#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Maja Talkies: ಮಜಾ ಟಾಕೀಸ್ ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಯಾರೆಲ್ಲ ಬಂದಿದ್ದಾರೆ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಗೌತಮಿ ಜಾಧವ್, ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಈ ವಾರದ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾಲ್ವರ ವಿಡಿಯೋ ವೈರಲ್ ಆಗಿದೆ. ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಭವ್ಯಾ ಗೌಡ ಮಿಂಚಿದ್ದಾರೆ.

ಮಜಾ ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಯಾರೆಲ್ಲ ಬಂದಿದ್ದಾರೆ ನೋಡಿ

Maja talkies BBK 11

Profile Vinay Bhat Feb 8, 2025 7:27 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್​ನಲ್ಲಿ ಎರಡು ಹೊಸ ಶೋ ಆರಂಭವಾಗಿದೆ. ಒಂದು ಬಾಯ್ಸ್ vs ಗರ್ಲ್ಸ್ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್. ವಿಶೇಷ ಎಂದರೆ ಈ ಎರಡು ಶೋನಲ್ಲಿ ಬಿಗ್ ಬಾಸ್​ ಸ್ಪರ್ಧಿಗಳೇ ತುಂಬಿ ಹೋಗಿದ್ದಾರೆ. ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಲು ಶುರುವಾಗಿರುವ ಮಜಾ ಟಾಕೀಸ್​ನಲ್ಲಿ ಈ ವಾರ ಬಿಗ್ ಬಾಸ್ ಕನ್ನಡ ಸೀಸನ್ 11ರ ಟಾಪ್ ಕಂಟೆಸ್ಟೆಂಟ್​ಗಳು ಬಂದಿದ್ದಾರೆ. ಇವರು ಸೋಫಾ ಮೇಲೆ ಕೂತು ಕುರಿ ಪ್ರತಾಪ್ ಕಾಮಿಡಿಗೆ ನಕ್ಕು-ನಕ್ಕು ಸುಸ್ತಾಗಿದ್ದಾರೆ. ಹಾಗಾದರೆ ಮಜಾ ಟಾಕೀಸ್ ವೇದಿಕೆಗೆ ಯಾರೆಲ್ಲ ಬಂದಿದ್ದಾರೆ?, ಏನೆಲ್ಲ ಮಾಡಿದ್ರು?, ಈ ಕುರಿತು ವರದಿ ಇಲ್ಲಿದೆ ನೋಡಿ.

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಗೌತಮಿ ಜಾಧವ್, ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಈ ವಾರದ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾಲ್ವರ ವಿಡಿಯೋ ವೈರಲ್ ಆಗಿದೆ. ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಭವ್ಯಾ ಗೌಡ ಮಿಂಚಿದ್ರೆ, ಕೋಟ್ ಧರಿಸಿ ತ್ರಿವಿಕ್ರಮ್ ಬಂದಿದ್ದಾರೆ. ಸಿಂಪಲ್ ಆಗಿರುವ ಮಂಜಣ್ಣಗೆ ಸೀರೆಯುಟ್ಟ ಗೌತಮಿ ಸಾಥ್ ನೀಡಿದ್ದಾರೆ.

ಕಲರ್ಸ್ ಕನ್ನಡ ಹಾಗೂ ಮಜಾ ಟಾಕೀಸ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲಿ ಪ್ರೋಮೋ ಹಂಚಿಕೊಂಡಿದೆ. ಬಿಗ್ ಬಾಸ್ ಮನೆಯ ಜೋಡಿಗಳು ಮಜಾ ಟಾಕೀಸ್ ನಲ್ಲಿ ಭರ್ಜರಿ ಮಜಾ ಮಾಡಿವೆ. ಈ ವಾರ ಕೂಡ ಕುರಿ ಪ್ರತಾಪ್‌ ಹಾಸ್ಯ ಜೋರಾಗಿಯೇ ಇದೆ. ಯೋಗರಾಜ್‌ ಭಟ್‌ ಅವರ ಹಾಸ್ಯ, ಪಂಚಿಂಗ್‌ ಡೈಲಾಗ್‌ ಕೂಡ ವೀಕ್ಷಕರಿಗೆ ಕಿಕ್‌ ಕೊಡುವಂತಿದೆ. ಒಟ್ಟಾರೆ ಈ ವಾರದ ಮಜಾ ಟಾಕೀಸ್ ನೋಡಲು ವೀಕ್ಷಕರಂತು ಕಾದು ಕುಳಿತಿದ್ದಾರೆ.



ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆ ನೀಡಲು ಮಜಾ ಟಾಕೀಸ್ ಕಳೆದ ವಾರ ಅದ್ಧೂರಿ ಆರಂಭ ಪಡೆದುಕೊಂಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಮುಗಿತಿದ್ದಂತೆ ಸೃಜನ್ ಲೋಕೇಶ್ ತಮ್ಮ ತಂಡದ ಜೊತೆ ಮಜಾ ಟಾಕೀಸ್ ಶುರು ಮಾಡಿದ್ದರು. ಮಜಾ ಟಾಕೀಸ್ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ತುಕಾಲಿ ಸಂತೋಷ್, ಯೋಗರಾಜ್ ಭಟ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿ ಅನೇಕರು ಮಜಾ ಮನೇಲಿದ್ದಾರೆ.

ಮೊದಲ ಸಂಚಿಕೆಗೆ ಜಿಗರಿ ದೋಸ್ತಿಗಳು ಮುಖ್ಯ ಅತಿಥಿಯಾಗಳಾಗಿ ಬಂದಿದ್ದರು. ಫೆಬ್ರವರಿ ಒಂದರಿಂದ ಶುರುವಾಗಿರುವ ಶೋನಲ್ಲಿ ಯೋಗರಾಜ್ ಭಟ್ ಹೈಲೈಟ್. ಹಿಂದಿನ ವಾರ, ಯೋಗರಾಜ್ ಭಟ್ ಕುಟುಂಬ ಸಮೇತರಾಗಿ ಮಜಾ ಟಾಕೀಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಎರಡನೇ ದಿನ ನಟ ಶರಣ್ ಹಾಗೂ ತರುಣ್ ಬಂದು ಸೃಜನ್ ಲೋಕೇಶ್ ಟೀಂಗೆ ಶುಭಕೋರಿದ್ದರು.

Sangeetha Sringeri: ಸಂಗೀತಾ ಶೃಂಗೇರಿ ಹಾಟ್ ಫೋಟೋ ಕಂಡು ಬೆರಗಾದ ಫ್ಯಾನ್ಸ್