#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಏಕದಿನ ಸರಣಿಯಿಂದ ಜಾಕೋಬ್‌ ಬೆಥೆಲ್‌ ಔಟ್‌, ಟಾಮ್‌ ಬ್ಯಾಂಟನ್‌ ಇನ್‌!

Jacob Bethell ruled out of ODI series: ಗಾಯದ ಕಾರಣ ಇಂಗ್ಲೆಂಡ್‌ ತಂಡದ ಯುವ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ಅವರು ಭಾರತ ವಿರುದ್ಧದ ಏಕದಿನ ಸರಣಿಯ ಇನ್ನುಳಿದ ಭಾಗದಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಬ್ಯಾಟ್ಸ್‌ಮನ್‌ ಟಾಮ್‌ ಬ್ಯಾಂಟನ್‌ಗೆ ಇಂಗ್ಲೆಂಡ್‌ ಕ್ರಿಕೆಟ್‌ ಅವಕಾಶ ಮಾಡಿಕೊಟ್ಟಿದೆ.

IND vs ENG: ಏಕದಿನ ಸರಣಿಯಿಂದ ಹೊರಬಿದ್ದ ಜಾಕೋಬ್‌ ಬೆಥೆಲ್‌!

Jacob Bethell ruled out of ODI series

Profile Ramesh Kote Feb 9, 2025 5:15 PM

ನವದೆಹಲಿ: ಹ್ಯಾಮ್‌ಸ್ಟ್ರಿಂಗ್‌ ಇಂಜುರಿಯಿಂದ ಬಳಲುತ್ತಿರುವ ಇಂಗ್ಲೆಂಡ್‌ ತಂಡದ ಯುವ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ಅವರು ಭಾರತ ವಿರುದ್ಧದ ಏಕದಿನ ಸರಣಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಇವರ ಸ್ಥಾನಕ್ಕೆ ಬ್ಯಾಟ್ಸ್‌ಮನ್‌ ಟಾಮ್‌ ಬ್ಯಾಂಟನ್‌ ಅವರಿಗೆ ಅವಕಾಶ ನೀಡಲಾಗಿದೆ.

ಟಾಮ್‌ ಬ್ಯಾಂಟನ್‌ ಅವರು 2020ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ ಪರ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ, ಅವರು ಐಎಲ್‌ಟಿ20ಟೂರ್ನಿಯಲ್ಲಿ ಬ್ಯಾಂಟನ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ ಹಾಗೂ ಅವರು ಈ ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆಗಿದ್ದಾರೆ. ಮೂರನೇ ಏಕದಿನ ಪಂದ್ಯದ ಫೆಬ್ರವರಿ 10ರಂದು ಟಾಮ್‌ ಬ್ಯಾಂಟನ್‌ ಇಂಗ್ಲೆಂಡ್‌ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.

IND vs ENG: ಕಳೆದ ವರ್ಷ ಭಾರತ ತಂಡದಿಂದ ಶ್ರೇಯಸ್‌ ಅಯ್ಯರ್‌ ಹೊರಗಿದ್ದಿದ್ದೇಕೆ? ರಿಕಿ ಪಾಂಟಿಂಗ್‌ ಪ್ರಶ್ನೆ!

"ಬುಧವಾರ ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಸಾಮರ್‌ಸೆಟ್‌ ಬ್ಯಾಟ್ಸ್‌ಮನ್‌ ಟಾಮ್‌ ಬ್ಯಾಂಟನ್‌ ಅವರನ್ನು ಇಂಗ್ಲೆಂಡ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ನಾಗ್ಪುರದಲ್ಲಿ ಮೊದಲನೇ ಏಕದಿನ ಪಂದ್ಯವನ್ನು ಆಡಿದ್ದ ವಾರ್ವಿಕ್‌ಶೈರ್‌ ಬ್ಯಾಟಿಂಗ್‌ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ಅವರು ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿದ್ದಾರೆ. ಸೋಮವಾರ ತಂಡ ಅಹಮದಾಬಾದ್‌ಗೆ ಆಗಮಿಸಿದ ಬಳಿಕ ಅವರ ಗಾಯವನ್ನು ನಿರ್ವಹಿಸಲಾಗುತ್ತದೆ," ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

"2020ರ ಆಗಸ್ಟ್‌ನಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ಪರ ಏಕದಿನ ಪಂದ್ಯ ಆಡಿದ್ದ ಟಾಮ್‌ ಬ್ಯಾಂಟನ್, ಟಿ20 ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಪ್ರಸ್ತುತ ಯುಎಇ ಐಎಲ್‌ಟಿ20 ಟೂರ್ನಿಯಲ್ಲಿ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ಈ ಟೂರ್ನಿಯಲ್ಲಿ ಅವರು ಆಡಿದ 11 ಇನಿಂಗ್ಸ್‌ಗಳಿಂದ 54.77ರ ಸರಾಸರಿಯಲ್ಲಿ ಎರಡು ಶತಕಗಳು ಸೇರಿದಂತೆ 493 ರನ್‌ಗಳನ್ನು ಕಲೆ ಹಾಕಿದ್ದಾರೆ," ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

IND vs ENG: ʻಬ್ಯಾಟ್‌ ಮೂಲಕ ಉತ್ತರ ನೀಡಿʼ-ರೋಹಿತ್‌ ಶರ್ಮಾ ವೈಫಲ್ಯದ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ಮೊದಲನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಬೆಥೆಲ್‌

ಜಾಕೋಬ್‌ ಬೆಥೆಲ್‌ ಅವರು ಮೊದಲನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು ಹಾಗೂ ಅರ್ಧಶತಕವನ್ನು ಬಾರಿಸಿದ್ದರು. ನಾಗ್ಪುರ್‌ನಲ್ಲಿ ನಾಯಕ ಜೋಸ್‌ ಬಟ್ಲರ್‌ ಅವರ ಜೊತೆಗೆ ಜಾಕೋಬ್‌ ಬೆತೆಲ್‌ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಇದರ ಫಲವಾಗಿ ಇಂಗ್ಲೆಂಡ್‌ ತಂಡ 200ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗಿತ್ತು.

ಏಕದಿನ ಸರಣಿಗೂ ಮುನ್ನ ಬೆಥೆಲ್‌ ಅವರು ಭಾರತದ ವಿರುದ್ದದ ಮೂರು ಟಿ20ಐ ಪಂದ್ಯಗಳನ್ನು ಆಡಿದ್ದರು. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದ ಬಳಿಕ ಜಾಕೋಬ್‌ ಬೆಥೆಲ್‌ಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ.