ಹೆಚ್.ಎನ್.ವಿಜ್ಞಾನ ಬುದ್ದಿ ಮತ್ತು ವೈಚಾರಿಕ ಜಾಗೃತಿಯ ಮೇರುಶಿಖರವಾಗಿದ್ದರು : ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್
ಬಸವನಗುಡಿಯಲ್ಲಿ ಪಿಯುಸಿ ಓದುವ ಸಂದರ್ಭದಲ್ಲಿ ಹೆಚ್ಚೆನ್ ಅವರ ಸಂಪರ್ಕಕಕ್ಕೆ ಬಂದ ನಾನು ಅವರ ಸರಳತೆಗೆ ಪ್ರಖರ ಚಿಂತನೆಗೆ ಮಾರುಹೋದೆ.ನಾನು ಉಳಿದುಕೊಂಡಿದ್ದ ಹಾಸ್ಟೆಲ್ ಕೊಠಡಿ ಪಕ್ಕ ದಲ್ಲಿಯೇ ಹೆಚ್.ಎನ್.ಅವರ ಕೊಠಡಿಯೂ ಇತ್ತು
ಚಿಕ್ಕಬಳ್ಳಾಪುರ : ಹೆಚ್.ಎನ್.ಅವರ ಬದುಕು ಬರಹ ಚಿಂತನೆ,ಗ್ರಾಮೀಣ ಸಮಾಜದ ಮೇಲೆ ಅವರಿ ಗಿದ್ದ ಕಾಳಜಿ, ಶಿಕ್ಷಣ ಕ್ಷೇತ್ರದಲ್ಲಿನ ಅಕಳಂಕ ಸಾಧನೆ,ನಾಡಿನಲ್ಲಿ ಅವರು ಬಿತ್ತಿರುವ ವೈಜ್ಞಾ ನಿಕ ಬುದ್ದಿ, ವೈಚಾರಿಕ ಜಾಗೃತಿ ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನುಸರಣೆ ಯೋಗ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.
ಗೌರಿಬಿದನೂರು ತಾಲೂಕು ಹೊಸೂರು ಗ್ರಾಮದಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಶಾಲಾ ಶತಮಾನೋತ್ಸವ, ಇದೇ ಶಾಲೆಯ ವಿದ್ಯಾ ರ್ಥಿ ಹೆಚ್.ಎನ್.ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾ ಡಿದರು.
ಬಸವನಗುಡಿಯಲ್ಲಿ ಪಿಯುಸಿ ಓದುವ ಸಂದರ್ಭದಲ್ಲಿ ಹೆಚ್ಚೆನ್ ಅವರ ಸಂಪರ್ಕಕಕ್ಕೆ ಬಂದ ನಾನು ಅವರ ಸರಳತೆಗೆ ಪ್ರಖರ ಚಿಂತನೆಗೆ ಮಾರುಹೋದೆ.ನಾನು ಉಳಿದುಕೊಂಡಿದ್ದ ಹಾಸ್ಟೆಲ್ ಕೊಠಡಿ ಪಕ್ಕದಲ್ಲಿಯೇ ಹೆಚ್.ಎನ್.ಅವರ ಕೊಠಡಿಯೂ ಇತ್ತು.ನಮಗೆ ಏನಾದರೂ ಸಂದೇಹಗಳಿದ್ದರೆ ಪರಿಹರಿಸಿಕೊಳ್ಳಲು ಹೋಗುತ್ತಿದ್ದಂತೆ, ದಿನ ಪತ್ರಿಕೆಗಳನ್ನು ಓದಲು ಪ್ರತಿದಿನ ಅವರ ಕೊಠಡಿಗೆ ಹೋಗುತ್ತಿದ್ದುದು ನನ್ನ ಪಾಲಿನ ಮಧುರ ಕ್ಷಣವಾಗಿದೆ ಎಂದರು.
ಇದನ್ನೂ ಓದಿ: Chikkaballapur News: ರೈತರ ಹಿತ ಕಾಯುವುದು ರಾಷ್ಟ್ರೀಯ ಬ್ಯಾಂಕುಗಳು ಮಾತ್ರ : ಪ್ರಗತಿಪರ ರೈತ ಜಿ.ಎನ್. ನಾರಾಯಣಸ್ವಾಮಿ ಅಭಿಮತ
ಇವರು ಕುಲಪತಿ ಆಗಿದ್ದ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಜ್ಞಾನ ಭಾರತಿ ಎಂದು ಹೆಸರು ಇಟ್ಟಿದ್ದೆ ಅಲ್ಲದೆ,ವಿದೇಶಿ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ 1200 ಎಕರೆಯಲ್ಲಿ ಇದನ್ನು ಕಟ್ಟಿದ್ದಾರೆ. ದೂರದೃಷ್ಟಿಯುಳ್ಳ ಹೆಚ್.ಎನ್. ಕಷ್ಟದಿಂದ ಮೇಲೆ ಬಂದವರು. ಮುಖ್ಯಮಂತ್ರಿಗಳಿಗೆ ಮೊಣಕಾಲಿನ ನೋವಿಗೆ ಒಳಗಾದ ಪರಿಣಾಮ ಅವರ ಪರವಾಗಿ ಬಂದು ಮಾತನಾಡುವ ಸೌಭಾಗ್ಯ ನನ್ನದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರು ಹೇಳಿದಂತೆ ಇಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಬೇಕು ಎಂಬ ವಿಚಾರ ಸಚಿವನಾದ ನನ್ನ ಗಮನಕ್ಕೆ ಬಂದಿದೆ.ನಮ್ಮ ಸರಕಾರ ರಾಜ್ಯದ ಉದ್ದಗಲಕ್ಕೂ 2500ಕೋಟಿ ಅನುದಾನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಚಿಂತನೆ ನಡೆಸಿದೆ. ಏಷಿ ಯನ್ ಡೆವೆಲಪ್ ಮೆಂಟ್ ಬ್ಯಾಂಕ್ ಮೂಲಕ 2000ಕೋಟಿ ಸಾಲ ಪಡೆದು ಸರಕಾರ 500 ಕೋಟಿ ಹೊಂದಿಸಿ ಮೂಲಕ ಪಡೆದು ಶಾಲೆ ಅಭಿವೃದ್ಧಿಗೆ ಮುಂದಾಗಿದ್ದು ನಿಮ್ಮ ಮನವಿ ಈಡೇರಿಸ ಲಾಗುವುದು ಎಂದು ಭರವಸೆ ನೀಡಿದರು.
ಹೆಚ್.ಎನ್.ಓದಿದ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಮನವಿಗೆ ಸರ್ಕಾರ ಸ್ಪಂದನೆಯಿದೆ. ವಿಧುರಾಶ್ವತ್ಥದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಗ್ಯಾಲರಿ,ಅಂಬೇಡ್ಕರ್ ಅಧ್ಯಯನ ಕೇಂದ್ರ, ಹೆಚ್.ಎನ್. ಸೈನ್ಸ್ ಪಾರ್ಕ್ ನಿರ್ವಹಣೆ, ಹೆಚ್.ಎನ್.ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತಂತೆ ಎನ್.ಹೆಚ್.ಶಿವಶಂಕರ್‌ರೆಡ್ಡಿ ಅವರು ನನ್ನ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಕಾನೂನು ಸಚಿವರಿಗೆ ಈ ಸಂಬಂಧ ಕ್ರಮವಹಿಸುವಂತೆ ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ ಎಂದರು.
ಹೆಚ್.ಎನ್.ಜೀವನ ನಮಗೆಲ್ಲ ಮಾದರಿ.ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ.ನ್ಯಾಷನಲ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ನಾವು ಓದುವಾಗ ಸ್ಪರ್ಧೆಯಿತ್ತು.ಇದೇ ಕಾಲೇಜಿನ ವಿದ್ಯಾರ್ಥಿ ಯೊಬ್ಬ ಘಟಿಕೋತ್ಸವದ ಸಮಾರಂಭದಲ್ಲಿ ಸಮಕುಲಾಧಿಪತಿಯಾಗಿ ಭಾಗವಹಿಸಿದ್ದು ನನ್ನ ಪೂರ್ವಜನ್ಮದ ಪುಣ್ಯ.ಶಾಲಾಡಳಿತ ಮಂಡಳಿ ಕೋರಿಕೆ ಮೇಲೆ ಇಂಜನಿಯರಿಂಗ್ ಕಾಲೇಜು ಮಂಜೂರು ಮಾಡಿದ್ದೇನೆ. ನ್ಯಾಷನಲ್ ಕಾಲೇಜಿನ ಗತವೈಭವವನ್ನು ಮತ್ತೊಮ್ಮೆ ಕಾಣುವಂತಾಗಲಿ ಎಂದು ಹಾರೈಸಿದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ ಸರ್ಕಾರಿ ಶಾಲೆಯೊಂದು ಶತಮಾನೋತ್ಸವ ಆಚರಿಸು ತ್ತಿರುವ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ. ಇದನ್ನು ಆಗು ಮಾಡಿದ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಹೆಚ್.ನರಸಿಂಹಯ್ಯ ಅವರ ದಿವ್ಯ ದೃಷ್ಟಿಗೆ ಈ ಶತಮಾನೋತ್ಸವ ಸಮಾರಂಭವೇ ಸಾಕ್ಷಿ. ಹೆಚ್.ಎನ್. ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಈ ಇಬ್ಬರೂ ಜಿಲ್ಲೆಯ ಆದರ್ಶ ರತ್ನಗಳು.ಇಬ್ಬರೂ ಕೂಡ ಬಡತದಲ್ಲಿ ಅರಳಿದ ಪ್ರತಿಭಟಗಳೇ ಆಗಿದ್ದಾರೆ.ಹೆಚ್.ಎನ್. ಅವರಿಗೆವಿಜ್ಞಾನ ವೈಚಾರಿಕತೆ ಬದುಕಿನ ಭಾಗವಾಗಿ ದ್ದವು. ಶಿಕ್ಷಣ ಮತ್ತು ಆರೋಗ್ಯವನ್ನು ಕೊಟ್ಟಾಗ ಆ ಸಮಾಜ ಉತ್ತಮವಾಗಲಿದೆ ಎಂದು ನಂಬಿದ್ದರು.
ವಿದೇಶದಲ್ಲಿ ಓದಿದ್ದರೂ ಹಳ್ಳಿಯ ಸಂಪರ್ಕ ಕಡಿದುಕೊಳ್ಳಲಿಲ್ಲ.ರೈತರು ದೀನದಲಿತರ ಏಳಿಗೆಗಾಗಿ ಚಿಂಚಿಸಿ ಗೌರಿಬಿದನೂರು, ಬಾಗೇಪಲ್ಲಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿದರು.ಅವರ ಬಟ್ಟೆ ಅವರೇ ಒಗೆದುಕೊಳ್ಳುತ್ತಾ,ತಟ್ಟೆ ಅವರೇ ತೊಳೆಯುವಷ್ಟು ಸರಳತೆ ಯನ್ನು ರೂಢಿಸಿಕೊಂಡಿದ್ದರು. ಇಲ್ಲಿ ಸೇರಿರುವ ಜನತೆ ಹೆಚ್.ಎನ್.ಅವರ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸೇರಿಲ್ಲ. ಬದಲಿಗೆ ತಮ್ಮ ತಂದೆಯ,ಅಣ್ಣನ ಶತಮಾನೋತ್ಸವ ಇದು ಎಂಬಂತೆ ಸೇರಿದ್ದಾರೆ. ಲೋಕಸಭಾ ಸದಸ್ಯರ ಅನುದಾನದಲ್ಲಿ ಶಾಲಾಭಿವೃದ್ಧಿಗೆ ಇದೇ ವರ್ಷದಲ್ಲಿ ಹಣಕಾಸು ನೀಡಲು ಬದ್ಧ.ನಮ್ಮ ಸರ್ಕಾರ ಇದ್ದಾಗ ಸರ್ಕಾರಿ ಶಾಲೆಗಳ ವಿವೇಕ ಯೋಜನೆ ರೂಪಿಸಿದ್ದೆವು. ಕಾಂಗ್ರೆಸ್ ಸರಕಾರ ಅದನ್ನು ನಿಲ್ಲಿಸಿದೆ.ಇದು ಸರಿಯಾದ ತೀರ್ಮಾನವಲ್ಲ ಎಂದ ಅವರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಈ ಯೋಜನೆ ಜಾರಿಗೆ ತನ್ನಿ ಎಂದು ಮನವಿ ಮಾಡಿದರು.
ರಾಜ್ಯದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಆಳವಾದ ಅಧ್ಯಯನ ಮಾಡಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀತಿ ಬೇಕಾಗಿದೆ. ಪ್ರಾಥಮಿಕ ಶಿಕ್ಷಣ ಗುಣಮಟ್ಟ ದಿಂದ ಕೂಡಿರಬೇಕು.ಶೇ೪೮ರಷ್ಟು ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕೆ ಕಾರಣ ಪತ್ತೇ ಹಚ್ಚಬೇಕು. ಸಿದ್ದರಾಮಯ್ಯ ಹೆಚ್.ಎನ್ ರಂತೆ ಮುಖ್ಯಮಂತ್ರಿ ಯದರೂ ಸರಳತೆ ಮರೆತಿಲ್ಲ.ನರಸಿಂಹಯ್ಯ ಅವರ ಬಗ್ಗೆ ವಿಶೇಷ ಕಾಳಜಿಯುಳ್ಳ ಇವರನ್ನು ಇನ್ನೊಮ್ಮೆ ಕರೆದು ಅನುಕೂಲ ಪಡೆಯಿರಿ ಎಂದು ಆಯೋಜನಕರಿಗೆ ಸಲಹೆ ನೀಡಿದರು.
ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿ ನರಸಿಂಹಯ್ಯ ಅವರ ಸರಳತೆ, ತತ್ವವಿಚಾರಗಳು, ಮೌಢ್ಯಗಳ ವಿರುದ್ಧವಾದ ವೈಚಾರಿಕ ಬದ್ಧತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊಂದಿ ದ್ದಾರೆ. ಇದೇ ಕಾರಣಕ್ಕೆ ಅವರನ್ನೇ ಆಹ್ವಾನ ಮಾಡಿದ್ದೆವು. ಆ ಮೂಲಕ ಶಾಲಾಭಿವೃದ್ಧಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಿತ್ತು.ಆದರ ಅವರ ಅನುಪಸ್ಥಿತಿಯಲ್ಲಿ ಉಸ್ತುವಾರಿ ಸಚಿವರು ಇದನ್ನು ಮಾಡಬೇಕು. ಕನ್ನಡ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ನಾನು ಕೂಡ ಬದ್ಧ.೮ ವರ್ಷಗಳಿಂದ ನಾನೂ ಕೂಡ ಸರಕಾರಿ ಶಾಲೆ ದತ್ತು ಪಡೆದು ಅಲ್ಲಿ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸಲು ಮುಂದಾಗಿದ್ದೇನೆ.ಈ ವ್ಯವಸ್ಥೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆಗಬೇಕು.ಪ್ರಾಥಮಿಕ ಶಿಕ್ಷಣ ಬಲಿಷ್ಟವಾಗಿರುವುದು ಅಗತ್ಯ.ಇದಕ್ಕೆ ಬೇಕಾದ ಹೆಚ್ಚುವರಿ ಅನುದಾನವನ್ನು ಸರಕಾರ ನೀಡಬೇಕು.ಶಿಕ್ಷಕರು ಕೂಡ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವ ಜವಾಬ್ದಾರಿ ಹೊರಬೇಕು. ಜಾತಿಪದ್ದತಿಯ ಪ್ರಜ್ಞೆ ಹೋಗಲಾಡಿಸಿ ವಿಶ್ವಮಾನವ ಪ್ರಜ್ಞೆ ಮೂಡಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಗೌರಿಬಿದನೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲವಾಗಿದ್ದು ಇದಕ್ಕಾಗಿ ಆರಂಭಿಕ ಅನುದಾನವಾಗಿ 100 ಕೋಟಿ ಬಿಡುಗಡೆ ಮಾಡಬೇಕು.ಎಂದು ಜಿಲ್ಲಾ ಉಸ್ತುವಾರಿ ಸಚಿವ ರಲ್ಲಿ ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಎನ್.ಹೆಚ್.ಶಿವಶಂಕರ್‌ರೆಡಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹೆಚ್.ವಿ.ಮಂಜುನಾಥ್,ಡಾ.ಹೆಚ್.ವಿ.ವಾಸು,ನ್ಯಾಷನಲ್ ಕಾಲೇಜು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೆಚ್.ಎನ್.ಸುಬ್ರಹ್ಮಣ್ಯ,ಚಿಂತಕ ನಾಡೋಜ ಹಂಪ.ನಾಗರಾಜಯ್ಯ ಮತ್ತಿತರರು ಮಾತನಾಡಿದರು.
ಶಾಸಕ ಪುಟ್ಟಸ್ವಾಮಿ ಗೌಡ,ಮಾಜಿ ಶಾಸಕ ಶಿವಶಂಕರ್ ರೆಡ್ಡಿ, ಹೆಚ್.ವಿ.ಮಂಜುನಾಥ್,ಜಿಲ್ಲಾಧಿಕಾರಿ ಪಿಎನ್.ರವೀಂದ್ರ,ಎಸ್ಪಿ ಕುಶಾಲ್ ಚೌಕ್ಸೆ,ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ ನಿಟ್ಟಾಲಿ, ಹೆಚ್ಚು ವರಿ ಜಿಲ್ಲಾಧಿಕಾರಿ ಡಾ.ಭಾಸ್ಕರ್,ಹೆಚ್ಚುವರಿ ಎಸ್ಪಿ ರಾಜಾ ಇಮಾಮ್ ಖಾಸಿಂ, ನ್ಯಾಷನಲ್ ಕಾಲೇಜು ಅಧ್ಯಕ್ಷ ಹೆಚ್.ಎನ್.ಸುಬ್ರಹ್ಮಣ್ಯ, ಗೀತಾ ನಾಗಪ್ಪ,ಎಸ್.ಡಿ.ಎಂ.ಸಿ ಅಧ್ಯಕ್ಷ ತಿಮ್ಮಪ್ಪ, ಉದ್ಯಮಿ ರಘುರಾಮ ರೆಡ್ಡಿ, ದಾನಿಗಳಾದ ಕೃಷ್ಣ.ಹಸನ್ ಮೊಯಿನುದ್ದೀನ್, ಮುನಿ ಕೆಂಪೇಗೌಡ ಉಪ ನಿರ್ದೇಶಕರು, ಶ್ರೀನಿವಾಸ ಮೂರ್ತಿ, ನರಸಿಂಗ್‌ರಾವ್ ಮತ್ತಿತರರು ಇದ್ದರು.