ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Krishna Rukku Serial: ಮಗಳನ್ನು ನಾನೊಬ್ಳೆ ಇಂಡಿಪೆಂಡೆಂಟ್‌ ಆಗಿ ಬೆಳೆಸ್ತಾ ಇದ್ದೀನಿ; `ಕೃಷ್ಣ ರುಕ್ಕು' ನಟಿ ದಿವ್ಯಶ್ರೀ ದಿಟ್ಟ ಮಾತು

Krishna Rukku Serial: ಶುಭಸ್ಯ ಶೀಘ್ರಂ ಸೀರಿಯಲ್‌ನ ಪ್ರಮುಖ ಪಾತ್ರ ಶ್ರುತಿ. ಆ ಪಾತ್ರವನ್ನು ದಿವ್ಯಶ್ರೀ ನಾಯಕ್ ನಿಭಾಯಿಸಿದ್ದರು.‌ ದಿವ್ಯಶ್ರೀ ನಾಯಕ್ ಊರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ. ಸಿಂಗಲ್‌ ಪೇರೆಂಟ್‌ ಆಗಿರುವ ಇವರಿಗೆ ಮುದ್ದಾದ ಮಗಳಿದ್ದಾಳೆ. ತಂದೆಯಿಂದಲೇ ಚೆಂಡೆ ಮತ್ತು ಮದ್ದಳೆ ವಾದನವನ್ನು ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿದ್ದ ಚೆಂಡೆ ವಾದನದಲ್ಲಿ ತಮ್ಮದೇ ಛಾಪು ಮೂಡಿಸಿರುವುದು ದಿವ್ಯಾ ಹೆಗ್ಗಳಿಕೆ. ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಟಿ.

ಸಿಂಗಲ್‌ ಪೇರೆಂಟ್‌ ನಾನು; `ಕೃಷ್ಣ ರುಕ್ಕು' ನಟಿ ದಿವ್ಯಶ್ರೀ ದಿಟ್ಟ ಮಾತು

ದಿವ್ಯಶ್ರೀ ನಾಯಕ್‌ -

Yashaswi Devadiga
Yashaswi Devadiga Mar 6, 2026 7:19 PM

ಶುಭಸ್ಯ ಶೀಘ್ರಂ ಸೀರಿಯಲ್‌ನ ಪ್ರಮುಖ ಪಾತ್ರ ಶ್ರುತಿ. ಆ ಪಾತ್ರವನ್ನು ದಿವ್ಯಶ್ರೀ ನಾಯಕ್ (Divya Shree Nayak) ನಿಭಾಯಿಸಿದ್ದರು.‌ ದಿವ್ಯಶ್ರೀ ನಾಯಕ್ ಊರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ. ಸಿಂಗಲ್‌ ಪೇರೆಂಟ್‌ (Single Parent) ಆಗಿರುವ ಇವರಿಗೆ ಮುದ್ದಾದ ಮಗಳಿದ್ದಾಳೆ. ತಂದೆಯಿಂದಲೇ ಚೆಂಡೆ ಮತ್ತು ಮದ್ದಳೆ ವಾದನವನ್ನು ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿದ್ದ ಚೆಂಡೆ ವಾದನದಲ್ಲಿ ತಮ್ಮದೇ ಛಾಪು ಮೂಡಿಸಿರುವುದು ದಿವ್ಯಾ ಹೆಗ್ಗಳಿಕೆ. ಇದೀಗ ಹೊಚ್ಚಹೊಸ ಧಾರಾವಾಹಿ 'ಕೃಷ್ಣ ರುಕ್ಕು' (Krishna Rukku) ಮೂಲಕ ಮತ್ತೆ ಪ್ರಮುಖ ಪಾತ್ರದ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಟಿ.

ಕನಸು ನನಸಾಗಿದೆ

ದಿವ್ಯಶ್ರೀ ನಾಯಕ್ ಮಾತನಾಡಿ, ʻಜೀ ಕನ್ನಡ ನನಗೆ ಒಂದು ಡ್ರೀಮ್‌ ಚಾನೆಲ್‌ ಆಗಿತ್ತು. ಕನಸು ನನಸಾಗಿದೆ. ಒಳ್ಳೆ ಪಾತ್ರ ಕೂಡ ಮಾಡ್ತಾ ಇದ್ದೀನಿ. ನನ್ನ ರಿಯಲ್‌ ಲೈಫ್‌ಗೂ ಹಾಗೂ ಈ ಪಾತ್ರಕ್ಕೂ ಏನೂ ವ್ಯತ್ಯಾಸ ಅನ್ನಿಸಿಲ್ಲ. ಅಕ್ಕ ಅಂತ ನನ್ನನ್ನು ಪ್ರೀತಿ ಮಾಡೋರು ತುಂಬಾ ಜನ ಇದ್ದಾರೆ. ಈಗ ಧಾರಾವಾಹಿಯಲ್ಲಿಯೂ ಕೇರ್‌ ಮಾಡೋ ಅಕ್ಕನ ಪಾತ್ರ ಇದೆ. ಪ್ರೀತಿಸೋರಿಗೆ ತೊಂದರೆ ಕೊಟ್ಟರೆ ಅಷ್ಟೇ ಕೋಪವನ್ನೂ ತೋರಿಸ್ತಾಳೆ ಅವಳು. ರಿಯಲ್‌ ಲೈಫ್‌ನಲ್ಲೂ ಈ ಪಾತ್ರ ನನಗೆ ಮ್ಯಾಚ್‌ ಆಗುತ್ತೆʼ ಎಂದರು.

ಇದನ್ನೂ ಓದಿ: Bhagyalakshmi Kannada Serial: ತಾಳಿ ಕಟ್ಟಿದ ಮಾತ್ರಕ್ಕೆ ಗಂಡ ಆಗೋದಿಲ್ಲ; ಅಮ್ಮನ ಎದುರೇ ಭಾಗ್ಯ ಗರಂ

ಇಂಡಿಪೆಂಡೆಂಟ್ ಆಗಿ ಬೆಳೆಸ್ತಾ ಇದ್ದೀನಿ

ʻʻಈ ಧಾರಾವಾಹಿಯಲ್ಲಿ ನನ್ನ ಪಾತ್ರ ಪೂರ್ತಿ ನೆಗೆಟಿವ್‌ ಅಂತ ನಾನು ಹೇಳಲಾರೆ. ಮುಂದೆ ಸೀರಿಯಲ್‌ ನೋಡಿದರೆ ಗೊತ್ತಾಗತ್ತೆ. ಹೆಣ್ಣು ಮಕ್ಕಳಿಗೆ ನಾನು ಹೇಳೋದು ಒಂದೇ. ಮುಂಚೆ ಇತ್ತು ಪುರುಷ ಪ್ರಧಾನ ಸಮಾಜ ಅಂತ. ಆದರೆ ಈಗ ಅದು ಬದಲಾಗಿದೆ. ಹೆಣ್ಣು ಮಕ್ಕಳು ಎಲ್ಲವನ್ನೂ ಮೀರಿ ಮುಂದೆ ಬರುತ್ತಿದ್ದಾರೆ. ನೀವು ಕೂಡ ಸಾಧನೆ ಮಾಡಿ. ಪ್ರಪಂಚ ದೊಡ್ಡದಿದೆ. ಅವಕಾಶಗಳು ತುಂಬಾ ಇದೆ. ನಿಮ್ಮ ಬಗ್ಗೆ ಮೊದಲು ಯೋಚನೆ ಮಾಡಿ ಎಂದಿದ್ದಾರೆ. ನನ್ನ ಮಗಳನ್ನ ನಾನೊಬ್ಳೆ ಇಂಡಿಪೆಂಡೆಂಟ್ ಆಗಿ ಬೆಳೆಸ್ತಾ ಇದ್ದೀನಿ. ಹಾಗೇ ಇಲ್ಲಿಯೂ ನಾನು ಇಂಡಿಪೆಂಡೆಂಟ್‌ ಆಗಿ ವರ್ಕ್‌ ಕೂಡ ಮಾಡ್ತಾ ಇದ್ದೀನಿ. ಎಲ್ಲವನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗ್ತಾ ಇದ್ದೀನಿʼ ಎಂದಿದ್ದಾರೆ.

ವಿಶ್ವವಾಣಿ ಸಂದರ್ಶನ



ಸೀರಿಯಲ್‌ ಪ್ರಸಾರ ಯಾವಾಗಿನಿಂದ?

ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೇ ಹಿರಿತೆರೆ ಕಿರುತೆರೆಯ ನಿರ್ದೇಶಕ, ನಿರ್ಮಾಪಕ , ಬರಹಗಾರ , ನಟ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರ ನಿರ್ವಹಿಸುವ ಮೂಲಕ ತಂಡಕ್ಕೆ ಬಲ ನೀಡಿದ್ದಾರೆ. ಹಲವು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ ಖ್ಯಾತ ನಟಿ ಸುಚಿತ್ರ, ಗಾಯಕ ನವೀನ ಸಜ್ಜು ಹೀಗೆ ಮುಂತಾದ ಅತ್ಯದ್ಭುತ ಕಲಾವಿದರುಗಳು ನಟಿಸಿರುವುದು ಈ ಧಾರಾವಾಹಿಯ ತೂಕವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Amruthadhaare serial Kannada: ಶಕುಂತಲಾ ಎದುರೇ ಜೈದೇವ್‌ ಅಹಂಕಾರದ ಮಾತು! ಗೌತಮ್ ದಿವಾನ್ ಮುಂದಿನ ಹೆಜ್ಜೆ ಏನು?

ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ನಿರ್ಮಿಸಿರುವ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಮನಸೆಳೆಯುವ ಕಥೆ ಮತ್ತು ಭಾವನಾತ್ಮಕ ಅಭಿನಯಗಳು ಪ್ರೇಕ್ಷಕರಿಗೆ ಕಾಣಸಿಗಲಿದೆ. ಮಾರ್ಚ್ 9 ರಿಂದ ಸಂಜೆ 6:30 ಕ್ಕೆ, ಜೀ಼ ಕನ್ನಡ ವಾಹಿನಿಯಲ್ಲಿ 'ಕೃಷ್ಣ ರುಕ್ಕು' ಪ್ರಸಾರ ಕಾಣುತ್ತಿದೆ.