Veena Bhat Column: ಅತಿ ಪುರಾತನ ಸೈನ್ ಬೋರ್ಡ್ ಇಲ್ಲಿದೆ !
ಸಿಂಧೂ ಸಂಸ್ಕೃತಿಯ ಅವಶೇಷಗಳಿರುವ ಧೋಲಾವಿರಾ, ನಮ್ಮ ದೇಶದ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದು. ಹರಪ್ಪಾ ಮತ್ತು ಮೊಹೆಂಜೊದಾರೋ ನಗರಗಳು, ನಮ್ಮ ದೇಶದ ಗಡಿಯಿಂದಾಚೆ ಇರುವುದರಿಂದ, ಧೋಲಾವಿರಾದ ಮಹತ್ವ ಇನ್ನಷ್ಟು ಹೆಚ್ಚಿದೆ. ಇದೊಂದು ಬೇರೆಯೇ ಪ್ರಪಂಚ. ಇಲ್ಲಿ ನಡೆದಾಡುತ್ತಿದ್ದಂತೆ ಸಾವಿರಾರು ವರುಷಗಳ ಹಿಂದೆ ಹೇಗೆ ಜೀವಿಸು ತ್ತಿದ್ದರು ಅನ್ನೋದನ್ನು ಕಲ್ಪಿಸಿಕೊಳ್ಳೋದಕ್ಕೆ ಶುರು ಮಾಡುತ್ತೀರಿ.


ವೀಣಾ ಭಟ್
ಸಿಂಧೂ ಸಂಸ್ಕೃತಿಯ ಅವಶೇಷಗಳಿರುವ ಧೋಲಾವಿರಾ, ನಮ್ಮ ದೇಶದ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದು. ಹರಪ್ಪಾ ಮತ್ತು ಮೊಹೆಂಜೊದಾರೋ ನಗರ ಗಳು, ನಮ್ಮ ದೇಶದ ಗಡಿಯಿಂದಾಚೆ ಇರುವುದರಿಂದ, ಧೋಲಾವಿರಾದ ಮಹತ್ವ ಇನ್ನಷ್ಟು ಹೆಚ್ಚಿದೆ. ಇದೊಂದು ಬೇರೆಯೇ ಪ್ರಪಂಚ. ಇಲ್ಲಿ ನಡೆದಾಡುತ್ತಿದ್ದಂತೆ ಸಾವಿರಾರು ವರುಷಗಳ ಹಿಂದೆ ಹೇಗೆ ಜೀವಿಸುತ್ತಿದ್ದರು ಅನ್ನೋದನ್ನು ಕಲ್ಪಿಸಿಕೊಳ್ಳೋದಕ್ಕೆ ಶುರು ಮಾಡುತ್ತೀರಿ. ಗುಜರಾ ತಿನ ಧೋಲಾವಿರಾದ ಪುರಾತನ ನಾಗರಿಕತೆಗಳ ಅವಶೇಷಗಳು ಅಚ್ಚರಿ ಹುಟ್ಟಿಸುತ್ತವೆ. ಇದು ಹರಪ್ಪ ಮತ್ತು ಮೊಹೆಂಜೊದಾರೋ ಸಂಸ್ಕೃತಿಯ ಕಾಲದ ನಗರ. ಸುಮಾರು 5000 ವರ್ಷಗಳ ಹಿಂದೆ ಜನರು ಹೇಗೆ ವಾಸಿಸುತ್ತಿದ್ದರು, ಅವರ ದಿನಚರಿ ಹೇಗಿತ್ತು ಅನ್ನೋ ದಕ್ಕೆ ಇಲ್ಲಿಯ ಅವಶೇಷಗಳು ಸಾಕ್ಷಿಯಾಗಿವೆ. ಧೋಲಾವಿರಾ ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಭಚೌ ತಾಲೂಕಿನ ಖಾದಿರ್‌ಬೆಟ್‌ನಲ್ಲಿರುವ ಒಂದು ಸ್ಥಳ. ಸ್ಥಳೀಯವಾಗಿ ಕೊಟಡಾ ಟಿಂಬಾ ಎಂದೂ ಕರೆಯಲ್ಪಡುವ ಈ ತಾಣವು ಪ್ರಾಚೀನ ಸಿಂಧೂ ಕಣಿವೆಯ ನಾಗರಿಕತೆಯ ನಗರದ ಅವಶೇಷಗಳನ್ನು ಒಳಗೊಂಡಿದೆ.
ಈ ತಾಣವನ್ನು 1967-68ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಜೆ.ಪಿ.ಜೋಶಿ ಅವರ ನೇತೃತ್ವದಲ್ಲಿ ಉತ್ಖನನಕ್ಕೆ ಒಳಪಡಿಸಿ, ಸಂಶೋಧನೆಗೆ ಒಳಪಡಿಸಲಾಯಿತು. ಇದು ಎಂಟು ಪ್ರಮುಖ ಹರಪ್ಪಾ ತಾಣಗಳಲ್ಲಿ ಐದನೆಯದಾಗಿದೆ. ಹರಪ್ಪನ್ನರ ಭಾಷೆ ಮತ್ತು ಲಿಪಿಯನ್ನು ಇನ್ನೂ ಅರ್ಥೈಸಲಾಗಿಲ್ಲ.
ಇದನ್ನೂ ಓದಿ: Harish Kera Column: ಮಹಾಕುಂಭದಲ್ಲಿ ಕರಗಿದ ಒಂದು ಕ್ಷಣ
ಧೋಲಾವಿರಾ ನಗರದ ಪುರಾತತ್ವ ಅವಶೇಷಗಳು ಕೋಟೆಗಳು, ದ್ವಾರಗಳು, ನೀರಿನ ಜಲಾ ಶಯಗಳು, ಸಮಾರಂಭದ ಮೈದಾನ, ವಸತಿ ಘಟಕಗಳು, ಕಾರ್ಯಾಗಾರ ಪ್ರದೇಶಗಳು ಮತ್ತು ಸ್ಮಶಾನ ಸಂಕೀರ್ಣವನ್ನು ಒಳಗೊಂಡಿವೆ.
ಇಲ್ಲಿನ ಅತಿ ಮಹತ್ವದ ಸಂಶೋಧನೆ ಎಂದರೆ, ನಗರದ ಉತ್ತರ ದ್ವಾರದ ಪಕ್ಕದ ಕೋಣೆಗಳ ಬಳಿ ಕಂಡು ಬಂದ ‘ಧೋಲವೀರ ಸೈನ್‌ಬೋರ್ಡ್’. ಎಂದರೆ, ಇಲ್ಲಿ ದೊಡ್ಡ ಮರದ ಹಲಗೆಯ ಮೇಲೆ ಹತ್ತು ದೊಡ್ಡ ಚಿಹ್ನೆಗಳು ಅಥವಾ ಅಕ್ಷರಗಳನ್ನು ರೂಪಿಸಲು ಜಿಪ್ಸಮ್ ತುಂಡುಗಳನ್ನು ಜೋಡಿಸಿದ್ದರು.
ಇದು ಜಗತ್ತಿನ ಅತಿಪುರಾತನ ‘ಸೈನ್‌ಬೋರ್ಡ್’ ಅಥವಾ ಫಲಕ ಎಂದೇ ಹೆಸರುವಾಸಿ ಯಾಗಿದೆ. ಜಿಪ್ಸಂನಿಂದ ರಚಿಸಲಾದ ಈ ಸೈನ್‌ಬೋಡ್ ನ್ನು ಅಲ್ಲಿ ಸಂರಕ್ಷಿಸಲಾಗಿದ್ದು, ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ.

ಮರಳುಗಲ್ಲಿನ ಮೇಲೆ ದೊಡ್ಡ ಅಕ್ಷರಗಳನ್ನು ಹೊಂದಿರುವ ನಾಲ್ಕು ಚಿಹ್ನೆಯ ಶಾಸನವು ಈ ಸ್ಥಳದಲ್ಲಿ ಕಂಡುಬರುತ್ತದೆ. ಹರಪ್ಪಾ ಸಂಸ್ಕೃತಿಯ ಮರಳುಗಲ್ಲಿನ ಶಾಸನಗಳಲ್ಲಿ ಮೊದಲನೆಯದು ಎಂದು ಪರಿಗಣಿಸಲಾಗಿದೆ.
ಸಿಂಧೂ ಕಣಿವೆ ಸಂಸ್ಕೃತಿಗೆ ಸಂಬಂಧಿಸಿದಂತೆ 1989 ಮತ್ತು 2005 ರ ನಡುವೆ 13 ಕ್ಷೇತ್ರ ಗಳಲ್ಲಿ ಉತ್ಖನನ ಮಾಡಲಾಯಿತು. ಕೆಲವು ತಾಮ್ರದ ಬರಹಗಳು, ಕಂಚಿನ ಉಪಕರಣಗಳು ಮತ್ತು ಟೆರಾಕೋಟಾ ಮತ್ತು ಕಲ್ಲುಗಳಿಂದ ಮಾಡಿದ್ದಾರೆ. ಇವೆಲ್ಲವೂ ಹರಪ್ಪನ್ ಸಂಸ್ಕೃತಿ ಮತ್ತು ಅದರ ವಿವಿಧ ಅಭಿವ್ಯಕ್ತಿಗಳನ್ನು ಸ್ಪಷ್ಟವಾಗಿ ಪ್ರತಿನಿಧಿಸುತ್ತವೆ.
ಇಡೀ ನಗರದ ಜೋಡಣೆ, ನೀರು ಕೊಯ್ಲು, ಚಂಡಮಾರುತದ ನೀರಿನ ಚರಂಡಿಗಳು, ಕಲೆಗಾರಿಕೆ. ಇಟ್ಟಿಗೆ ಮತು ಕಲ್ಲಿನಲ್ಲಿ ನಿರ್ಮಿಸಿರುವ ಇಲ್ಲಿನ ಅವಶೇಷಗಳನ್ನು ಪುರಾತತ್ವ ಇಲಾಖೆಯು ಸಂರಕ್ಷಣೆಗೆ ಒಳಪಡಿಸಿದ್ದು, ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ.
ಸಮಾಿಗಳು
ಇಲ್ಲಿನ ಅವಶೇಷಗಳಲ್ಲಿ ಸ್ಮಶಾನವೂ ಇದ್ದು, ಅಂದು ಜನರು ಅಂತ್ಯಸಂಸ್ಕಾರ ಮಾಡುವ ವಿಧಾವನ್ನು ತಿಳಿಸುತ್ತದೆ. ಸ್ಮಶಾನದ ವಾಸ್ತುಶಿಲ್ಪವು ಬೌದ್ಧ ಸ್ತೂಪಗಳನ್ನು ಹೋಲುವ ತುಮುಲಿ ಎಂಬ ಅರ್ಧಗೋಳದ ರಚನೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಒಂದನ್ನು ಹೊರತುಪಡಿಸಿ, ಉಳಿದೆಲ್ಲ ರಚನೆಗಳು ಯಾವುದೇ ಅಸ್ಥಿಪಂಜರದ ಅವಶೇಷಗಳನ್ನು ಹೊಂದಿಲ್ಲ. ಕೆಲವು ಸಮಾಿಗಳಲ್ಲಿ ಆಭರಣಗಳು, ಕುಂಬಗಳು ಇತ್ಯಾದಿಗಳಿದ್ದವು, ಇವು ಗಳನ್ನು ಜೀವನದ ನಂತರ ಬಳಸಬಹುದು ಎಂಬ ನಂಬಿಕೆ ಇರಬಹುದು.
ವ್ಯವಸ್ಥಿತ ಪುರಾತನ ನಗರ
ಧೋಲಾವಿರಾ ನಗರ ಯೋಜನೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ನಗರ
ಯೋಜನೆ, ಕೋಟೆಗಳು, ನೀರಿನ ಜಲಾಶಯಗಳು ಮತ್ತು ಒಳಚರಂಡಿ ವ್ಯವಸ್ಥೆ ಮತ್ತು ಕಲ್ಲಿನ ವ್ಯಾಪಕ ಬಳಕೆ, ಈ ಗುಣಲಕ್ಷಣಗಳು ಹರಪ್ಪನ್ ನಾಗರೀಕತೆಯಲ್ಲಿ ಧೋಲಾವಿರಾ ಹೊಂದಿದ್ದ ವಿಶಿಷ್ಟ ಸ್ಥಾನವನ್ನುಪ್ರತಿಬಿಂಬಿಸುತ್ತವೆ. ಹರಪ್ಪಾ ಸಂಸ್ಕೃತಿಯ ನಗರ ಎಂದು ಗುರುತಿಸಿ ಇದನ್ನು, ವಿಶ್ವಸಂಸ್ಥೆಯು ವಿಶ್ವಪರಂಪರೆಯ ತಾಣವೆಮದು 27 ಜುಲೈ 2021 ಹೆಸರಿಸಿದೆ. ಈ ಪುರಾತನ ಸಂಸ್ಕೃತಿಯ ಇತರ ಪ್ರಮುಖ ತಾಣಗಳೆಂದರೆ ಹರಪ್ಪಾ, ಮೊಹೆಂ ಜೋದಾರೋ, ಗನೇರಿವಾಲಾ, ರಾಖಿಗಡಿ, ಕಾಲಿಬಂಗನ್, ರೂಪನಗರ ಮತ್ತು ಲೋಥಾಲ್.