KAR vs JK: ಶುಭಮ್ ಪುಂಡಿರ್ ಅಮೋಘ ಶತಕ, ಮೊದಲನೇ ದಿನ ಜಮ್ಮು-ಕಾಶ್ಮೀರ ಪ್ರಾಬಲ್ಯ!
KAR vs JK Ranji Trophy Final Day 1 Highlights: ಶುಭಮ್ ಪುಂಡಿರ್ ಶತಕ ಹಾಗೂ ಯವೆರ್ ಹಸನ್ ಅವರ ಅರ್ಧಶತಕದ ಬಲದಿಂದ ಜಮ್ಮು ಮತ್ತು ಕಾಶ್ಮೀರ ತಂಡ, 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ಮೊದಲನೇ ದಿನ ಕರ್ನಾಟಕ ಎದುರು ಮೇಲುಗೈ ಸಾಧಿಸಿದೆ. ಆರಂಭಿಕ ದಿನದಾಟದ ಅಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಎರಡು ವಿಕೆಟ್ ನಷ್ಟಕ್ಕೆ 284 ರನ್‌ಗಳನ್ನು ಕಲೆ ಹಾಕಿದೆ.
ಕರ್ನಾಟಕ ಎದುರು ರಣಜಿ ಫೈನಲ್‌ನಲ್ಲಿ ಶತಕ ಬಾರಿಸಿದ ಶುಭಮ್ ಪುಂಡಿರ್. -
ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಫೈನಲ್ ಪಂದ್ಯದ (KAR vs JK) ಮೊದಲನೇ ದಿನ ಕರ್ನಾಟಕ ಹಿನ್ನಡೆ ಅನುಭವಿಸಿತು. ಶುಭಮ್ ಪುಂಡಿರ್ (Shubham Pundir) ಶತಕ ಹಾಗೂ ಯೆವೆರ್ ಹಸನ್ ಅವರ ಅರ್ಧಶತಕಗಳ ಬಲದಿಂದ ಜಮ್ಮು-ಕಾಶ್ಮೀರ ಆರಂಭಿಕ ದಿನ ಕನ್ನಡಿಗರ ಎದುರು ಪ್ರಾಬಲ್ಯ ಮೆರೆದರು. ಐಪಿಎಲ್ ಸ್ಟಾರ್ ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ ಕೂಡ ಅರ್ಧಶತಕ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮಂಗಳವಾರ ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಟಾಸ್ ಗೆದ್ದ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶುಭಮ್ ಪುಂಡಿರ್ ಶತಕ ಹಾಗೂ ಅಬ್ದುಲ್ ಸಮದ್ ಅರ್ಧಶತಕದ ಬಲದಿಂದ ಪ್ರವಾಸಿ ಜಮ್ಮು-ಕಾಶ್ಮೀರ ತಂಡ, ಮೊದಲನೇ ದಿನದಾಟದ ಅಂತ್ಯಕ್ಕೆ 87 ಓವರ್‌ಗಳಿಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 284 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಆರಂಭಿಕ ದಿನ ಕಣಿವೆ ರಾಜ್ಯ ತಂಡ ಮೇಲುಗೈ ಸಾಧಿಸಿದೆ.
IND vs ZIM: ʻವಿರಾಟ್ ಕೊಹ್ಲಿ ತರ ಆಡಿʼ- ತಿಲಕ್ ವರ್ಮಾಗೆ ಮಹತ್ವದ ಸಲಹೆ ನೀಡಿದ ಮೊಹಮ್ಮದ್ ಕೈಫ್!
ಹಸನ್-ಶುಭಮ್ ಜುಗಲ್‌ಬಂದಿ
ಇನಿಂಗ್ಸ್ ಆರಂಭಿಸಿದ ಕಮ್ರಾನ್ ಇಕ್ಬಾಲ್ ಹಾಗೂ ಯವೆರ್ ಹಸನ್ ಜೋಡಿಯಿಂದ ಮೊದಲನೇ ವಿಕೆಟ್‌ಗೆ ದೊಟ್ಟ ಜೊತೆಯಾಟ ಮೂಡಿ ಬರಲಿಲ್ಲ, ಕಮ್ರಾನ್ ಇಕ್ಬಾಲ್ ಅವರು 36 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಪ್ರಸಿಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಯವೆರ್ ಹಸನ್ ಹಾಗೂ ಶುಭಮ್ ಪುಂಡಿರ್ ಜೋಡಿ ದೀರ್ಘಾವಧಿ ಬ್ಯಾಟ್ ಮಾಡಿ ಕರ್ನಾಟಕ ಬೌಲರ್‌ಗಳ ವಿಶ್ವಾಸವನ್ನು ಕುಗ್ಗಿಸಿದರು. ಈ ಜೋಡಿ 244 ಎಸೆತಗಳಲ್ಲಿ 139 ರನ್‌ಗಳನ್ನು ಕಲೆ ಹಾಕಿ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿತು.
What a way to bring up a 𝙃𝙐𝙉𝘿𝙍𝙀𝘿 on the grandest stage 💯
— BCCI Domestic (@BCCIdomestic) February 24, 2026
🎥 A ton of pure class from J&K batter Shubham Pundir! ✨
Updates ▶️ https://t.co/G0ytZLEyNB#RanjiTrophy | @IDFCFIRSTBank pic.twitter.com/JOKdpZXu0Z
ಶುಭಮ್ ಪುಂಡಿರ್ ಸೊಗಸಾದ ಶತಕ
ಅದ್ಭುತವಾಗಿ ಬ್ಯಾಟ್ ಮಾಡಿದ ಆರಂಭಿಕ ಯಸೆರ್ ಹಸನ್ ದೀರ್ಘಾವಧಿ ಬ್ಯಾಟ್ ಮಾಡಿದ್ದರು. ಅವರು ತಾಳ್ಮೆಯಿಂದ ಬ್ಯಾಟ್ ಮಾಡಿ 150 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 88 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಅವರನ್ನು ಶತಕದಂಚಿನಲ್ಲಿ ಪ್ರಸಿಧ್ ಕೃಷ್ಣ ಔಟ್ ಮಾಡಿದರು. ಆದರೆ, ಆರಂಭಿಕ ದಿನ ಪೂರ್ತಿ ಬ್ಯಾಟ್ ಮಾಡಿ ಕರ್ನಾಟಕ ಬೌಲರ್‌ಗಳನ್ನು ದಂಡಿಸಿದ ಶುಭಮ್ ಪುಂಡರಿ ಅದ್ಭುತ ಶತಕವನ್ನು ಬಾರಿಸಿದರು. ಅವರು ಮೊದಲನೇ ದಿನದಾಟದ ಅಂತ್ಯಕ್ಕೆ 221 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ 117 ರನ್‌ಗಳನ್ನು ಗಳಿಸಿದರು. ಆ ಮೂಲಕ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಉತ್ತಮ ಆರಂಭ ತಂದುಕೊಡುವಲ್ಲಿ ನೆರವು ನೀಡಿದರು.
ಗೌತಮ್ ಗಂಭೀರ್ ರಾಜಕೀಯದಿಂದ ಭಾರತ ತಂಡದ ವರ್ಚಸ್ಸಿಗೆ ಧಕ್ಕೆ: ಅಹ್ಮದ್ ಶೆಹಜಾದ್!
ಅಬ್ದುಲ್ ಸಮದ್ ಅರ್ಧಶತಕ
ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅಬ್ದುಲ್ ಸಮದ್ ಕೂಡ ತಾಳ್ಮೆಯಿಂದ ಬ್ಯಾಟ್ ಮಾಡಿದರು. ಅವರು ಶುಭಮ್ ಜೊತೆಗೆ 105 ರನ್‌ಗಳನ್ನು ಕಲೆ ಹಾಕಿದರು. ಆದರೆ, ಮೊದಲನೇ ದಿನದಾಟದ ಅಂತ್ಯಕ್ಕೆ ಅವರು 67 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 52 ರನ್‌ಗಳನ್ನು ಕಲೆ ಹಾಕಿದ್ದಾರೆ.
ಕರ್ನಾಟಕ ಬೌಲರ್‌ಗಳ ವೈಫಲ್ಯ
ಪಂದ್ಯದ ಮೊದಲನೇ ದಿನ ಕರ್ನಾಟಕ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದರು. ವೇಗದ ಬೌಲರ್ ಪ್ರಸಿಧ್ ಕೃಷ್ಣ ಎರಡು ವಿಕೆಟ್ ಕಿತ್ತಿದ್ದು ಬಿಟ್ಟರೆ ಇನ್ನುಳಿದ ಬೌಲರ್‌ಗಳು ನೀರಸ ಪ್ರದರ್ಶನವನ್ನು ತೋರಿದರು. ಶುಭಮ್ ಪುಂಡಿರ್ ಹಾಗೂ ಅಬ್ದುಲ್ ಸಮದ್ ಅವರನ್ನು ಔಟ್ ಮಾಡಲು ಕರ್ನಾಟಕ ಬೌಲರ್‌ಗಳು ಸಾಕಷ್ಟು ಧಣಿದರೂ ಯಶಸ್ವಿಯಾಗಲಿಲ್ಲ.