ಹೈಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯ: ಶಶೀಲ್ ಜಿ.ನಮೋಶಿ
ಕಾನೂನು ರೀತಿಯಲ್ಲಿ ಅನುಮತಿ ಪಡೆದು ಸಂಸ್ಥೆಯಲ್ಲಿ ಇದ್ದ ನಿಷ್ಪ್ರಯೋಜಕ ದಾಖಲೆಗಳನ್ನು ಸುಟ್ಟು ಹಾಕಿದ್ದನ್ನು ಅವುಗಳು ಮಹತ್ವದ ದಾಖಲೆಗಳೆಂದು ಸುಳ್ಳು ಆರೋಪ ಹೊರಿಸಿದ್ದ ಪ್ರಕರಣ ಗಳನ್ನೆಲ್ಲ ಹೈಕೋರ್ಟ್ ರದ್ದು ಪಡಿಸಿ ಆದೇಶ ನೀಡಿದ್ದು ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಹೈದರಾ ಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದರು
![ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಟೈಫಂಡ್](https://cdn-vishwavani-prod.hindverse.com/media/original_images/Shasheel_G_Namoshi.jpg)
![Profile](https://vishwavani.news/static/img/user.png)
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸ್ಟೈಫಂಡ್ ವಿಷಯದಲ್ಲಿ 2024 ರ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಅಂದಿ ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳು ಪೊಲೀಸ್ ಎಫ್ ಐ ಆರ್ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇದು ಚುನಾವಣೆಯಲ್ಲಿ ಅಧ್ಯಕ್ಷರ ಸೋಲಿ ಗೂ ಕಾರಣ ವಾಗಿತ್ತು. ಆದರೆ ಈ ಸೋಲನ್ನು ಅರಗಿಸಿಕೊಳ್ಳಲು ಆಗದೆ ಹಿಂದಿನ ಸಂಸ್ಥೆಯ ಅಧ್ಯಕ್ಷರ ಚಿತಾ ವಣೆಯ ಮೇಲೆ ಕಾಣದ ಕೈಗಳು ವಿನಾ ಕಾರಣ ನನ್ನ ಮೇಲೆ ಹಾಗೂ ಸಂಸ್ಥೆಯ ಹಿಂದಿನ ಅಧ್ಯಕ್ಷ ಬಸವರಾಜ ಭೀಮಳ್ಳಿ, ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಹಿರಿಯ ವೈದ್ಯರಾದ ಡಾ.ಮಲ್ಲಿಕಾರ್ಜುನ ಭಂಡಾರ, ಡಾ.ಸಾಯಿನಾಥ ಆಂದೋಲಾ, ಡಾ.ಶರಣಬಸಪ್ಪ ಹರವಾಳ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು.
ಕಾನೂನು ರೀತಿಯಲ್ಲಿ ಅನುಮತಿ ಪಡೆದು ಸಂಸ್ಥೆಯಲ್ಲಿ ಇದ್ದ ನಿಷ್ಪ್ರಯೋಜಕ ದಾಖಲೆಗಳನ್ನು ಸುಟ್ಟು ಹಾಕಿದ್ದನ್ನು ಅವುಗಳು ಮಹತ್ವದ ದಾಖಲೆಗಳೆಂದು ಸುಳ್ಳು ಆರೋಪ ಹೊರಿಸಿದ್ದ ಪ್ರಕರಣ ಗಳನ್ನೆಲ್ಲ ಹೈಕೋರ್ಟ್ ರದ್ದುಪಡಿಸಿ ಆದೇಶ ನೀಡಿದ್ದು ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದರು.
ಇದನ್ನೂ ಓದಿ: Kalaburagi News: ಬ್ರಿಡ್ಜ್ ಮೇಲಿಂದ ಭೀಮಾ ನದಿಗೆ ಲಾರಿ ಬಿದ್ದು ಚಾಲಕ ನಾಪತ್ತೆ
ಹಿಂದಿನ ಅಧ್ಯಕ್ಷರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಸೋಲು ಅನು ಭವಿಸಿದ ನಂತರ ಹತಾಶೆಗೊಂಡರು. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಹಜ. ಸಂಸ್ಥೆಯು ಮತದಾರರ ತೀರ್ಪನ್ನು ಗೌರವಿಸಲೇಬೇಕು. ಸಂಸ್ಥೆಯು ಸಮಾಜದ ಆಸ್ತಿ, ಅದು ಸ್ವಂತದ್ದಲ್ಲ. ಆದರೆ ಹಿಂದಿನ ಅಧ್ಯಕ್ಷರು ತಾವು ಸೋಲು ಅನುಭವಿಸಿದ ನಂತರ ಸಂಸ್ಥೆಯ ಹಿತವನ್ನು ಸಹ ಕಡೆಗಣಿಸಿ, ಈಗಿನ ಆಡಳಿತ ಮಂಡಳಿಯು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ, ದಿನ ನಿತ್ಯದ ಕೆಲಸಗಳಿಗೆ ಅಡ್ಡಗಾಲು ಹಾಕುತ್ತ ಆಡಳಿತ ವಿರೋಧಿ ಕೆಲಸ ಮಾಡಿದರು. 2018 ರಿಂದ 2024 ವರೆಗೆ ಇವರ ಅವಧಿಯಲ್ಲಿ ಸುಮಾರು 80 ಕೋಟಿ ರೂಗಳ ಸ್ಟೈಪಂಡ್ ಹಗರಣದ ಕುರಿತು ಹಲವಾರು ವಿದ್ಯಾರ್ಥಿ ಗಳು ಎಫ್ ಐ ಆರ್ ದಾಖಲಿಸಿದ್ದರು. ಇವರು ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿದ್ದರಿಂದ ಇಲ್ಲಿಯವರೆಗೆ ಇವರ ಮೇಲೆ ಯಾವುದೇ ಕ್ರಮವಾಗಿಲ್ಲ. ಇದರಲ್ಲಿ ಇವರು ಸರ್ಕಾರವನ್ನು ಸಹ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ.
ಆದರೆ ಇವರು ದುರುದ್ದೇಶ ಪೂರಕವಾಗಿ 2009 ರಿಂದ 2015 ರ ಅವಧಿಯಲ್ಲಿ ಸ್ಟೈಫಂಡ್ ಹಗರಣ ವಾಗಿದೆ ಎಂದು ಆಧಾರ ರಹಿತವಾಗಿ ನನ್ನ ಮೇಲೆ ಹಾಗೂ ಹಿರಿಯರಾದ ಬಸವರಾಜ ಭೀಮಳ್ಳಿ ಯವರ ಮೇಲೆ, ಹಿರಿಯ ವೈದ್ಯರ ಮೇಲೆ ದೂರು ದಾಖಲಾದಾಗ ಸುಮಾರು 15 ಜನ ಪೊಲೀಸರ ತಂಡ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಸಂಬಂಧವಿಲ್ಲದ ಸಂಸ್ಥೆಯ ಮುಖ್ಯ ದಾಖಲೆಗಳನ್ನು ಪಡಿಸಿಕೊಂಡಿತು.
ನಂತರ ಮುಖ್ಯಕಚೇರಿಯ ಕೆಲಸಗಳಿಗೆ ಇನ್ನೊಂದು ಸುಳ್ಳು ದೂರು ನೀಡಿ ತೊಂದೆ ಮಾಡಿದರು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ನಮ್ಮ ನಿತ್ಯದ ಕೆಲಸಗಳಿಗೆ ತೊಂದರೆಯಾಯಿತು. ಆದರೆ ಹಿಂದಿನ ಅಧ್ಯಕ್ಷರ ಮೇಲೆ ಸ್ವತಃ ವಿದ್ಯಾರ್ಥಿಗಳೇ ದೂರು ಕೊಟ್ಟಿದ್ದರು, 2018 ರಿಂದ 24 ರ ಅವಧಿ ಯವರೆಗೆ ಹಗರಣದ ದಾಖಲೆಗಳನ್ನು ಇಲಾಖೆಗೆ ಒದಗಿಸಿದ್ದರು. ಪೋಲಿಸ ಇಲಾಖೆ ಏಕೆ ಮೌನ ವಹಿಸಿತ್ತು. ಆಧಾರ್ ರಹಿತವಾದ ಆರೋಪಕ್ಕೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿರುವುದಕ್ಕೆ ಉಚ್ಛ ನ್ಯಾಯಾಲಯ ಕಪಾಳ ಮೋಕ್ಷ ಮಾಡಿದೆ. ಯಾವಾಗಲೂ ಸತ್ಯಕ್ಕೆ ಗೆಲುವು ಎಂದು ಸಾರಿದೆ.
ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆ ಮಾಡಲು ಯಾರೇ ಎಷ್ಟು ಪ್ರಯತ್ನಿಸಿದರೂ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಸುಳ್ಳನ್ನು ಸತ್ಯವೆಂದು ನಂಬಿಸಿ ನಮ್ಮ ಮುಖಕ್ಕೆ ಮಸಿ ಬಳೆಯಲು ಪ್ರಯತ್ನಿಸಿ ದವರ ಮಸಿ ಹಚ್ಚಿಸಿಕೊಂಡಿರುವ ಮುಖವಾಡ ಬಯಲಾಗಿದೆ
ವಿನಾ ಕಾರಣ ನಮ್ಮ ಮೇಲೆ ಆರೋಪ ಹೊರಿಸಿ ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆ ಮಾಡಲು ನಮ್ಮ ಸಮಯಹರಣ ಮಾಡಿದ್ದಕ್ಕಾಗಿ ವೈಯಕ್ತಿಕವಾಗಿ ಹಾಗೂ ಸಂಸ್ಥೆಗೆ ಹಿನ್ನಡೆ ಮಾಡಲು ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇವೆ ಎಂದರು.