Health Tips: ಹೆಚ್ಚು ಅರಿಶಿನ ಬಳಸುತ್ತಿದ್ದೀರಾ?ಈ ಅಡ್ಡ ಪರಿಣಾಮಗಳ ಬಗ್ಗೆ ಇರಲಿ ಎಚ್ಚರ!
ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ಹೊಟ್ಟೆ ಹಿಗ್ಗುವಿಕೆ, ಮಲಬದ್ಧತೆ, ಅತಿಸಾರ, ಅಜೀರ್ಣ, ಗ್ಯಾಸ್ ಮತ್ತು ಹಳದಿ ಮಲ ಮುಂತಾದ ಸಮಸ್ಯೆ ಉಂಟಾಗಿ ಜೀರ್ಣಾಂಗ ವ್ಯವಸ್ಥೆಯ ಅಡಚಣೆಗೆ ಕಾರಣವಾಗಬಹುದು. ಹಾಗಾಗಿ ಹೆಚ್ಚು ಅರಶಿನ ಬಳಕೆಯ ಮೊದಲು ಈ ಬಗ್ಗೆ ಎಚ್ಚರ ವಹಿಸಿ.


ನವದೆಹಲಿ: ಅರಿಶಿನ (Turmeric) ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದ್ದು ದೈನಂದಿನ ಆಹಾರದಲ್ಲಿ ಇದರ ಬಳಕೆ ಹೆಚ್ಚಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣ ಮತ್ತು ಉರಿಯೂತ ಹೋಗಲಾಡಿಸುವ ಗುಣಲಕ್ಷಣಗಳನ್ನು ಹೊಂದಿದ್ದು ಹಲವಾರು ಆರೋಗ್ಯಕರ ಗುಣವನ್ನು ಹೊಂದಿದೆ(Health Tips). ಆದರೆ, ಅರಿಶಿನವನ್ನು ಬಳಸುವುದು ಹಿತ-ಮಿತವಾಗಿರುವುದು ಕೂಡ ಮುಖ್ಯವಾಗಿದೆ. ಏಕೆಂದರೆ ಅದರ ಅಧಿಕ ಬಳಕೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡಬಹುದು. ಅತಿಯಾದ ಅರಿಶಿನ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಹೊಟ್ಟೆ ಅಥವಾ ಜೀರ್ಣಕಾರಿ ತೊಂದರೆ:
ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ಹೊಟ್ಟೆ ಹಿಗ್ಗುವಿಕೆ, ಮಲಬದ್ಧತೆ, ಅತಿಸಾರ, ಅಜೀರ್ಣ, ಗ್ಯಾಸ್, ಆಸಿಡ್ ರಿಫ್ಲಕ್ಸ್ ಮತ್ತು ಹಳದಿ ಮಲ ಮುಂತಾದ ಸಮಸ್ಯೆ ಉಂಟಾಗಿ ಜೀರ್ಣಾಂಗ ವ್ಯವಸ್ಥೆಯ ಅಡಚಣೆಗೆ ಕಾರಣವಾಗಬಹುದು. ಹಾಗಾಗಿ ಹೆಚ್ಚು ಅರಶಿನ ಬಳಕೆಯ ಮೊದಲು ಈ ಬಗ್ಗೆ ಎಚ್ಚರ ವಹಿಸಿ.
ಚರ್ಮದ ಅಲರ್ಜಿ ಉಂಟು ಮಾಡಬಹುದು:
ಸುಂದರ ಚರ್ಮವನ್ನು ಪಡೆಯಲು ಅರಿಶಿನವನ್ನು ಹೆಚ್ಚಾಗಿ ಮುಖಕ್ಕೆ ಬಳಸಲಾಗುತ್ತದೆ. ಆದರೆ ಇದು ಹೆಚ್ಚಾದ ಬಳಕೆಯಿಂದ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ. ಇದು ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಮುಖಕ್ಕೆ ತುಂಬಾ ಹೊತ್ತು ಅರಿಶಿನವನ್ನು ಹಚ್ಚಿ ಇಡಬಾರದು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ
ಯಕೃತ್ತಿನ ಸಮಸ್ಯೆ ಉಂಟು ಮಾಡಬಹುದು:
ಅತಿಯಾದ ಅರಿಶಿನ ಸೇವನೆಯು ಯಕೃತ್ತಿಗೆ ಗಂಭೀರ ಹಾನಿಯನ್ನುಂಟು ಮಾಡಲಿದೆ. ಕಿಬ್ಬೊಟ್ಟೆ ನೋವು, ವಾಕರಿಕೆ ಹಾನಿಗೊಳಗಾದ ಯಕೃತ್ತಿನ ಕೆಲವು ಲಕ್ಷಣಗಳಿಗೆ ಅತಿಯಾದ ಅರಶಿನ ಸೇವನೆ ಕಾರಣವಾಗುತ್ತದೆ.
ರಕ್ತ ಸ್ರಾವದ ಅಪಾಯ:
ಅರಿಶಿನವು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದ್ದು ಇದು ರಕ್ತ ಹೆಪ್ಪುಗಟ್ಟಲು ಮತ್ತು ರಕ್ತ ಪರಿಚಲನೆಯನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡಲಿದೆ. ಆದರೆ ಹೆಚ್ಚಿನ ಸೇವನೆಯ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಮೂಗು ಅಥವಾ ಒಸಡಿನಲ್ಲಿ ರಕ್ತಸ್ರಾವವಾಗುವುದ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಇತ್ಯಾದಿ ಸಮಸ್ಯೆ ಯಾಗಲಿದೆ.
ಇದನ್ನು ಓದಿ: Health Benefits: ಲೈಂಗಿಕ ಸಮಸ್ಯೆಗೆ ರಾಮಬಾಣ ಈ ಈ ಶತಾವರಿ ಗಿಡಮೂಲಿಕೆ!
ಸಕ್ಕರೆ ಮಟ್ಟ ಕಡಿಮೆ ಮಾಡಬಹುದು:
ಟೈಪ್ 2 ಡಯಾಬಿಟಿಸ್ ಇರುವವರಿಗೆ, ಅರಿಶಿನವು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ಅರಿಶಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು. ಇದು ಸಾಮಾನ್ಯ ಸಕ್ಕರೆ ಖಾಯಿಲೆ ಇರುವ ಜನರಲ್ಲಿ ಆರೋಗ್ಯದ ಪರಿಣಾಮಗಳನ್ನು ಉಂಟುಮಾಡಬಹುದು.