ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Google : ಮಹಾಕುಂಭ ಮೇಳಕ್ಕೆ ಗೂಗಲ್‌ನಲ್ಲಿ ಗುಲಾಬಿ ದಳಗಳ ಸುರಿಮಳೆ​: ನೆಟ್ಟಿಗರಿಂದ ಮೆಚ್ಚುಗೆ

ಮಹಾಕುಂಭ ಮೇಳ ಶುರುವಾಗಿದ್ದು, ಭಕ್ತರು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಗೂಗಲ್‌ ಕೂಡ ಮಹಾಕುಂಭ ಮೇಳಕ್ಕೆ ಗೌರವ ಸೂಚಿಸಿದ್ದು, ಗೂಗಲ್‌ನಲ್ಲಿ ಸರ್ಚ್‌ ಮಾಡಿದರೆ ಗುಲಾಬಿ ದಳದ ಮಳೆ ಸುರಿಯಲಿದೆ.

ಮಹಾಕುಂಭ ಮೇಳಕ್ಕೆ ಗೂಗಲ್‌ನಿಂದ ಗುಲಾಬಿ ಸುರಿಮಳೆ

Mahakumbh

Profile Vishakha Bhat Jan 16, 2025 5:08 PM

ಲಖನೌ ಜ 16, 2025 : ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ ರಾಜ್‌ನಲ್ಲಿ ಜ . 13 ರಿಂದ ಫೆ 26 ರ ವರೆಗೆ ಮಹಾಕುಂಭ ಮೇಳ (Mahakumbh) ನಡೆಯುತ್ತಿದೆ. ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗತಿಕ ಸರ್ಚ್‌ ಎಂಜಿನ್ ದೈತ್ಯ ಗೂಗಲ್ (Google) ವಿಶೇಷ ರೀತಿಯಲ್ಲಿ ಗೌರವ ಸೂಚಿಸಿದೆ.

ಗೂಗಲ್‌ ಕೂಡ ಕುಂಭ ಮೇಳಕ್ಕೆ ಗೌರವ ಸೂಚಿಸಿದ್ದು, ಗೂಗಲ್​ನಲ್ಲಿ ‘Maha Kumbh’ ಎಂದು ಯಾವುದೇ ಭಾಷೆಯಲ್ಲಿ ಸರ್ಚ್​ ಮಾಡಿದರೆ ಸ್ಕ್ರೀನ್​ ಮೇಲೆ ಗುಲಾಬಿ ದಳಗಳು ಬೀಳುತ್ತಿರುವ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಬೇಕಾದರೆ ಗೂಗಲ್‌ಗೆ ಹೋಗಿ ಮಹಾಕುಂಭ ಎಂದು ಸರ್ಚ್‌ ಮಾಡಬೇಕು ನಂತರ ಗೂಗಲ್‌ ಗುಲಾಬಿ ಎಸಳಿನ ಮಳೆಯನ್ನೇ ಸುರಿಸಲಿದೆ. ಕನ್ನಡ, ತೆಲುವು, ತಮಿಳು, ಹಿಂದಿ ಅಥವಾ ಇಂಗ್ಲಿಷ್‌ ಸೇರಿದಂತೆ ಯಾವುದೇ ಭಾಷೆಯಲ್ಲಿ ಮಹಾಕುಂಭ ಮೇಳವನ್ನು ಹುಡುಕಿದರೂ ಈ ರೀತಿ ಕಾಣಿಸುತ್ತದೆ.

ಈ ಅನಿಮೇಷನ್ ಜೊತೆಗೆ ಸ್ಕ್ರೀನ್​ನ ಕೆಳಭಾಗದಲ್ಲಿ ಮೂರು ಆಯ್ಕೆಗಳು ಸಹ ಕಾಣಿಸಿಕೊಳ್ಳುತ್ತಿವೆ. ಮೊದಲ ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಈ ಅನಿಮೇಷನ್ ಆಫ್ ಮಾಡಬಹುದು. ನೀವು ಇನ್ನೊಂದರ ಮೇಲೆ ಟ್ಯಾಪ್ ಮಾಡುತ್ತಲೇ ಇದ್ದಂತೆ, ಗುಲಾಬಿ ದಳಗಳ ಸಂಖ್ಯೆ ಏರುತ್ತಲೇ ಸಾಗುತ್ತದೆ. ಮೂರನೇ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಈ ಅನಿಮೇಷನ್​ ಅನ್ನು ತಮ್ಮ ಸ್ನೇಹಿತ ಅಥವಾ ಕುಟುಂಬದವರೊಂದಿಗೆ ಶೇರ್​ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್​ ಕಲ್ಪಿಸಿದೆ.

ಗೂಗಲ್‌ನ ಅಂಕಿ ಅಂಶಗಳ ಪ್ರಕಾರ ಮಹಾಕುಂಭ ಮೇಳದ ಬಗ್ಗೆ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹುಡುಕಾಡಲಾಗುತ್ತದೆ. ಕತಾರ್, ಯುಎಇ ಮತ್ತು ಬಹ್ರೇನ್ ದೇಶಗಳಲ್ಲಿ ಮಹಾಕುಂಭ ಮೇಳದ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿದ್ದಾರೆ.

ಮೊದಲ ದಿನ 1 ಕೋಟಿ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಭಕ್ತರ ದಟ್ಟಣೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಡ್ರೋನ್ ಕಣ್ಗಾವಲು ಸಹ ಮಾಡಲಾಗುತ್ತಿದೆ. ಭದ್ರತೆಗಾಗಿ ನೀರೊಳಗಿನ ಡ್ರೋನ್‌ಗಳನ್ನು ಸಹ ಬಳಸಲಾಗಿದೆ. ಮಕರ ಸಂಕ್ರಾಂತಿಯಂದು ಅಮೃತ ಸ್ನಾನದ ಸಂದರ್ಭದಲ್ಲಿ 3.50 ಕೋಟಿಗೂ ಹೆಚ್ಚು ಭಕ್ತರು ಸಂಗಮದ ದಡದಲ್ಲಿ ಪವಿತ್ರ ಸ್ನಾನ ಮಾಡಿ ಮಿಂದೆಳುತ್ತಿದ್ದಾರೆ. ಈ ಮಾಹಿತಿಯನ್ನು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದ್ದಾರೆ. ಮಹಾಕುಂಭ ಮೇಳಕ್ಕೆ ಒಟ್ಟು 45 ಕೋಟಿ ಭಕ್ತರ ನಿರೀಕ್ಷೆ ಇದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ : Mahakumbh 2025 : ಮಹಾಕುಂಭ ಮೇಳದಲ್ಲಿ ಮುಲಾಯಂ ಸಿಂಗ್ ಯಾದವ್ ಪ್ರತಿಮೆ- ಭಾರೀ ಆಕ್ರೋಶ