Fire Accident : ಮಂಗಳೂರಿನಲ್ಲಿ ಗುಜರಿ ಅಂಗಡಿಗೆ ಬೆಂಕಿ : 50 ಲಕ್ಷ ರೂ ಪ್ರಮಾಣದ ವಸ್ತುಗಳು ಸುಟ್ಟು ಕರಕಲು
ಮಂಗಳೂರಿನ ಜೆಪ್ಪಿನಮೊಗರು ಎಂಬಲ್ಲಿ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 50 ಲಕ್ಷ ರೂ. ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
Fire Accident -
Vishakha Bhat
Jan 28, 2025 8:37 AM
ಮಂಗಳೂರು: ನಗರದ ಹೊರವಲಯದ ಜೆಪ್ಪಿನಮೊಗರು ಎಂಬಲ್ಲಿ ಗುಜರಿ ಗೋದಾಮಿಗೆ ಭಾನುವಾರ ಬೆಂಕಿ ಬಿದ್ದಿದ್ದು, ಅಂಗಡಿಯಲ್ಲಿದ್ದ ವಸ್ತುಗಳು ಸೇರಿದಂತೆ ನಗದು ಸುಟ್ಟು ಭಸ್ಮವಾಗಿವೆ. ಗುಜರಿ ಗೋದಾಮು ಜೆಪ್ಪಿನಮೊಗರು ನಿವಾಸಿ ನೌಶೀರ್ ಎಂಬವರಿಗೆ ಸೇರಿದ್ದು, ಭಾನುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಹತ್ತಿ ಕೊಳ್ಳುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ಕರೆ ಮಾಡಲಾಗಿದೆ. ತಕ್ಷಣ ಕದ್ರಿ, ಬನ್ವಾಲ್ ಮತ್ತು ಪಾಂಡೇಶ್ವರದಿಂದ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಗೋದಾಮಿನಲ್ಲಿ ಸ್ಕ್ರ್ಯಾಪ್ ವಸ್ತುಗಳು, ಹಳೆಯ ಕಾರುಗಳು, ಇಲೆಕ್ಟ್ರಾನಿಕ್ ವಸ್ತುಗಳು , ಪೀಠೋಪಕರಣಗಳು ಮತ್ತು ಸ್ಕ್ರ್ಯಾಪ್ ಎಲೆಕ್ಟ್ರಾನಿಕ್ ಸರಕುಗಳು ಇದ್ದವು. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಮಾಲೀಕರ ಪ್ರಕಾರ ಹೇಳಿಕೆಯ , ಸುಮಾರು 50 ಲಕ್ಷ ರೂ.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿಗೆ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಸುತ್ತಲಿನ ಸಿಸಿಟಿವಿಯನ್ನು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ : Fire Incident: ರಾಜಾಜಿನಗರದ ಮತ್ತೊಂದು ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಅಗ್ನಿ ಅವಘಡ; 30ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗಾಹುತಿ
ಘಟನಾ ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಮತ್ತು ಸ್ಥಳೀಯ ಕಾರ್ಪೋರೇಟರ್‌ಗಳಾದ ವೀಣಮಂಗಳ, ಭರತ್ ಕುಮಾರ್ ಎಸ್ ಮತ್ತು ಶೈಲೇಶ್ ಶೆಟ್ಟಿ ಆಗಮಿಸಿ ಮಾಲೀಕರಿಗೆ ಸಾಂತ್ವನ ಹೇಳಿದರು.