ಭಾರತ-ಪಾಕ್ ಯುದ್ಧ ಭೀತಿ; ಪಾಕ್ ಕ್ರಿಕೆಟ್ ಲೀಗ್‌ಗೆ ವಿದೇಶಿ ಆಟಗಾರರು ಗುಡ್‌ಬೈ?
India-Pakistan Tension: ಪಾಕ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 42 ವಿದೇಶಿ ಕ್ರಿಕೆಟಿಗರು ಆಡುತ್ತಿದ್ದಾರೆ. ಇದೀಗ ಯುದ್ಧದ ಭೀತಿಯಲ್ಲಿ ಇವರೆಲ್ಲ ಟೂರ್ನಿಗೆ ಅರ್ಧದಲ್ಲೇ ಗುಡ್‌ಬೈ ಹೇಳುವ ಸಾಧ್ಯತೆ ಎನ್ನಲಾಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತಂಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಹೇಳಿದೆ. ಎಲ್ಲ ವಿದೇಶಿ ಆಟಗಾರರು ಸಂಪೂರ್ಣ ಪಂದ್ಯಾವಳಿ ಆಡಲಿದ್ದಾರೆ ಎಂದಿದೆ.


ಕರಾಚಿ: ಪಹಲ್ಗಾಮ್ ಉಗ್ರದಾಳಿಗೆ ಉತ್ತರವಾಗಿ ಭಾರತ ‘ಆಪರೇಷನ್ ಸಿಂದೂರ್’(Operation Sindoor) ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ಸೇನೆ ಮುಖಾಮುಖಿಯಾಗಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ(India-Pakistan Tension) ಬೆನ್ನಲ್ಲೇ ಪಾಕಿಸ್ಥಾನ್ ಸೂಪರ್ ಲೀಗ್(Pakistan Super League) ಆಡುತ್ತಿರುವ ವಿದೇಶಿ ಕ್ರಿಕೆಟಿಗರೆಲ್ಲ ಆತಂಕಕ್ಕೊಳಗಾಗಿದ್ದು, ಪಂದ್ಯಾವಳಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪಾಕ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 42 ವಿದೇಶಿ ಕ್ರಿಕೆಟಿಗರು ಆಡುತ್ತಿದ್ದಾರೆ. ಇದೀಗ ಯುದ್ಧದ ಭೀತಿಯಲ್ಲಿ ಇವರೆಲ್ಲ ಟೂರ್ನಿಗೆ ಅರ್ಧದಲ್ಲೇ ಗುಡ್‌ಬೈ ಹೇಳುವ ಸಾಧ್ಯತೆ ಎನ್ನಲಾಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತಂಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಹೇಳಿದೆ. ಎಲ್ಲ ವಿದೇಶಿ ಆಟಗಾರರು ಸಂಪೂರ್ಣ ಪಂದ್ಯಾವಳಿ ಆಡಲಿದ್ದಾರೆ ಎಂದಿದೆ.
ಐಪಿಎಲ್ ಪಂದ್ಯದ ವೇಳೆ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೆಕೆಆರ್ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದ ನಡುವೆಯೇ ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಹೀಗಾಗಿ ಐಪಿಎಲ್ ಪಂದ್ಯ ನಡೆಯುವ ಸ್ಟೇಡಿಯಂಗಳಿಗೆ ಭಾರೀ ಬಿಗಿ ಭದ್ರತೆ ಮಾಡಲಾಗಿದೆ.
ಇದನ್ನೂ ಓದಿ IPL 2025: ಪಂಜಾಬ್-ಮುಂಬೈ ಪಂದ್ಯದ ಸ್ಥಳ ಬದಲಾವಣೆ ಸಾಧ್ಯತೆ!
ಭಾರತದ ದಾಳಿಯಿಂದ ಬೆದರಿರುವ ಪಾಕಿಸ್ತಾನವು ಯುದ್ಧನಿಲ್ಲಿಸಲು ವಿಶ್ವ ನಾಯಕರ ಕೈಕಾಲು ಹಿಡಿಯುತ್ತಿದೆ. ಇಷ್ಟಾದರೂ ಅಲ್ಲಿನ ನಾಯಕರು ಮಾತ್ರ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಭಾರತವನ್ನು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ.