#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Health Benefits: ಲೈಂಗಿಕ ಸಮಸ್ಯೆಗೆ ರಾಮಬಾಣ ಈ ಈ ಶತಾವರಿ ಗಿಡಮೂಲಿಕೆ!

ಶತಾವರಿಯು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಹಾರ್ಮೋನುಗಳ ಮೇಲೆ ಪ್ರಯೋಜನಕಾರಿ ಗುಣವನ್ನು ಹೊಂದಿದ್ದು ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಫರ್ಟಿಲಿಟಿ ಹೆಚ್ಚಿಸಲು ಇದು ಸಹಾಯಕ ವಾಗಲಿದೆ. ಪುರುಷರಲ್ಲಿ ವೀರ್ಯಾಣು ಸಂಖ್ಯೆ ಮತ್ತು ಸಾಂಧ್ರತೆ ಹೆಚ್ಚಿಸಲು ಸಹಾಯ ಮಾಡಲಿದೆ

ಲೈಂಗಿಕ ಸಮಸ್ಯೆ ದೂರ ಮಾಡುತ್ತೆ ಈ ಶತಾವರಿ ಗಿಡಮೂಲಿಕೆ!

shatavari benefits

Profile Pushpa Kumari Jan 26, 2025 8:36 AM

ನವದೆಹಲಿ: ಆಯುರ್ವೇದದಲ್ಲಿ ಕೆಲವು ಗಿಡಮೂಲಿಕೆಗಳು ದೇಹದ ಪ್ರಮುಖ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದ್ದು ಆರೋಗ್ಯಕರ ಹಲವು ರೀತಿಯ‌ ಲಾಭವನ್ನು ಹೊಂದಿವೆ. .ಅದರಲ್ಲೂ ಔಷಧೀಯ ಗುಣವನ್ನು ಹೊಂದಿರುವ ಶತಾವರಿ (Shatavari) ಶಕ್ತಿಶಾಲಿ ಗಿಡಮೂಲಿಕೆಯಾಗಿದ್ದು ಇದು ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ. ಆಯುರ್ವೇದ ತಜ್ಞರ ಮಾಹಿತಿ ಪ್ರಕಾರ ಶತಾವರಿಯು ಮಹಿಳೆಯರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಔಷಧಿಯಾಗಿ ಕಾರ್ಯ ನಿರ್ವಹಿಸಲಿದೆ.

ಲೈಂಗಿಕ ಸಾಮರ್ಥ್ಯ ಹೆಚ್ಚಿಸಲಿದೆ:

ಶತಾವರಿಯು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಹಾರ್ಮೋನುಗಳ ಮೇಲೆ ಪ್ರಯೋಜನಕಾರಿ ಗುಣವನ್ನು ಹೊಂದಿದ್ದು ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಫರ್ಟಿಲಿಟಿ ಹೆಚ್ಚಿಸಲು ಇದು ಸಹಾಯಕವಾಗಲಿದೆ. ಪುರುಷರಲ್ಲಿ ವೀರ್ಯಾಣು ಸಂಖ್ಯೆ ಮತ್ತು ಸಾಂಧ್ರತೆ ಹೆಚ್ಚಿಸಲು ಸಹಾಯ ಮಾಡಲಿದೆ

ಜೀರ್ಣಕಾರಿ ಆರೋಗ್ಯ ವೃದ್ಧಿಸಲಿದೆ:

ಶತಾವರಿಯು ಜೀರ್ಣಕಾರಿ ಗುಣಗಳನ್ನು ಹೊಂದಿದ್ದು ಅದು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಾವು ತಿನ್ನುವಂತಹ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಿ ಅದರಲ್ಲಿ ಇರುವಂತಹ ಪೋಷಕಾಂಶಗಳನ್ನು ದೇಹಕ್ಕೆ ನೀಡಲು ಇದು ಸಹಕಾರಿಯಾಗಲಿದೆ.

ಒತ್ತಡ ನಿವಾರಿಸಲಿದೆ:

ಶತಾವರಿಯು ದೇಹದ ಒತ್ತಡವನ್ನು ನಿಭಾಯಿಸಲು ಮುಖ್ಯ ಪಾತ್ರ ವಹಿಸಲಿದೆ.ಇದರ ಸೇವನೆಯು ಮನಸ್ಸಿನ ಶಾಂತತೆಯ ಭಾವವನ್ನು ಉತ್ತೇಜಿಸಿ‌ ಮೈಂಡ್ ರಿಪ್ರೇಶ್ ಆಗುವಂತೆ ಮಾಡುವ ಸಾಮರ್ಥ್ಯ ಹೊಂದಿದೆ.

ಮುಟ್ಟಿನ ಸಮಸ್ಯೆ ನಿವಾರಣೆ:

ಶತಾವರಿಯು ಋತುಚಕ್ರದ ಸಮಯದಲ್ಲಿ ಅಸ್ವಸ್ಥತೆಯನ್ನು ನಿವಾರಣೆ ಮಾಡಲು ಸಹಾಯ ಮಾಡಲಿದೆ. ಶತಾವರಿ ಗಿಡ ಮೂಲಿಕೆ ಋತುಬಂಧ, ಹಾರ್ಮೋನುಗಳು, ಫಲವತ್ತತೆ ಮುಂತಾದ ಮಹಿಳೆಯರ ಸಮಸ್ಯೆಗಳಿಗೆ ಇದು ಪರಿಣಾಮಕಾರಿ ಚಿಕಿತ್ಸೆ ನೀಡಲಿದೆ‌. ಮುಟ್ಟಿನ ಸಮಯದಲ್ಲಿ ರಕ್ತದ ಹರಿವು ನಿಯಂತ್ರಿಸಿ ಮುಟ್ಟಿನ ಸಮಯದಲ್ಲಿ ಉಂಟಾಗುವ ಕೋಪ ಮತ್ತು ಕಿರಿಕಿರಿ ತಡೆದು ಮನಸ್ಸನ್ನು ಶಾಂತಗೊಳಿಸುವ ಶಕ್ತಿಯನ್ನು ಹೊಂದಿದೆ.

ತಾಯಿಯ ಎದೆ ಹಾಲನ್ನು ಹೆಚ್ಚಿಸುತ್ತದೆ:

ಈ ಗಿಡ ಮೂಲಿಕೆಯು ತಾಯಿಯ ಎದೆ ಹಾಲು ಚೆನ್ನಾಗಿರಲು ಉತ್ತೇಜಿಸುತ್ತದೆ. ಇದರ ಚೂರ್ಣ ಅಥವಾ ಪುಡಿಯನ್ನು ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯುವುದರಿಂದ ಮಗುವಿಗೆ ಎಷ್ಟು ಬೇಕೋ ಅಷ್ಟು ಹಾಲನ್ನು ಉತ್ಪತ್ತಿ ಮಾಡಲು ಸಹಾಯಕವಾಗಲಿದೆ.

ಇದನ್ನು ಓದಿ: Health Tips: ಹುದುಗು ಬರಿಸಿದ ಆಹಾರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಶತಾವರಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚುಸಲು ಸಹಾಯ ಮಾಡಲಿದೆ.ಇನ್ನು ಹಾರ್ಮೋನುಗಳ ಸ್ರವಿಸುವಿಕೆಯನ್ನು ಸಹಜಗೊಳಿಸಲು ಶತಾವರಿ ಸಹಾಯ ಮಾಡಲಿದ್ದು ಶತಾವರಿ ಗಿಡಮೂಲಿಕೆಯನ್ನು ವೈದ್ಯರ ಸಲಹೆಯ ಮೇರೆಗೆ ಬೇಕಾದಷ್ಟು ಪ್ರಮಾಣದಲ್ಲಿ ಸೇವಿಸಿ.

ಶತಾವರಿ ಗಿಡಮೂಲಿಕೆ ಸಾಮಾನ್ಯವಾಗಿ ಮಾತ್ರೆಗಳು, ದ್ರವ ಅಥವಾ ಪುಡಿ ಈ ಮೂರು ರೂಪಗಳಲ್ಲಿ ಲಭ್ಯ ಇದ್ದು ಮಲಗುವ ಮೊದಲು ಬೆಚ್ಚಗಿನ ಹಾಲಿನೊಂದಿಗೆ ಅರ್ಧ ಟೀ ಚಮಚ ಸೇವನೆ ಮಾಡುವುದು ಪ್ರಯೋಜನಕಾರಿ.