IND vs ENG: ಶುಭಮನ್ ಗಿಲ್ ಬದಲು ಕನ್ನಡಿಗನಿಗೆ ಭಾರತದ ಟೆಸ್ಟ್ ನಾಯಕತ್ವ ನೀಡಿ ಎಂದ ಶ್ರೀಕಾಂತ್!
ಇಂಗ್ಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯ ನಿಮಿತ್ತ ಭಾರತ ತಂಡಕ್ಕೆ ಯಾರು ನಾಯಕರಾಗುತ್ತಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ. ಶುಭಮನ್ ಗಿಲ್‌ಗೆ ಟೆಸ್ಟ್ ನಾಯಕತ್ವ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಇದನ್ನು ಪ್ರಶ್ನೆ ಮಾಡುತ್ತಿದ್ದು, ಗಿಲ್‌ಗೆ ಪ್ಲೇಆಯಿಂಗ್ XIನಲ್ಲಿಯೂ ಸ್ಥಾನ ಸಿಗುವ ಬಗ್ಗೆ ಖಚಿತವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶುಭಮನ್ ಗಿಲ್‌ಗೆ ನಾಯಕತ್ವ ನೀಡಬಾರದೆಂದ ಕೆ ಶ್ರೀಕಾಂತ್.

ನವದೆಹಲಿ: ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತ ಟೆಸ್ಟ್ ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರತ ಟೆಸ್ಟ್ ತಂಡಕ್ಕೆ ಮುಂದಿನ ನಾಯಕ ಯಾರಾಗುತ್ತಾರೆಂಬ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ರೋಹಿತ್ ಶರ್ಮಾಗೆ ಉಪನಾಯಕನಾಗಿ ಸೇವೆ ಸಲ್ಲಿಸಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದು ಕ್ರಿಕೆಟ್ ಪಂಡಿತರು ನಂಬಿದ್ದರು. ಆದರೆ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು, ಶುಭಮನ್ ಗಿಲ್ (Shubman Gill) ಅವರನ್ನು ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಲು ಮುಂದಾಗಿದೆ. ಆದರೆ, ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಇದನ್ನು ವಿರೋಧಿಸಿದ್ದಾರೆ. ಗಿಲ್‌ಗೆ ಪ್ಲೇಯಿಂಗ್ XIನಲ್ಲಿಯೂ ಸ್ಥಾನ ಖಚಿತವಿಲ್ಲ ಆದರೆ, ಅವರಿಗೆ ನಾಯಕತ್ವ ನೀಡಬಾರದು ಎಂದು ಹೇಳಿದ್ದಾರೆ.
ಕ್ರಿಸ್ ಶ್ರೀಕಾಂತ್ ಭಾರತ ಟೆಸ್ಟ್ ನಾಯಕತ್ವಕ್ಕೆ ಹೊಸ ಸ್ಪರ್ಧಿಯನ್ನು ಹೆಸರಿಸಿದ್ದಾರೆ ಮತ್ತು ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿಯ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನನ್ನು ನಾಯಕತ್ವಕ್ಕೆ ಮಾಜಿ ಆಟಗಾರನನ್ನು ಸೂಚಿಸಿದ್ದಾರೆ. ಬೆನ್ನಿನ ಗಾಯದಿಂದಾಗಿ ಜಸ್‌ಪ್ರೀತ್ ಬುಮ್ರಾ ಕ್ಯಾಪ್ಟನ್ಸಿ ರೇಸ್‌ನಿಂದ ಹೊರ ನಡೆದಿದ್ದಾರೆ. ಇನ್ನು ಶುಭಮನ್ ಗಿಲ್‌ಗೆ ಇನ್ನೂ ಚಿಕ್ಕ ವಯಸ್ಸು ಮತ್ತು ವೈಟ್-ಬಾಲ್ ಉಪನಾಯಕನಾಗಿ ಮತ್ತು ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್‌ನ ನಾಯಕನಾಗಿ ಅವರ ಪ್ರದರ್ಶನದ ಫಲವಾಗಿ ಮುಂದಿನ ಟೆಸ್ಟ್ ನಾಯಕನಾಗಿ ಅವರಿಗೆ ಬೆಂಬಲ ಸಿಕ್ಕಿದೆ.
ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕೊಟ್ಟಷ್ಟು ಕೊಡುಗೆ ಬೇರೆ ಯಾರೂ ನೀಡಿಲ್ಲ: ಮೈಕಲ್ ವಾನ್!
"ಶುಭಮನ್ ಗಿಲ್‌ಗೆ ಆಡುವ XIನಲ್ಲಿ ಸ್ಥಾನ ಪಡೆಯುವುದು ಖಚಿತವಿಲ್ಲ. ಒಂದು ವೇಳೆ ಜಸ್‌ಪ್ರೀತ್ ಬುಮ್ರಾ ಫಿಟ್ ಇಲ್ಲವಾದರೆ, ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅವರಲ್ಲಿ ಒಬ್ಬರನ್ನು ನಾಯಕತ್ವಕ್ಕೆ ಪರಿಗಣಿಸಬೇಕಾಗಿದೆ," ಎಂದು ಟೈಮ್ಸ್ ಆಫ್ ಇಂಡಿಯಾಗೆ ಶ್ರೀಕಾಂತ್ ತಿಳಿಸಿದ್ದಾರೆ.
4ನೇ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ?
ಆಸ್ಟ್ರೇಲಿಯಾದಲ್ಲಿ ಶುಭಮನ್ ಗಿಲ್ ಅವರ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಶ್ರೀಕಾಂತ್ ಈ ರೀತಿ ಹೇಳಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಗಿಲ್ 12 ಇನಿಂಗ್ಸ್‌ಗಳಲ್ಲಿ ಕೇವಲ 19ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ ಮತ್ತು ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ. ಆರಂಭಿಕ ಆಟಗಾರನಾಗಿ ಅವರ ಸರಾಸರಿ 31.54ರ ಸರಾಸರಿಯನ್ನು ಹೊಂದಿದ್ದರೂ ಇಂಗ್ಲೆಂಡ್‌ನಲ್ಲಿ ಡ್ಯೂಕ್ ಚೆಂಡಿನೊಂದಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಅವರು ಆರು ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 88 ರನ್‌ಗಳು ಮಾತ್ರ. ವಿರಾಟ್ ಕೊಹ್ಲಿ ಬದಲಿಗೆ 4ನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆ ಎಂಬುದು ತಂಡದ ದೊಡ್ಡ ಚಿಂತೆಯಾಗಿದೆ. ಕೊಹ್ಲಿ 12 ವರ್ಷಗಳಿಂದ ಈ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ. ಅವರ ನಿವೃತ್ತಿಯ ನಂತರ ಈ ಸ್ಥಾನ ಖಾಲಿಯಾಗಿದೆ. ಈ ಸ್ಥಾನಕ್ಕೆ ರಾಹುಲ್ ಸರಿಯಾದ ಆಯ್ಕೆ ಎಂದು ಶ್ರೀಕಾಂತ್ ನಂಬಿದ್ದಾರೆ.
ವಿರಾಟ್ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಸೂಚಿಸಿದ ಅನಿಲ್ ಕುಂಬ್ಳೆ!
"ಭಾರತದ ಮುಂದಿನ 4ನೇ ಕ್ರಮಾಂಕದ ಬಗ್ಗೆ ಹೇಳುವುದಾದರೆ, ನನ್ನ ಅಭಿಪ್ರಾಯದಲ್ಲಿ ಕೆ.ಎಲ್. ರಾಹುಲ್ ಅವರಿಗೆ ಆ ಸ್ಥಾನವನ್ನು ನೀಡಬೇಕು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಬಲಿಷ್ಠ ಆಟಗಾರನಾಗಬಹುದು. ಅವರು ಸರಿಯಾದ ತಂತ್ರವನ್ನು ಹೊಂದಿದ್ದಾರೆ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಅವರಿಗೆ ಈ ಜವಾಬ್ದಾರಿಯನ್ನು ನೀಡಬೇಕು," ಎಂದು 1983ರ ವಿಶ್ವಕಪ್ ಗೆದ್ದ ವಿಜೇತ ಆಟಗಾರ ತಿಳಿಸಿದ್ದಾರೆ.