IND vs ENG: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೂ ಜಾಕೋಬ್ ಬೆಥೆಲ್ ಔಟ್: ಜೋಸ್ ಬಟ್ಲರ್!
Jacob Bethell out of Champions Trophy: ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ಇಂಗ್ಲೆಂಡ್ ತಂಡದ ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಅವರು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆಂದು ಆಂಗ್ಲರ ತಂಡದ ನಾಯಕ ಜೋಸ್ ಬಟ್ಲರ್ ಖಚಿತಪಡಿಸಿದ್ದಾರೆ.
![2ನೇ ಪಂದ್ಯದ ಸೋಲಿನ ಬೆನ್ನಲ್ಲೆ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ!](https://cdn-vishwavani-prod.hindverse.com/media/original_images/Jacob_Bethel_bLwBisl.jpg)
Jacob Bethell
![Profile](https://vishwavani.news/static/img/user.png)
ಕಟಕ್: ಸ್ನಾಯು ಸೆಳೆತ ಗಾಯದ ಕಾರಣ ಏಕದಿನ ಸರಣಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿರುವ ಇಂಗ್ಲೆಂಡ್ ತಂಡದ ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಅವರು, ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೂ ಹೊರ ನಡೆದಿದ್ದಾರೆಂದು ಆಂಗ್ಲರ ನಾಯಕ ಜೋಸ್ ಬಟ್ಲರ್ ಖಚಿತಪಡಿಸಿದ್ದಾರೆ. ಭಾರತದ ವಿರುದ್ದ ಏಕದಿನ ಸರಣಿಯನ್ನು ಸೋತ ಇಂಗ್ಲೆಂಡ್ ತಂಡಕ್ಕೆ ಇದೀಗ ಜಾಕೋಬ್ ಬೆಥೆಲ್ ಅವರ ಗಾಯ ಇನ್ನಷ್ಟು ಹಿನ್ನಡೆಯನ್ನು ತಂದಿದೆ. ಇಂಗ್ಲೆಂಡ್ ಆಲ್‌ರೌಂಡರ್ ಮೊದಲನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ್ದರು.
ಜಾಕೋಬ್ ಬೆಥೆಲ್ ಅವರ ಸ್ಥಾನಕ್ಕೆ ಟಾಮ್ ಬ್ಯಾಂಟನ್ ಅವರನ್ನು ಇಂಗ್ಲೆಂಡ್ ಏಕದಿನ ತಂಡಕ್ಕೆ ಸೇರಿಸಲಾಗಿದೆ. ಇವರು 2020ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ತಂಡದ ಪರ ಆಡಿದ್ದರು. ಆದರೆ, ಇತ್ತೀಚೆಗೆ ಅವರು ಫ್ರಾಂಚೈಸಿ ಲೀಗ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇದರ ಫಲವಾಗಿ ಅವರಿಗೆ ಇಂಗ್ಲೆಂಡ್ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಅಂದ ಹಾಗೆ ಎರಡನೇ ಏಕದಿನ ಪಂದ್ಯದ ನಂತರ ಮಾತನಾಡಿದ ಜೋಸ್ ಬಟ್ಲರ್, ಜಾಕೀಬ್ ಬೆಥೆಲ್ ಅವರನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಕಳೆದುಕೊಂಡಿರುವುದು ಅವಮಾನಕರ ಸಂಗತಿ ಎಂದು ಹೇಳಿಕೊಂಡಿದ್ದಾರೆ.
IND vs ENG: ಸೆಂಚುರಿ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ!
"ಐಸಿಸಿ ಚಾಂಪಿಯನ್ಸ್ ಟ್ರೋಫಿಟೂರ್ನಿಯಿಂದ ಜಾಕೋಬ್ ಬೆಥೆಲ್ ಹೊರಬಿದ್ದಿರುವುದರ ಬಗ್ಗೆ ನನಗೆ ಖಚಿತವಿದೆ," ಎಂದು ಖಚಿತಪಡಿಸಿದ ಜೋಸ್ ಬಟ್ಲರ್, "ಇದು ಅವರಿಗೆ ತುಂಬಾ ನಿರಾಶೆಯನ್ನು ತಂದಿದೆ. ಅವರು ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು ಹಾಗೂ ಅತ್ಯಂತ ಉತ್ಸುಕತೆ ಕೆರಳಿಸಿರುವ ಆಟಗಾರ. ಆದರೆ, ಗಾಯದಿಂದ ಅವರು ಹೊರ ನಡೆದಿರುವುದು ನಿಜಕ್ಕೂ ಅವಮಾನಕರ ಸಂಗತಿ," ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಜಾಕೋಬ್ ಬೆಥೆಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಹಾಗೂ 218 ರನ್‌ಗಳು ಹಾಗೂ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಾಕೋಬ್ ಬೆಥೆಲ್ ಅವರ ಫಿಟ್ನೆಸ್ ಬಗ್ಗೆ ಕೆಲ ಮುಂದಿನ ಕೆಲ ದಿನಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ಅಧಿಕೃತವಾಗಿ ಮಾಹಿತಿ ನೀಡಬಹುದು.
IND vs ENG: ಏಕದಿನ ಸರಣಿಯಿಂದ ಜಾಕೋಬ್ ಬೆಥೆಲ್ ಔಟ್, ಟಾಮ್ ಬ್ಯಾಂಟನ್ ಇನ್!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇನ್ನು ಕೇವಲ 10 ದಿನಗಳು ಮಾತ್ರ ಬಾಕಿ ಇವೆ. ಆದರೆ, ಇಂಗ್ಲೆಂಡ್ ತಂಡಕ್ಕೆ ಗಾಯ ಭೀತಿ ಎದುರಾಗಿದೆ. ಜಾಕೋಬ್ ಬೆಥೆಲ್ ಅವರು ಒಂದು ಕಡೆಯಾದರೆ, ಮತ್ತೊಂದು ಕಡೆ ಜೇಮಿ ಸ್ಮಿತ್ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಕೂಡ ಆಡಲು ಸಾಧ್ಯವಾಗಿಲ್ಲ.
ಭಾರತದ ವಿರುದ್ದದ ಎರಡನೇ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ತಂಡ ಸಹಾಯಕ ಕೋಚ್‌ಗಳಾದ ಮಾರ್ಕಸ್ ಟ್ರೆಸ್ಕೋಥಿಕ್ ಮತ್ತು ಪಾಲ್ ಕಾಲಿವುಡ್ ಅವರು ಸಬ್ ಫೀಲ್ಡರ್‌ಗಳನ್ನು ಆಡಿಸುವ ಒತ್ತಡಕ್ಕೆ ಒಳಗಾಗಿದ್ದರು. ಅಂದ ಹಾಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಫೆಬ್ರವರಿ ರಂದು ಅಫಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ ಹಾಗೂ ತನ್ನ ಕೊನೆಯ ಲೀಗ್ ಪಂದ್ಯವನ್ನು ಮಾರ್ಚ್ ಒಂದರಂದು ದಕ್ಷಿಣ ಆಫ್ರಿಕಾ ವಿರುದ್ದ ಆಡಲಿದೆ.