ಭಾರತದ ಮೊದಲ ‘ಇಂಟರ್ನೆಟ್ ಎಕಾನಾಮಿ ಇಂಡೆಕ್ಸ್ ಫಂಡ್’ ಪರಿಚಯಿಸಿದ ಎಡಲ್ವೀಸ್ ಮ್ಯೂಚ್ವಲ್ ಫಂಡ್
ಬಿಎಸ್‌ಇ 500 ಸೂಚ್ಯಂಕದಲ್ಲಿನ ಆಯ್ದ 20 ಷೇರುಗಳ ಪೋರ್ಟ್ಫೋಲಿಯೋ ಹೊಂದಿದ್ದು, ಸಾಂಪ್ರ ದಾಯಿಕ ಐಟಿ, ಸಾಫ್ಟ್‌ವೇರ್ ಕಂಪನಿಗಳನ್ನು ಹೊರಗಿಡಲಾಗಿದ್ದು ಪಾರದರ್ಶಕ, ನಿಯಮ ಆಧಾರಿತ ವಿಧಾನವನ್ನು ಅನುಸರಿಸಿದೆ. ಈ ನೂತನ ಫಂಡ್ ಭಾರತದ ಇಂಟರ್ನೆಟ್ ಆಧಾರಿತ ಅವಕಾಶವನ್ನು ಸೂಚಿಸುವ ಉದ್ಯೋಗಗಳ ಕಾರ್ಯಾಚರಣೆಯನ್ನು ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ.


ಎಡಲ್ವೀಸ್ ಮ್ಯೂಚ್ವಲ್ ಫಂಡ್ ; ಎಡಲ್ವೀಸ್ ಇಂಟರ್ನೆಟ್ ಎಕಾನಾಮಿ ಇಂಡೆಕ್ಸ್ ಫಂಡ್’ ಪರಿಚ ಯಿಸಿದ್ದು ಇದು ಭಾರತದ ಬಿಎಸ್‌ಇ ಇಂಟರ್ನೆಟ್ ಎಕಾನಾಮಿ ಟೋಟಲ್ ರಿಟರ್ನ್ ಇಂಡೆಕ್ಸ್ (ಟಿಆರ್.ಐ)ಗೆ ಪ್ರವೇಶ ಕಲ್ಪಿಸುವ ಭಾರತದ ಮೊದಲ ಇಂಡೆಕ್ಸ್ ಫಂಡ್ ಕೊಡುಗೆಯಾಗಿದೆ. ಈ ನೂತನ ಫಂಡ್ ಆಫರ್ (ಎನ್‌ಎಫ್‌ಒ)ಗೆ ಏಪ್ರಿಲ್ 25 ರಿಂದ ಸಬ್‌ಸ್ಕ್ರಿಪ್ಶನ್ ಆರಂಭವಾಗಲಿದ್ದು ಮೇ 9, 2025ರಂದು ಕೊನೆಗೊಳ್ಳಲಿದೆ. ಈ ನೂತನ ಫಂಡ್ ಭಾರತದ ಭಾರತದ ಡಿಜಿಟಲ್ ಆರ್ಥಿಕತೆಗೆ ಸಂಬಂಧಿಸಿದ ಸಂಸ್ಥೆಗಳ ಸಂಪರ್ಕವನ್ನು ಕಲ್ಪಿಸುತ್ತದೆ.
ಈ ಫಂಡ್‌ನಲ್ಲಿ ಆನ್‌ಲೈನ್ ಸೇವೆ, ಫಿನ್‌ಟೆಕ್, ಇಂಟರ್ನೆಟ್ ಪ್ಲ್ಯಾಟ್ ಫಾರ್ಮ್, ಟೆಲಿಕಾಂ ಇನ್ ಫ್ರಾಸ್ಟ್ರಕ್ಚರ್ ಹಾಗೂ ಡಿಜಿಟಲ್ ಮಾರ್ಕೆಟ್ ಪ್ಲೇಸ್, ಡಿಜಿಟಲ್ ಎಂಟರ್ ಟೇನ್ಮೆಂಟ್ ಸಂಸ್ಥೆಗಳ ಷೇರುಗಳು ಒಳಗೊಂಡಿವೆ.
ಬಿಎಸ್‌ಇ 500 ಸೂಚ್ಯಂಕದಲ್ಲಿನ ಆಯ್ದ 20 ಷೇರುಗಳ ಪೋರ್ಟ್ಫೋಲಿಯೋ ಹೊಂದಿದ್ದು, ಸಾಂಪ್ರ ದಾಯಿಕ ಐಟಿ, ಸಾಫ್ಟ್‌ವೇರ್ ಕಂಪನಿಗಳನ್ನು ಹೊರಗಿಡಲಾಗಿದ್ದು ಪಾರದರ್ಶಕ, ನಿಯಮ ಆಧಾ ರಿತ ವಿಧಾನವನ್ನು ಅನುಸರಿಸಿದೆ. ಈ ನೂತನ ಫಂಡ್ ಭಾರತದ ಇಂಟರ್ನೆಟ್ ಆಧಾರಿತ ಅವಕಾಶ ವನ್ನು ಸೂಚಿಸುವ ಉದ್ಯೋಗಗಳ ಕಾರ್ಯಾಚರಣೆಯನ್ನು ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ.
ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
ಎಡಲ್ವೀಸ್ ಮ್ಯೂಚ್ವಲ್ ಫಂಡ್ ಪ್ರಕಾರ “ 2030ರೊಳಗೆ ಭಾರತದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ಅವಕಾಶವನ್ನು ತಲುಪಲಿದೆ. ಭಾರತದ ಆರ್ಥಿಕತೆ ಸಾಕಷ್ಟು ವೇಗದಲ್ಲಿ ವಿಸ್ತರಿಸುತ್ತಿದೆ. ಈ ನೂತನ ಫಂಡ್ ಹೂಡಿಕೆದಾರರಿಗೆ ಭಾರತದ ಡಿಜಿಟಲ್ ಏಳಿಗೆಯಲ್ಲಿ ಭಾಗಿಯಾಗಲು ನೆರವಾಗು ತ್ತದೆ.
ಈ ಫಂಡ್ ಬಿಎಸ್‌ಇ 500ನಲ್ಲಿ ಸೇರಿದ ಷೇರುಗಳು ಮತ್ತು ನಿರ್ದಿಷ್ಟ ಉಪ-ಕೈಗಾರಿಕೆಗಳಲ್ಲಿ ಸೇರಿದ ಷೇರುಗಳನ್ನು ಆಯ್ದುಕೊಂಡು ಹೂಡಿಕೆ ಮಾಡುತ್ತದೆ. ಅಲ್ಲದೆ, ಈ ಇಂಡೆಕ್ಸ್ ಐಟಿ ಮತ್ತು ಸಾಫ್ಟ್ ವೇರ್ ಕಂಪನಿಗಳಿಗೆ ಯಾವುದೇ ಹಂಚಿಕೆ ಇಲ್ಲದ ಶುದ್ಧ ಇಂಟರ್ನೆಟ್ ಎಕಾನಮಿ ಕಂಪನಿಗಳ ನ್ನಷ್ಟೇ ಒಳಗೊಂಡಿದೆ.
ಭಾರತದ ಡಿಜಿಟಲ್ ಆರ್ಥಿಕತೆಯು ಅದರ ಒಟ್ಟಾರೆ GDP ಗಿಂತ 4 ಪಟ್ಟು ವೇಗವಾಗಿ ಬೆಳೆಯುತ್ತಿದೆ ಮತ್ತು ತ್ವರಿತ ಮತ್ತು ಪರಿವರ್ತನಾತ್ಮಕ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆಯಿದೆ. ವಲಯ ಗಳಲ್ಲಿ ಹೆಚ್ಚುತ್ತಿರುವ ಇಂಟರ್ನೆಟ್ ಅಳವಡಿಕೆ ಮತ್ತು ತಂತ್ರಜ್ಞಾನ ಅಳವಡಿಕೆಯೊಂದಿಗೆ, ಹೂಡಿಕೆದಾರರು ಈ ಡಿಜಿಟಲ್ ಕ್ರಾಂತಿಯಲ್ಲಿ ಭಾಗವಹಿಸಲು ಒಂದು ಬಲವಾದ ಅವಕಾಶವನ್ನು ನಾವು ನೋಡುತ್ತೇವೆ. ಎಡಲ್ವೀಸ್ BSE ಇಂಟರ್ನೆಟ್ ಎಕಾನಮಿ ಇಂಡೆಕ್ಸ್ ಫಂಡ್ ಒಂದು ವಿಶಿಷ್ಟ ವಾದ ಕೊಡುಗೆಯಾಗಿದ್ದು, ಇದು ಹೂಡಿಕೆದಾರರಿಗೆ ಶುದ್ಧ ಇಂಟರ್ನೆಟ್ ಮತ್ತು ಡಿಜಿಟಲ್ ಆರ್ಥಿಕತೆ ಕೇಂದ್ರಿತ ಪೋರ್ಟ್‌ಫೋಲಿಯೊದಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ" ಎಂದು ಎಡಲ್ವೀಸ್ ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಹೇಳಿದರು.
ಹೂಡಿಕೆದಾರರು ಈ ಫಂಡ್‌ನಲ್ಲಿ ಕನಿಷ್ಠ ₹100 ಹೂಡಿಕೆಯೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿ ಸಬಹುದು, ಹಾಗೇ ₹1 ರ ಗುಣಕಗಳಲ್ಲಿ ಹೆಚ್ಚುವರಿ ಹೂಡಿಕೆಯನ್ನು ಕೂಡ ನಡೆಸಬಹುದು. ಈ ಯೋಜನೆಯನ್ನು ಎಡಲ್ವೀಸ್ ಮ್ಯೂಚ್ವಲ್ ಫಂಡ್ ನ ಫ್ಯಾಕ್ಟರ್ ಇನ್ವೆಸ್ಟಿಂಗ್, ಸಹ-ಮುಖ್ಯಸ್ಥರಾದ ಭಾವೇಶ್ ಜೈನ್ ಮತ್ತು ಭರತ್ ಲಹೋಟಿ ನಿರ್ವಹಿಸುತ್ತಾರೆ.