Encounter in Chhattisgarh: ಛತ್ತೀಸ್‌ಗಢದಲ್ಲಿ ನಕ್ಸಲರೊಂದಿಗೆ ಎನ್‌ಕೌಂಟರ್; ಓರ್ವ ಹೆಡ್ ಕಾನ್ಸ್‌ಟೇಬಲ್ ಹುತಾತ್ಮ
Encounter in Chhattisgarh: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಬುಧವಾರ (ಡಿ. 4) ನಕ್ಸಲರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್‌ನ ಹೆಡ್ ಕಾನ್ಸ್‌ಟೇಬಲ್ ಹುತಾತ್ಮರಾಗಿದ್ದಾರೆ
Ramesh B
December 5, 2024
ರಾಯ್‌ಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಬುಧವಾರ (ಡಿ. 4) ನಕ್ಸಲರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (District Reserve Guard-DRG)ನ ಹೆಡ್ ಕಾನ್ಸ್‌ಟೇಬಲ್ ಹುತಾತ್ಮರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ (Encounter in Chhattisgarh).
ಅಬುಜ್‌ಮದ್‌ನ ಸೋನ್ಪುರ್ ಮತ್ತು ಕೊಹ್ಕಮೆಟಾ ಪೊಲೀಸ್ ಠಾಣೆ ಪ್ರದೇಶಗಳ ಗಡಿಯಲ್ಲಿರುವ ಅರಣ್ಯದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ. ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಗಡಿ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಸಂಜೆಯ ತನಕ ಗುಂಡಿನ ಚಕಮಕಿ ಮುಂದಿರಿತ್ತು.
नारायणपुर अबूझमाड़ में नक्सल विरोधी सर्चिंग अभियान में निकले वीर जवान बीरेंद्र कुमार सोरी जी के वीर गति को प्राप्त होने की दुःखद घटना की सूचना प्राप्त हुई ।आपके शहादत को नमन करता हूँ। ईश्वर परिवार जनों को अपार दुःख को सहन शक्ति प्रदान करें pic.twitter.com/ZLdp8qE3PX— Kedar Kashyap (@KedarKashyapBJP) December 4, 2024
"ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಡಿಆರ್‌ಜಿ ನಾರಾಯಣಪುರದ ಹೆಡ್ ಕಾನ್ಸ್‌ಟೇಬಲ್ ಬೀರೇಂದ್ರ ಕುಮಾರ್ ಸೋರಿ (36) ಮೃತಪಟ್ಟಿದ್ದಾರೆ" ಎಂದು ಅವರು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸೋರಿ 2010ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇರಿಕೊಂಡಿದ್ದರು. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರಿಗೆ 2018ರಲ್ಲಿ ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ಮುಂಭಡ್ತಿ ನೀಡಲಾಗಿತ್ತು.ಅವರ ಮೃತದೇಹವನ್ನು ಕಾಡಿನಿಂದ ಹೊರಗೆ ತರಲಾಗುತ್ತಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವವೆ.
7 ನಕ್ಸಲರು ಎನ್‌ಕೌಂಟರ್‌ಗೆ ಬಲಿ
ಡಿ. 1ರಂದು ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 7 ಮಾವೋವಾದಿಗಳು ಹತರಾಗಿದ್ದರು. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂಬ ಅನುಮಾನದ ಮೇಲೆ ಇಬ್ಬರು ಬುಡಕಟ್ಟು ಜನರನ್ನು ಮಾವೋವಾದಿಗಳು ಬರ್ಬರವಾಗಿ ಹತ್ಯೆಗೈದಿರುವ ನಂತರ ನಕ್ಸಲ್ ವಿರೋಧಿ ಕಾರ್ಯಾಚರಣೆ ಚುರುಕುಗೊಂಡಿತ್ತು. ಚಲ್ಬಾಕ್ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿತ್ತು.
ಎನ್‌ಕೌಂಟರ್‌ನಲ್ಲಿ ಹತರಾದವರಲ್ಲಿ ಯೆಲ್ಲಾಂಡು-ನರಸಂಪೇಟೆ ಪ್ರದೇಶ ಸಮಿತಿಯ ಕಮಾಂಡರ್ ಭದ್ರು (35) ಸೇರಿದ್ದಾರೆ. ಇತರರನ್ನು ಏಗೋಳಪು ಮಲ್ಲಯ್ಯ (43), ಮುಸ್ಸಕಿ ದೇವಳ್ (22), ಮುಸ್ಸಕಿ ಜಮುನಾ (23), ಜೈಸಿಂಗ್ (25), ಕಿಶೋರ್ (22) ಮತ್ತು ಕಾಮೇಶ್ (23) ಎಂದು ಗುರುತಿಸಲಾಗಿದೆ. ಇನು ಮೃತರಿಂದ AK-47, G3 ಮತ್ತು INSAS ರೈಫಲ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾತ್ತು. ಕಳೆದ ತಿಂಗಳು ಛತ್ತೀಸ್‌ಗಡದಲ್ಲಿ ನಡೆದ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಬರೋಬ್ಬರಿ 10 ನಕ್ಸಲರನ್ನು ಹೊಡೆದುರುಳಿಸಲಾಗಿತ್ತು. ಸುಕ್ಮಾ ಜಿಲ್ಲೆಯಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಹತ ನಕ್ಸಲರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು.
30 ಮಾವೋವಾದಿಗಳನ್ನು ಹೊಡೆದುರುಳಿಸಿದ್ದ ಭದ್ರತಾ ಪಡೆ
ಅ. 4ರಂದು ಛತ್ತೀಸ್‌ಗಢದ ನಾರಾಯಣಪುರ- ದಾಂತೇವಾಡ ಗಡಿ ಅರಣ್ಯ ಪ್ರದೇಶದಲ್ಲಿಸಂಚು ರೂಪಿಸುತ್ತಿದ್ದ 30 ಮಾವೋವಾದಿಗಳನ್ನು ಭದ್ರತಾ ಪಡೆಗಳು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿತ್ತು.
ಈ ಸುದ್ದಿಯನ್ನೂ ಓದಿ: Naxalite Encounter: ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ