Venkatesh Iyer: 2025ರ ಐಪಿಎಲ್‌ಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್‌ಗೆ ಗಾಯದ ಭೀತಿ?
ಕೇರಳ ಹಾಗೂ ಮಧ್ಯ ಪ್ರದೇಶ ನಡುವಣ 2024-25ರ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2025ರ ಐಪಿಎಲ್‌ಗೂ ಮುನ್ನ ಕೆಕೆಆರ್‌ಗೆ ಗಾಯದ ಭೀತಿ ಉಂಟಾಗಿದೆ.
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಮಧ್ಯ ಪ್ರದೇಶ ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಪಾದದ ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 23 ಕೋಟಿ ರೂ. ಬೆಲೆಯ ಆಟಗಾರನ ಗಾಯದ ಭೀತಿಗೆ ಒಳಗಾಗಿದೆ.
ತಿರುವನಂತಪುರಂನ ಸೇಂಟ್ ಕ್ಸೇವಿಯರ್ ಕಾಲೇಜು ಮೈದಾನದಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಗಾಯಕ್ಕೆ ತುತ್ತಾಗಿದ್ದಾರೆ. ಮಧ್ಯ ಪ್ರದೇಶ ತಂಡ 49 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ತೆರಳಿದ್ದ ವೆಂಕಟೇಶ್ ಅಯ್ಯರ್ 80 ಎಸೆತಗಳಲ್ಲಿ 42 ರನ್‌ಗಳನ್ನು ಕಲೆ ಹಾಕಿ ಬಸಿಲ್‌ಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಮಧ್ಯ ಪ್ರದೇಶ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 60.2 ಓವರ್‌ಗಳಿಗೆ ಕೇವಲ 160 ರನ್‌ಗಳಿಗೆ ಆಲ್‌ಔಟ್ ಆಯಿತು. ಇನಿಂಗ್ಸ್ ಬ್ರೇಕ್ ವೇಳೆ ವೆಂಕಟೇಶ್ ಅಯ್ಯರ್ ಅವರು ಒಂದು ಕಾಲಿಗೆ ಪ್ಯಾಡ್ ಕಟ್ಟಿಕೊಂಡಿದ್ದರೆ, ಮತ್ತೊಂದು ಕಾಲನ್ನು ಚೇರ್ ಮೇಲಿಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಇದರಿಂದ ವೆಂಕಟೇಶ್ ಅಯ್ಯರ್‌ಗೆ ಗಾಯವಾಗಿರಬಹುದೆಂದು ಹೇಳಲಾಗುತ್ತಿದೆ.
IPL 2025:ʻಯಾವುದೇ ಸಂವಹನ ಇರಲಿಲ್ಲʼ-ಕೆಕೆಆರ್ ವಿರುದ್ದ ಶ್ರೇಯಸ್ ಅಯ್ಯರ್ ಬೇಸರ!
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ 23.75 ಕೋಟಿ ರೂ. ಗಳಿಗೆ ತನ್ನಲ್ಲಿಯೇ ಉಳಿಸಿಕೊಂಡಿತ್ತು. ಇದೀಗ ವೆಂಕಟೇಶ್ ಅಯ್ಯರ್ ಅವರು ಗಾಯದ ಭೀತಿಗೆ ಒಳಗಾಗಿರುವ ಕಾರಣ ಕೆಕೆಆರ್ ತಂಡಕ್ಕೆ ಮುಂದಿನ ಐಪಿಎಲ್ ಟೂರ್ನಿಗೂ ಮುನ್ನ ಆತಂಕಕ್ಕೆ ಒಳಗಾಗಿದೆ.
ಮೆಗಾ ಹರಾಜಿಗೆ ರಿಲೀಸ್ ಆಗಿದ್ದ ವೆಂಕಟೇಶ್ ಅಯ್ಯರ್
2024ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರ ಹೊರತಾಗಿಯೂ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ ಮೆಗಾ ಹರಾಜಿಗೆ ಬಿಡುಗಡೆ ಮಾಡಿತ್ತು. ಆ ಮೂಲಕ ರಿಂಕು ಸಿಂಗ್, ಸುನೀಲ್ ನರೇನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಅವರನ್ನು ಉಳಿಸಿಕೊಂಡಿತ್ತು. ಅಂದ ಹಾಗೆ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ದಾಖಲೆಯ ಬೆಲೆಗೆ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ ಖರೀದಿಸಿತ್ತು.
IPL 2025: ʻಶ್ರೀಘ್ರದಲ್ಲಿಯೇ ಡಾ ವೆಂಕಟೇಶ್ ಅಯ್ಯರ್ ಆಗಲಿದ್ದೇನೆʼ-ಕೆಕೆಆರ್ ಆಲ್‌ರೌಂಡರ್!
2024ರ ಐಪಿಎಲ್‌ನಲ್ಲಿ ಮಿಂಚಿದ್ದ ವೆಂಕಟೇಶ್
2024ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರಶಸ್ತಿ ಗೆಲುವಿನಲ್ಲಿ ವೆಂಕಟೇಶ್ ಅಯ್ಯರ್ ಕೂಡ ಉಪಯುಕ್ತ ಕೊಡುಗೆ ನೀಡಿದ್ದರು. ಇವರು ಆಡಿದ್ದ 15 ಪಂದ್ಯಗಳ 13 ಇನಿಂಗ್ಸ್‌ಗಳಿಂದ 46.25ರ ಸರಾಸರಿ ಮತ್ತು 158.79ರ ಸ್ಟ್ರೈಕ್ ರೇಟ್‌ನಲ್ಲಿ 370 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದರು.