IIT Baba: ಸುಳ್ಳಾದ ಐಐಟಿ ಬಾಬಾ ಭವಿಷ್ಯ; ನೀನೊಬ್ಬ ಡೋಂಗಿ ಬಾಬಾ ಎಂದ ನೆಟ್ಟಿಗರು
IND vs PAK: ಭಾರತ ಮತ್ತು ಪಾಕ್ ಪಂದ್ಯ ಆರಂಭದ ಮುನ್ನ ದಿನ ಸ್ಥಳೀಯ ಯೂಟ್ಯೂಬ್ ಸಂದರ್ಶಕನ ಜತೆ ಮಾತನಾಡುತ್ತಿದ್ದ ವೇಳೆ, ಈ ಬಾರಿ ಭಾರತ ಪಾಕ್ ವಿರುದ್ಧ ಖಂಡಿತವಾಗಿಯೂ ಸೋಲುತ್ತದೆ. ಕೊಹ್ಲಿಯಿಂದ ರನ್ ಗಳಿಸಲು ಅಸಾಧ್ಯ. ನನ್ನ ಭವಿಷ್ಯ ನಿಜವಾಗಲಿದೆ. ಏನೇ ಸವಾಲಿದ್ದರೂ ನಾನು ಸಿದ್ಧ ಎಂದು ಹೇಳಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಕೂಡ ಆಗಿತ್ತು. ಇದೀಗ ಸೋತ ಬಳಿಕ ಅವರ ಅಂದಿನ ಹೇಳಿಕೆಯ ವಿಡಿಯೊವನ್ನು ಎಡಿಟ್ ಮಾಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.


ನವದೆಹಲಿ: ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸುವುದಿಲ್ಲ, ಭಾರತ ಪಂದ್ಯ ಸೋಲುತ್ತದೆ ಎಂದು ಭವಿಷ್ಯ ನುಡಿದ್ದ ಐಐಟಿ ಬಾಬಾ ಇದೀಗ ಸಾಮಾಜಿ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅವರ ಭವಿಷ್ಯ ಸುಳ್ಳಾಗಿದ್ದು ಪಾಕ್ ವಿರುದ್ಧ ಭಾರತ ಗೆದ್ದದ್ದು ಮಾತ್ರವಲ್ಲದೆ ಕೊಹ್ಲಿ ಶತಕವನ್ನೇ ಬಾರಿಸಿ ಸಂಭ್ರಮಿಸಿದ್ದಾರೆ.
ಐಐಟಿ ಬಾಬಾ ಭಾರತ ತಂಡ ಪಾಕ್ ವಿರುದ್ಧ ಸೋಲುತ್ತದೆ ಎಂದು ಹೇಳಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಜತೆಗೆ ಆತಂಕ ಕೂಡ ಕಾಡಿತ್ತು. ಏಕೆಂದರೆ 2024ರ ಟಿ20 ವಿಶ್ವಕಪ್ ವೇಳೆ ಅವರು ಹೇಳಿದ್ದ ಭವಿಷ್ಯವಾಣಿ ನಿಜವಾಗಿತ್ತು. ಅಂದು ಅವರು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದ್ದರು. ಅವರು ಹೇಳಿದಂತೆ ಭಾರತ ಗೆದ್ದು ಚಾಂಪಿಯನ್ ಕೂಡ ಆಗಿತ್ತು.
ಹೀಗಾಗಿ ಅವರು ಈ ಬಾರಿ ನುಡಿದ ಭವಿಷ್ಯವಾಣಿ ನಿಜವಾಗಲಿದೆಯಾ ಎಂದು ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಂಬಿದ್ದರು. ಆದರೆ ಇದೀಗ ಅವರ ಭವಿಷ್ಯ ಸುಳ್ಳಾಗಿರುವುದರಿಂದ ಅವರನ್ನು ಟ್ರೋಲ್ ಮಾಡಲಾರಂಭಸಿದ್ದಾರೆ.
ಇದನ್ನೂ ಓದಿ IND vs PAK: ಗರಿಷ್ಠ ಕ್ಯಾಚ್ ದಾಖಲೆ ಬರೆದ ಕಿಂಗ್ ಕೊಹ್ಲಿ
ಐಐಟಿ ಬಾಬಾ ಹೇಳಿದ್ದೇನು?
ಭಾರತ ಮತ್ತು ಪಾಕ್ ಪಂದ್ಯ ಆರಂಭದ ಮುನ್ನ ದಿನ ಸ್ಥಳೀಯ ಯೂಟ್ಯೂಬ್ ಸಂದರ್ಶಕನ ಜತೆ ಮಾತನಾಡುತ್ತಿದ್ದ ವೇಳೆ, ಈ ಬಾರಿ ಭಾರತ ಪಾಕ್ ವಿರುದ್ಧ ಖಂಡಿತವಾಗಿಯೂ ಸೋಲುತ್ತದೆ. ಕೊಹ್ಲಿಯಿಂದ ರನ್ ಗಳಿಸಲು ಅಸಾಧ್ಯ. ನನ್ನ ಭವಿಷ್ಯ ನಿಜವಾಗಲಿದೆ. ಏನೇ ಸವಾಲಿದ್ದರೂ ನಾನು ಸಿದ್ಧ ಎಂದು ಹೇಳಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಕೂಡ ಆಗಿತ್ತು. ಇದೀಗ ಸೋತ ಬಳಿಕ ಅವರ ಅಂದಿನ ಹೇಳಿಕೆಯ ವಿಡಿಯೊವನ್ನು ಎಡಿಟ್ ಮಾಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಐಐಟಿ ಬಾಬಾ ಹೇಳಿದ್ದೇನು?
ಭಾರತ ಮತ್ತು ಪಾಕ್ ಪಂದ್ಯ ಆರಂಭದ ಮುನ್ನ ದಿನ ಸ್ಥಳೀಯ ಯೂಟ್ಯೂಬ್ ಸಂದರ್ಶಕನ ಜತೆ ಮಾತನಾಡುತ್ತಿದ್ದ ವೇಳೆ, ಈ ಬಾರಿ ಭಾರತ ಪಾಕ್ ವಿರುದ್ಧ ಖಂಡಿತವಾಗಿಯೂ ಸೋಲುತ್ತದೆ. ಕೊಹ್ಲಿಯಿಂದ ರನ್ ಗಳಿಸಲು ಅಸಾಧ್ಯ. ನನ್ನ ಭವಿಷ್ಯ ನಿಜವಾಗಲಿದೆ. ಏನೇ ಸವಾಲಿದ್ದರೂ ನಾನು ಸಿದ್ಧ ಎಂದು ಹೇಳಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಕೂಡ ಆಗಿತ್ತು. ಇದೀಗ ಸೋತ ಬಳಿಕ ಅವರ ಅಂದಿನ ಹೇಳಿಕೆಯ ವಿಡಿಯೊವನ್ನು ಎಡಿಟ್ ಮಾಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ನೀನೊಬ್ಬ ಡೋಂಗಿ ಬಾಬಾ ಎಂದಿದ್ದಾರೆ. ಇನ್ನು ಕೆಲವರು ಸನ್ಯಾಸತ್ವ ತೊರೆದು ಮತ್ತೆ ಏರೋಸ್ಪೇಸ್‌ನಲ್ಲಿ ಕೆಲಸ ಮುಂದುವರಿಸಿ ಎಂದಿದ್ದಾರೆ.
Agar aaj iss IIT baba ki baat sach hui to main jaa raha firr to inse milne🙌🏻
— Ritesh Sharma (@delphic_RS) February 23, 2025
All eyes on King Kohli👑#INDvsPAK pic.twitter.com/CjEFPybBhR
ಯಾರು ಈ ಐಐಟಿ ಬಾಬಾ?
ಏರೋಸ್ಪೇಸ್ ಇಂಜಿನಿಯರ್ ಆಗಿದ್ಧ ಈ 'ಐಐಟಿ ಬಾಬಾ'(IIT Baba)ನ ಹೆಸರು ಅಭಯ್ ಸಿಂಗ್. ಉನ್ನತ ಹುದ್ದೆಯನ್ನು ತೆರೆದು ಈಗ ಸನ್ಯಾಸಿಯಾಗಿದ್ದಾರೆ. ಇವರ ಹೆಸರು ಇಷ್ಟೊಂದು ಖ್ಯಾತಿ ಪಡೆದದ್ದು ಮಹಾಕುಂಭದಲ್ಲಿ.