#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ರಾಹುಲ್‌ ದಾಖಲೆ ಮುರಿದ ಅಭಿಷೇಕ್‌

IND vs ENG: ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅಭಿಷೇಕ್‌ ಕೇವಲ 20 ಎಸೆತಗಳಲ್ಲಿ ಅರ್ಧಶಕತ ಪೂರೈಸಿದರು. ಈ ಮೂಲಕ‌ ಟಿ20ಯಲ್ಲಿ ಇಂಗ್ಲೆಂಡ್‌ ವಿರುದ್ಧ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡರು

IND vs ENG: ರಾಹುಲ್‌ ದಾಖಲೆ ಮುರಿದ ಅಭಿಷೇಕ್‌

IND vs ENG

Profile Abhilash BC Jan 23, 2025 9:40 AM

ಕೋಲ್ಕತ್ತಾ: ಇಂಗ್ಲೆಂಡ್‌(IND vs ENG) ವಿರುದ್ಧ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದ್ದ ಟೀಮ್‌ ಇಂಡಿಯಾದ ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮಾ(Abhishek Sharma) ಅವರು ಕೆ.ಎಲ್‌ ರಾಹುಲ್‌(KL Rahul) ಅವರ ಅರ್ಧಶತಕದ ದಾಖಲೆಯೊಂದನ್ನು ಮುರಿದಿದ್ದಾರೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅಭಿಷೇಕ್‌ ಕೇವಲ 20 ಎಸೆತಗಳಲ್ಲಿ ಅರ್ಧಶಕತ ಪೂರೈಸಿದರು. ಈ ಮೂಲಕ‌ ಟಿ20ಯಲ್ಲಿ ಇಂಗ್ಲೆಂಡ್‌ ವಿರುದ್ಧ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡರು. ಈ ವೇಳೆ 27 ಎಸೆತಗಳಿಂದ ಅರ್ಧಶಕ ಬಾರಿಸಿದ್ದ ರಾಹುಲ್‌ ದಾಖಲೆ ಪತನಗೊಂಡಿತು. ದಾಖಲೆ ಯುವರಾಜ್‌ ಸಿಂಗ್‌ ಹೆಸರಿನಲ್ಲಿದೆ. 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಯುವಿ 12 ಎಸೆತಗಳಿಂದ ಈ ಮೈಲುಗಲ್ಲು ನಿಟ್ಟಿದ್ದರು.

ಇದನ್ನೂ ಓದಿ Ajinkya Rahane: ರೋಹಿತ್‌ಗೆ ಏನು ಮಾಡಬೇಕೆಂದು ತಿಳಿದಿದೆ; ರಹಾನೆ ಬೆಂಬಲ

ಚೇಸಿಂಗ್‌ ವೇಳೆ ಅಬ್ಬರಿಸಿದ ಅಭಿಷೇಕ್‌ ಒಟ್ಟು 34 ಎಸೆತಗಳಿಂದ ಬರೋಬ್ಬರಿ 8 ಸಿಕ್ಸರ್‌ ಮತ್ತು 5 ಬೌಂಡರಿ ನೆರವಿನಿಂದ 79 ರನ್‌ ಚಚ್ಚಿದರು. ಇವರ ಜತೆಗಾರ ಸಂಜು ಸ್ಯಾಮ್ಸನ್‌ 26 ರನ್‌ ಬಾರಿಸಿದರು. ಆದರೆ ನಾಯಕ ಸೂರ್ಯಕುಮಾರ್‌ ಯಾದವ್‌ ಶೂನ್ಯ ಸಂಕಟಕ್ಕೆ ಸಿಲುಕಿದರು. ಇಂಗ್ಲೆಂಡ್‌ ಪರ ನಾಯಕ ಜಾಸ್‌ ಬಟ್ಲರ್‌(68) ಏಕಾಂಗಿ ಹೋರಾಟ ನಡೆಸಿದರು. ಇವರ ಅರ್ಧಶತಕದ ನೆರವಿನಿಂದ ತಂಡ ಕನಿಷ್ಠ 100 ರ ಗಡಿ ದಾಟುವಂತಾಯಿತು.



ಭಾರತ ಪರ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ಅರ್ಶ್‌ದೀಪ್‌ ಸಿಂಗ್‌ 2, ಸ್ಪಿನ್ನರ್‌ ವರುಣ್‌ ಚರ್ಕವರ್ತಿ 3, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ 2, ಉಪನಾಯಕ ಅಕ್ಷರ್‌ ಪಟೇಲ್‌ 2 ವಿಕೆಟ್‌ ಕಿತ್ತರು. ರವಿ ಬಿಷ್ಣೋಯ್‌ ನಾಲ್ಕು ಓವರ್‌ ಎಸೆದರೂ ವಿಕೆಟ್‌ ಕೀಳುವಲ್ಲಿ ವಿಫಲರಾದರು.