ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಪಾಕ್‌ ಎದುರು ಅದೇ ಆಟʼ: 84 ರನ್‌ ಗಳಿಸಿದ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ವಿರಾಟ್‌ ಕೊಹ್ಲಿ!

Virat Kohli on his Batting: ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಆಕರ್ಷಕ 84 ರನ್‌ಗಳಿಸಿದ ವಿರಾಟ್‌ ಕೊಹ್ಲಿ ಭಾರತ ತಂಡದ 4 ವಿಕೆಟ್‌ ಗೆಲುವಿಗೆ ನೆರವಾದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ವಿರಾಟ್‌ ಕೊಹ್ಲಿ!

ವಿರಾಟ್‌ ಕೊಹ್ಲಿ ಹೇಳಿಕೆ

Profile Ramesh Kote Mar 5, 2025 4:03 PM

ದುಬೈ: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಿರಾಟ್‌ ಕೊಹ್ಲಿ ಭಾರತ ತಂಡದ 4 ವಿಕೆಟ್‌ ಗೆಲುವಿಗೆ ನೆರವು ನೀಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದ ಗೆಲುವಿನ ಮೂಲಕ ಭಾರತ ತಂಡ ಫೈನಲ್‌ಗೆ ಪ್ರವೇಶ ಮಾಡಿದೆ. ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ, ಆಸೀಸ್‌ ಎದುರು ತಾವು ಅನುಸರಿಸಿದ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂದು ಬಹಿರಂಗಪಡಿಸಿದ್ದಾರೆ.

ಇಲ್ಲಿನ ದುಬೈ ಇಂಟರ್‌ನ್ಯಾನಷಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 265 ರನ್‌ಗಳ ಗುರಿ ಹಿಂಬಾಲಿಸಿದ ಭಾರತ ತಂಡ ಪರ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ವಿರಾಟ್‌ ಕೊಹ್ಲಿ, ತಾಳ್ಮೆಯ ಆಟವನ್ನು ಪ್ರದರ್ಶಿಸಿದ್ದರು. ಅವರು ಆಡಿದ 98 ಎಸೆತಗಳಲ್ಲಿ 84 ರನ್‌ಗಳನ್ನು ಗಳಿಸಿದರು. ಆ ಮೂಲಕ ಭಾರತ ತಂಡ 48.1 ಓವರ್‌ಗಳಿಗೆ ಗೆಲುವು ಪಡೆದು ಫೈನಲ್‌ಗೆ ಪ್ರವೇಶ ಮಾಡಿತು.

IND vs AUS: ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿ ಫೈನಲ್‌ ಪ್ರವೇಶಿಸಿದ ಟೀಮ್‌ ಇಂಡಿಯಾ!

ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ವಿರಾಟ್‌ ಕೊಹ್ಲಿ

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ, "ಪಾಕಿಸ್ತಾನದ ವಿರುದ್ಧದ ಪಂದ್ಯದ ದಿನದಂತೆ ಈ ದಿನವೂ ಕೂಡಿತ್ತು. ಸನ್ನಿವೇಶಕ್ಕೆ ತಕ್ಕಂತೆ ಮೂಲ ಅಂಶಗಳನ್ನು ಇಲ್ಲಿ ಅರ್ಥ ಮಾಡಿಕೊಳ್ಳುವುದು ಹಾಗೂ ಅದಕ್ಕೆ ತಕ್ಕಂತೆ ನಮ್ಮ ಆಟವನ್ನು ತಯಾರಿ ಮಾಡುವುದು ಇದಾಗಿತ್ತು. ಇಲ್ಲಿನ ಪಿಚ್‌ನಲ್ಲಿ ಜೊತೆಯಾಟಗಳು ತುಂಬಾ ಮುಖ್ಯ ಹಾಗಾಗಿ, ಸ್ಟ್ರೈಕ್‌ ರೊಟೇಟ್‌ ಮಾಡುತ್ತಿದ್ದೆ. ಪಾಕ್‌ ವಿರುದ್ಧ ಹಾಗೂ ಇಂದು (ಮಂಗಳವಾರ) ಜೊತೆಯಾಟ ಮುಖ್ಯ ಎಂಬುದು ನಮ್ಮ ಭಾವನೆಯಾಗಿತ್ತು. ನಾನು ಔಟ್‌ ಆಗುವುದಕ್ಕೂ ಮುನ್ನ ನಾನು ಇನ್ನೂ ಹೆಚ್ಚಿನ 20 ರನ್‌ ಗಳಿಸುವುದು ಹಾಗೂ ಇನ್ನೂ ಎರಡು ಓವರ್‌ಗಳಲ್ಲಿ ಪಂದ್ಯವನ್ನು ಮುಗಿಸುವುದು ನಮ್ಮ ಯೋಜನೆಯಾಗಿತ್ತು. ಅಲ್ಲಿನ ಟೆಂಪ್ಲೇಟ್ ಅನ್ನು ನಾನು ಅನುಸರಿಸುತ್ತೇನೆ. ಕೆಲವೊಮ್ಮೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ," ಎಂದು ತಿಳಿಸಿದ್ದಾರೆ.

IND vs AUS: ಶತಕ ಕಳೆದುಕೊಂಡ ವಿರಾಟ್‌ ಕೊಹ್ಲಿ ವಿರುದ್ಧ ಕೆಎಲ್‌ ರಾಹುಲ್‌ ಅಸಮಾಧಾನ!

"ಕ್ರೀಸ್‌ನಲ್ಲಿ ನೀವು ಆದಷ್ಟು ನಿಲ್ಲಬೇಕು. ಫೀಲ್ಡರ್‌ಗಳನ್ನು ನೋಡಿಕೊಂಡು ಚೆಂಡನ್ನು ಗ್ಯಾಪ್‌ಗಳಲ್ಲಿ ಚೆಂಡನ್ನು ಹೊಡೆದು ಸಿಂಗಲ್ಸ್‌ ಪಡೆಯಬೇಕಾಗುತ್ತದೆ. ಒಂದೊಂದು ರನ್‌ಗಳನ್ನು ನೀವು ಕಲೆ ಹಾಕುತ್ತಾ ಇದ್ದರೆ, ಅದರಿಂದ ನೀವು ದೊಡ್ಡ ಜೊತೆಯಾಟವನ್ನು ಸೇರಿಸಬಹುದು. ಇದು ಪಂದ್ಯದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ನಾನು ಮಾಡಿದ್ದು ಇದನ್ನೇ...ಈಗ ಮುಂದುವರಿಸಿದ್ದೇನೆ ಅಷ್ಟೆ," ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಅಗ್ರ ಸ್ಥಾನದಲ್ಲಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರಾಟ್‌ ಕೊಹ್ಲಿ, "ಅದು ನನಗೆ ಗೊತ್ತಿಲ್ಲ. ಅದನ್ನು ನೀವು ನಿರ್ಧರಿಸಬೇಕು. ಈ ಅಂಶಗಳ ಕಡೆಗೆ ನಾನೆಂದಿಗೂ ಗಮ ಕೊಡುವುದಿಲ್ಲ. ನಾವು ಎಂದಿಗೂ ದಾಖಲೆಗಳ ಕಡೆಗೆ ಗಮನ ನೀಡಬಾರದು, ನಿಮ್ಮ ಜಯದೊಂದಿಗೆ ಅದು ಸಾಗುತ್ತದೆ. ತಂಡಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ," ಎಂದು ತಿಳಿಸಿದ್ದಾರೆ.



217 ರನ್‌ ಕಲೆ ಹಾಕಿರುವ ಕೊಹ್ಲಿ

ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಆಡಿದ 4 ಪಂದ್ಯಗಳಿಂದ 72.33ರ ಸರಾಸರಿಯಲ್ಲಿ217 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕಿಂಗ್‌ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 227 ರನ್‌ ಗಳಿಸಿದ ಇಂಗ್ಲೆಂಡ್‌ನ ಬೆನ್‌ ಡಕೆಟ್‌ ಅಗ್ರ ಸ್ಥಾನದಲ್ಲಿದ್ದಾರೆ.