ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hardik Pandya: ಬ್ರಿಟಿಷ್​ ಪಾಪ್​ ಗಾಯಕಿ ಜಾಸ್ಮಿನ್ ಜತೆ ಹಾರ್ದಿಕ್​ ಪಾಂಡ್ಯ ಬ್ರೇಕಪ್

ಐಪಿಎಲ್‌ ಟೂರ್ನಿಯ ವೇಳೆ ಟೀಮ್‌ ಬಸ್‌ನಲ್ಲಿಯೂ ಪಾಂಡ್ಯ ಜತೆ ಜಾಸ್ಮಿನ್ ಕಾಣಿಸಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಇವರಿಬ್ಬರು ಶೀಘ್ರದಲ್ಲೇ ವಿವಾಹವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಅವರಿಬ್ಬರು ದೂರವಾದಂತಿದೆ. ಹಾರ್ದಿಕ್​ ಮತ್ತು ಜಾಸ್ಮಿನ್​ ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರರನ್ನು ಅನ್​ಫಾಲೋ ಮಾಡಿಕೊಂಡಿದಾರೆ.

ಜಾಸ್ಮಿನ್ ಜತೆ ಹಾರ್ದಿಕ್​ ಪಾಂಡ್ಯ ಬ್ರೇಕಪ್

-

Abhilash BC Abhilash BC Jul 22, 2025 8:59 AM

ಮುಂಬಯಿ: ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ(Hardik Pandya) ಅವರು ಕಳೆದ ವರ್ಷ ನತಾಸಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ಪಾಂಡ್ಯ, ಬ್ರಿಟಿಷ್ ಗಾಯಕಿ ಮತ್ತು ಟೆಲಿವಿಷನ್ ತಾರೆ ಜಾಸ್ಮಿನ್ ವಾಲಿಯಾ(Jasmin Walia) ಜತೆ ಡೇಟಿಂಗ್‌ ಆರಂಭಿಸಿದ್ದರು. ಚಾಂಪಿಯನ್ಸ್​ ಟ್ರೋಫಿಯಲ್ಲಿ ಜಾಸ್ಮಿನ್​ ದುಬೈ ಸ್ಟೇಡಿಯಂಗೆ ಹಾಜರಾಗಿ ಹಾರ್ದಿಕ್​ ಪಾಂಡ್ಯಗೆ ಫ್ಲೈಯಿಂಗ್ ಕಿಸ್ ನೀಡಿ ಹುರಿದುಂಬಿಸಿದ್ದರು. ನಂತರದಲ್ಲಿ ಐಪಿಎಲ್​ ಸಮಯದಲ್ಲೂ ಮುಂಬೈ ಇಂಡಿಯನ್ಸ್​ ತಂಡದ ಕೆಲ ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಹಾಜರಿದ್ದರು. ಆದರೆ ಇದೀಗ ಹಾರ್ದಿಕ್​-ಜಾಸ್ಮಿನ್​ ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಹೌದು, ಹಾರ್ದಿಕ್​ ಮತ್ತು ಜಾಸ್ಮಿನ್​ ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರರನ್ನು ಅನ್​ಫಾಲೋ ಮಾಡಿಕೊಂಡಿದಾರೆ. ಹೀಗಾಗಿ ಇವರಿಬ್ಬರು ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ ಟೂರ್ನಿಯ ವೇಳೆ ಟೀಮ್‌ ಬಸ್‌ನಲ್ಲಿಯೂ ಪಾಂಡ್ಯ ಜತೆ ಜಾಸ್ಮಿನ್ ಕಾಣಿಸಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಇವರಿಬ್ಬರು ಶೀಘ್ರದಲ್ಲೇ ವಿವಾಹವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಅವರಿಬ್ಬರು ದೂರವಾದಂತಿದೆ.

ಇದನ್ನೂ ಓಇ ENG vs IND: 4ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 8 ವರ್ಷದ ಬಳಿಕ ಮರಳಿದ ಸ್ಪಿನ್ನರ್‌

ಯಾರು ಈ ಜಾಸ್ಮಿನ್‌?

ಜಾಸ್ಮಿನ್ ವಾಲಿಯಾ ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಜನಿಸಿದರು. ಇವರ ಕುಟುಂಬಸ್ಥರು ಭಾರತೀಯ ಮೂಲದವರು. ಬ್ರಿಟಿಷ್ ರಿಯಾಲಿಟಿ ಟೆಲಿವಿಷನ್ ಶೋ ‘ದಿ ಓನ್ಲಿ ವೇ ಈಸ್ ಎಸೆಕ್ಸ್’ ಮೂಲಕ ಪ್ರಸಿದ್ಧರಾದರು. ಝಾಕ್ ನೈಟ್ ಜತೆಗಿನ ಅವರ ‘ಬಾಂಬ್ ಡಿಗ್ಗಿ’ ಹಾಡು ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು. ಬ್ರಿಟನ್ ಮತ್ತು ಭಾರತ ಎರಡೂ ಕಡೆಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.