#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gauthami Jadav, BBK 11: ಮಂಜುವನ್ನು ಕರೆದುಕೊಂಡು ಶಕ್ತಿ ದೇವತೆ ಬಳಿ ತೆರಳಿದ ಗೌತಮಿ: ಫೋಟೋ ವೈರಲ್

ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಆಚೆ ಬಂದ ತಕ್ಷಣ ಗೌತಮಿ ಅವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಇದರ ಫೋಟೋವನ್ನು ಅವರು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು ಕೂಡ. ಇದೀಗ ಎರಡನೇ ಬಾರಿಗೆ ವನದುರ್ಗಾ ದೇವಸ್ಥಾನಕ್ಕೆ ಗೌತಮಿ ಭೇಟಿ ಕೊಟ್ಟಿದ್ದಾರೆ ವಿಶೇಷ ಎಂದರೆ ಈ ಬಾರಿ ಗೆಳಯ ಉಗ್ರಂ ಮಂಜು ಅವರು ಕೂಡ ಇವರೊಂದಿಗೆ ತೆರಳಿದ್ದಾರೆ.

ಮಂಜುವನ್ನು ಕರೆದುಕೊಂಡು ಶಕ್ತಿ ದೇವತೆ ಬಳಿ ತೆರಳಿದ ಗೌತಮಿ: ಫೋಟೋ ವೈರಲ್

Ugramm Manju and Gauthami Jadav

Profile Vinay Bhat Feb 8, 2025 8:08 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡಿದ್ದು, ಸ್ಪರ್ಧಿಗಳು ತಮ್ಮ ಕುಟುಂಬದವರ ಜೊತೆ ಸಮಯ ಕಳೆದಯುತ್ತಿದ್ದಾರೆ. ವಿನ್ನರ್ ಹನುಮಂತ ತನ್ನ ಹುಟ್ಟೂರಲ್ಲಿ ಅಪ್ಪ-ಅಮ್ಮನ ಜೊತೆ ಇದ್ದಾರೆ. ಕೆಲ ಸ್ಪರ್ಧಿಗಳು ಮಾಧ್ಯಮಕ್ಕೆ ಸಂದರ್ಶನ ಕೊಡುತ್ತಿದ್ದರೆ ಇನ್ನೂ ಕೆಲವರು ಹೊಸ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗುತ್ತಿದ್ದರೆ. ಇದರ ಮಧ್ಯೆ ಫಿನಾಲೆ ವೀಕ್​ಗು ಮುನ್ನ ಬಿಗ್ ಬಾಸ್ ಮನೆಯಿಂದ ಹೊರಬಂದ ಗೌತಮಿ ಜಾಧವ್ ಇನ್​ಸ್ಟಾದಲ್ಲಿ ಒಂದು ಫೋಟೋ ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದಾರೆ.

ತನ್ನ ಪಾಸಿಟಿವಿಟಿ ಮೂಲಕ ಕರ್ನಾಟಕ ಜನತೆಯ ಮನಗೆದ್ದ ಗೌತಮಿ ಬಿಗ್ ಬಾಸ್​ನಲ್ಲಿ ಗೆಳೆಯ-ಗೆಳತಿ ಎಂದೇ ಮಂಜು ಜೊತೆ ಆತ್ಮೀಯರಾಗಿದ್ದರು. ಅವರ ನಡುವೆ ಎಷ್ಟೇ ವೈಮನಸ್ಸು ಅಥವಾ ಗೊಂದಲಗಳಾಗಿದ್ದರು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾ ಪರಿಶುದ್ಧ ಸ್ನೇಹಿತರಾಗಿ ದೊಡ್ಮನೆಯಲ್ಲಿದ್ದರು. ಆದರೆ, ಕೆಲವರು ಇವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡುವ ಕೆಲಸ ಮಾಡಿದ್ದರು. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಗೌತಮಿ ಇದೀಗ ಉಗ್ರಂ ಮಂಜು ಅವರನ್ನು ಶಕ್ತಿ ದೇವತೆ ಬಳಿಗೆ ಕರೆದೊಕೊಂಡು ಹೋಗಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡುತ್ತಿದ್ದ ಗೌತಮಿ ಯಾವಾಗಲೂ ವನದುರ್ಗೆ, ವನದುರ್ಗಮ್ಮ ಎಂದು ಹೇಳುತ್ತಲೇ ಇದ್ದರು. ಆಟವಾಡುವಾಗೆಲ್ಲ ಗೌತಮಿ ಬಾಯಿಂದ ವನದುರ್ಗೆ ಹೆಸರು ಬರುತ್ತಲೇ ಇತ್ತು. ಮಂಜು ಕ್ಯಾಪ್ಟನ್ ಆಗ್ಬೇಕು, ಹನುಮಂತು ಕ್ಯಾಪ್ಟನ್ ಆಗ್ಬೇಕು ಎನ್ನುವ ಸಮಯದಲ್ಲೂ ಗೌತಮಿ ವನದುರ್ಗೆ ಮಂತ್ರವನ್ನು ಜಪಿಸುತ್ತಿದ್ದರು.

ಬಿಗ್ ​ಬಾಸ್​ನಿಂದ ಎಲಿಮಿನೇಟ್ ಆಗಿ ಆಚೆ ಬಂದ ತಕ್ಷಣ ಗೌತಮಿ ಅವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಇದರ ಫೋಟೋವನ್ನು ಅವರು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದರು ಕೂಡ. ಇದೀಗ ಎರಡನೇ ಬಾರಿಗೆ ವನದುರ್ಗಾ ದೇವಸ್ಥಾನಕ್ಕೆ ಗೌತಮಿ ಭೇಟಿ ಕೊಟ್ಟಿದ್ದಾರೆ ವಿಶೇಷ ಎಂದರೆ ಈ ಬಾರಿ ಗೆಳಯ ಉಗ್ರಂ ಮಂಜು ಅವರು ಕೂಡ ಇವರೊಂದಿಗೆ ತೆರಳಿದ್ದಾರೆ. ಅಲ್ಲದೇ ಗೌತಮಿ ಅವರ ಜೊತೆಗೆ ಪತಿಯೂ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೇ ಫೋಟೋವನ್ನು ಗೌತಮಿ ಅವರು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.



ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಇದು ಮಂಜು-ಗೌತಮಿ ಅವರ ಮೊದಲ ಭೇಟಿಯಲ್ಲ. ಮೊನ್ನೆಯಷ್ಟೆ ಇಬ್ಬರೂ ಜೊತೆಗಿರುವ ಫೋಟೋವನ್ನು ಗೌತಮಿ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು. ಇದರಲ್ಲೂ ಕೂಡ ಗೌತಮಿ ಗಂಡ ಅಭಿಷೇಕ್ ಇದ್ದರು. ಅಭಿಷೇಕ್ ಹೆಗಲಮೇಲೆ ಮಂಜು ಕೈ ಹಾಕಿ ನಿಂತಿದ್ದರು. ಇದೀಗ ಈ ಮೂವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

ಇನ್ನು ಮೂಲ ವನದುರ್ಗಾ ದೇವಸ್ಥಾನ ಮಂಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿದೆ. ಬಂಟ್ವಾಳದ ಬಿ. ಸಿ ರೋಡ್ ನಲ್ಲಿ ವನದುರ್ಗಾ ದೇವಸ್ಥಾನವಿದೆ. ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯ ದೇವಸ್ಥಾನದ ಹೆಸರು. ಶಕ್ತಿಯುತ ದೇವತೆ ಇಲ್ಲಿ ನೆಲೆಸಿದ್ದಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ನಿತ್ಯ ನೂರಾರು ಮಂದಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.

Maja Talkies: ಮಜಾ ಟಾಕೀಸ್ ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಯಾರೆಲ್ಲ ಬಂದಿದ್ದಾರೆ ನೋಡಿ