Mahakumbh Fire: ಮಹಾ ಕುಂಭಮೇಳದಲ್ಲಿ 5ನೇ ಬಾರಿ ಬೆಂಕಿ ಅವಘಡ!
ಮಹಾ ಕುಂಭಮೇಳದಲ್ಲಿ ಐದನೇ ಬಾರಿ ಬೆಂಕಿ ಅವಘಡ ಸಂಭವಿಸಿದ್ದು, ಕೆಲವು ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಬೆಂಕಿ ಅವಘಡವಾಗುತ್ತಿದೆ. ಇತ್ತೀಚೆಗಷ್ಟೇ ಬೆಂಕಿ ತಗುಲಿ ಏಳು ಡೇರೆಗಳು ಸುಟ್ಟು ಭಸ್ಮವಾಗಿದ್ದವು.

ಬೆಂಕಿ ಅವಘಡದಿಂದ ಟೆಂಟ್ ಸುಟ್ಟು ಭಸ್ಮವಾಗಿದೆ

ಲಖನೌ: ಉತ್ತರಪ್ರದೇಶದ(Uttarpradesh) ಪ್ರಯಾಗ್‌ರಾಜ್‌ನಲ್ಲಿ(Prayagraj) ನಡೆಯುತ್ತಿರುವ ಕುಂಭಮೇಳ ಪ್ರದೇಶದ ಸೆಕ್ಟರ್ 19 ರಲ್ಲಿ ಇತ್ತೀಚೆಗಷ್ಟೇ ಬೆಂಕಿ ಅವಘಡ ಸಂಭವಿಸಿತ್ತು. ಪರಿಣಾಮ ಏಳು ಟೆಂಟ್‌ಗಳು ಸುಟ್ಟು ಭಸ್ಮವಾಗಿದ್ದವು. ಇದೀಗ ಮತ್ತೆ ಕುಂಭಮೇಳದ ಖಾಲಿ ಜಾಗವೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು(Mahakumbh Fire), ಟೆಂಟ್‌ಗಳು ಸುಟ್ಟು ಹೋಗಿವೆ. ಕುಂಭಮೇಳ ಪ್ರದೇಶದ ಸೆಕ್ಟರ್ 8 ರಲ್ಲಿ ಈ ಘನಟನೆ ನಡೆದಿದೆ ಎನ್ನಲಾಗಿದೆ. ಯಾವುದೇ ಅಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಕುಮಾರ್ ಶರ್ಮಾ ಘಟನೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ಇದು ಸಣ್ಣ ಬೆಂಕಿ ಅವಘಡವಾಗಿದ್ದು, ಅದು ಹೊತ್ತಿಕೊಂಡ ನಂತರವೇ ನಂದಿಸಲಾಗಿದೆ ಎಂದು ಹೇಳಿದರು. ಇಲ್ಲಿಯವರೆಗೂ ಕುಂಭಮೇಳದಲ್ಲಿ ಐದು ಬೆಂಕಿ ಅವಘಡಗಳು ಸಂಭವಿಸಿದೆ.
#WATCH | Uttar Pradesh: A Fire broke out in an empty camp in Sector 8 of the Kumbh Mela area in Prayagraj. More details awaited pic.twitter.com/BtpjiwOVXp
— ANI (@ANI) February 17, 2025
ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ
ಮಹಾ ಕುಂಭಮೇಳದಲ್ಲಿ ಇತ್ತೀಚೆಗಷ್ಟೇ ಬೆಂಕಿ ಅವಘಡ ಸಂಭವಿಸಿತ್ತು. ಮಹಾ ಕುಂಭಮೇಳ ಪ್ರದೇಶದ ಶಿಬಿರವೊಂದರ ದಾಸ್ತಾನು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದರಿಂದ ಏಳು ಡೇರೆಗಳು ಸುಟ್ಟು ಭಸ್ಮವಾಗಿದ್ದವು. ಇದರೊಂದಿಗೆ ಕಂಬಳಿಗಳು ಹಾಗೂ ಆಹಾರ ಧಾನ್ಯಗಳು ಸೇರಿದಂತೆ ಕೆಲವು ಸಾಮಗ್ರಿಗಳು ಹಾನಿಯಾಗಿದ್ದವು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು ಮಹಾ ಕುಂಭಮೇಳ ಪ್ರದೇಶದ 19ನೇ ಸೆಕ್ಟರ್ ನಲ್ಲಿರುವ ಶಿಬಿರವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಏಳು ಡೇರೆಗಳಿಗೆ ಬೆಂಕಿ ವ್ಯಾಪಿಸಿದೆ ಎಂದು ಮುಖ್ಯ ಅಗ್ನಿಶಾಮಕ ದಳ ಅಧಿಕಾರಿ (ಕುಂಭ್) ಪ್ರಮೋದ್ ಶರ್ಮ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ:Fire Accident: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಅರಮನೆ ಮೈದಾನದಲ್ಲಿ ಕಾಣಿಸಿಕೊಂಡ ಬೆಂಕಿ
ನಾವು ಅಗ್ನಿ ಅವಘಡದ ಕುರಿತು ಮಾಹಿತಿ ಸ್ವೀಕರಿಸುತ್ತಿದ್ದಂತೆಯೆ, ಎರಡು ನಿಮಿಷಗಳಲ್ಲಿ ಅಗ್ನಿಶಾಮಕ ದಳದ ಮೋಟಾರ್ ಬೈಕ್ ಗಳು ಘಟನಾ ಸ್ಥಳವನ್ನು ತಲುಪಿದವು. ಇದರ ಬೆನ್ನಿಗೇ, ನಾಲ್ಕು ಅಗ್ನಿಶಾಮಕ ವಾಹನಗಳು ಆಗಮಿಸಿದವು ಎಂದು ಅವರು ಹೇಳಿದ್ದರು. ಲವ್ ಕುಶ್ ಸೇವಾ ಮಂಡಲ್ ಶಿಬಿರದಲ್ಲಿ ಸಂಜೆ ಸುಮಾರು 6.15ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಸುಮಾರು ಐದು ನಿಮಿಷಗಳೊಳಗಾಗಿ ಬೆಂಕಿಯನ್ನು ಹತೋಟಿಗೆ ತಂದರು ಎಂದು ಮಹಾ ಕುಂಭದ ಪೊಲೀಸ್ ಮಹಾ ನಿರೀಕ್ಷಕ ವೈಭವ್ ಕೃಷ್ಣ ತಿಳಿಸಿದ್ದರು.