಬಳಕೆ ಮಾಡಬಹುದು. ಬ್ಯಾಡ್ಜ್‌ ಬಳಸಿದ ನಂತರ ಎರಡರಿಂದ ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಕುಂಡಕ್ಕೆ ಹಾಕಬಹುದು. ಇಲ್ಲವೇ ಮಣ್ಣಿನಲ್ಲಿ ಹಾಕಬಹುದು. ಪ್ರತಿದಿನ ನೀರು ಹಾಕಿದಲ್ಲಿ, ಕೆಲವು ದಿನಗಳಲ್ಲಿ ಇದರೊಳಗಿನ ಬೀಜವು ಮೊಳಕೆಯೊಡೆದು ಸಸಿಯಾಗುತ್ತದೆ. ತ್ಯಾಜ್ಯವಾಗುವುದಿಲ್ಲ. ಬದಲಿಗೆ ಪರಿಸರಕ್ಕೆ ಚಿಕ್ಕ ಕೊಡುಗೆ ನೀಡಿದಂತಾಗುತ್ತದೆ.

5

ಪರಿಸರ ಸ್ನೇಹಿಯಾಗಲು ಅವಕಾಶ

ಪರಿಸರ ಸ್ನೇಹಿಯಾಗಿರುವ ಈ ತಿರಂಗಾ ಸೀಡ್ ಪೇಪರ್ ಬ್ಯಾಡ್ಜ್‌ಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಇದರಿಂದ ನಾವು ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಅಷ್ಟು ಮಾತ್ರವಲ್ಲ, ಈ ಬ್ಯಾಡ್ಜ್‌ಗಳಿಗೆ ಬಳಸಿರುವ ಶಾಯಿ ಕೂಡ ಸಾವಯವ ಇಂಕ್ ಆಗಿದ್ದು ಇದರಿಂದ ಪರಿಸರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಸಾಕಷ್ಟು ಕಾರ್ಪೋರೇಟ್‌ ಸಂಸ್ಥೆಗಳು ಈ ಬಾರಿ ಎಕೋ ಫ್ರೆಂಡ್ಲಿ ಸೀಡ್ ಪೇಪರ್ ಬ್ಯಾಡ್ಜ್‌ಗಳನ್ನು ಖರೀದಿಸಿವೆ. ಹಲವಾರು ಸಂಘ-ಸಂಸ್ಥೆಗಳು ಇವುಗಳನ್ನೇ ಬಳಸಲು ನಿರ್ಧರಿಸಿವೆ ಎನ್ನುವ ಸೀಡ್ ಪೇಪರ್ಸ್‌ ಸಂಸ್ಥೆಯ ಸ್ಥಾಪಕ ರೋಷನ್‌ ರೇ ಅವರು ಈಗಾಗಲೇ ಸೇನೆಯ ಕೆಲವು ವಿಭಾಗಗಳಿಗೆ ಉಚಿತವಾಗಿ ವಿತರಿಸಿದ್ದಾರೆ. ಪರಿಸರ ಸಂರಕ್ಷಣೆ ಸಂದೇಶವನ್ನು ಸಾಕಷ್ಟು ಕಡೆ ತಲುಪಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Republic Day Nail Art 2025: ಗಣರಾಜ್ಯೋತ್ಸವದ ಹಿನ್ನೆಲೆ ಟ್ರೆಂಡಿಯಾದ ತಿರಂಗಾ ನೇಲ್ ಆರ್ಟ್

ಆನ್‌ಲೈನ್‌ನಲ್ಲಿ ಲಭ್ಯ

ಮೇಲಿನ ಸಂಸ್ಥೆ ಸೇರಿದಂತೆ, ಸಾಕಷ್ಟು ನಾನಾ ಬ್ರಾಂಡ್‌ಗಳು ಆನ್‌ಲೈನ್‌ನಲ್ಲಿ ಎಕೋ ಫ್ರೆಂಡ್ಲಿ ಬ್ಯಾಡ್ಜ್‌ಗಳನ್ನು ಮಾರಾಟ ಮಾಡುತ್ತಿವೆ. ಪರಿಸರ ಪ್ರೇಮಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)