ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಕೊಟ್ಟಷ್ಟು ಕೊಡುಗೆ ಬೇರೆ ಯಾರೂ ನೀಡಿಲ್ಲ: ಮೈಕಲ್‌ ವಾನ್‌!

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇ 12 ರಂದು ಟೆಸ್ಟ್ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ್ದಾರೆ. ಅವರಿಗೆ ಇನ್ನೂ ಟೆಸ್ಟ್‌ ಕ್ರಿಕೆಟ್‌ 2-3 ವರ್ಷಗಳಿದ್ದವು. ಆದರೆ, ಅವರ ನಿವೃತ್ತಿ ನೀಡಿದ್ದರಿಂದ ಇಡೀ ಕ್ರಿಕೆಟ್‌ ಜಗತ್ತು ಆಘಾತವಾಗಿತ್ತು. ಇದೀಗ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ಕೊಹ್ಲಿಯ ಕೊಡುಗೆಯನ್ನು ಶ್ಲಾಘಿಸಿದ ಮೈಕಲ್‌ ವಾನ್‌!

ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿಯ ಕೊಡುಗೆಯನ್ನು ಶ್ಲಾಘಿಸಿದ ಮೈಕಲ್‌ ವಾನ್‌!

Profile Ramesh Kote May 14, 2025 10:43 PM

ನವದೆಹಲಿ: ಟೆಸ್ಟ್ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ(Virat Kohli) ಹಠಾತ್ ನಿವೃತ್ತಿಯಿಂದ ಆಘಾತಕ್ಕೊಳಗಾಗಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ (Michael Vaughan), ಭಾರತದ (Indian Cricket Team) ಸ್ಟಾರ್ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ಗೆ ನೀಡಿದಷ್ಟು ಕೊಡುಗೆ ಬೇರೆ ಯಾವುದೇ ಆಟಗಾರ ನೀಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೇ 12 ರಂದು ಸೋಮವಾರ ವಿರಾಟ್‌ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಅವರು 123 ಟೆಸ್ಟ್ ಪಂದ್ಯಗಳಲ್ಲಿ 30 ಶತಕಗಳೊಂದೊಗೆ 9230 ರನ್‌ಗಳನ್ನು ಕಲೆ ಹಾಕಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

'ದಿ ಟೆಲಿಗ್ರಾಫ್' ನ ತಮ್ಮ ಅಂಕಣದಲ್ಲಿ ಮೈಕಲ್‌ ವಾನ್‌ "ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದವರು ಬಹಳ ಕಡಿಮೆ. ಆದರೆ, ವಿರಾಟ್‌ ಕೊಹ್ಲಿಯ ಟೆಸ್ಟ್‌ ನಿವೃತ್ತಿ ನನಗೆ ನಿಜವಾಗಿಯೂ ದುಃಖವನ್ನುಂಟುಮಾಡಿದೆ. ಇಂಗ್ಲೆಂಡ್ ಪ್ರವಾಸದಲ್ಲಾಗಲಿ ಅಥವಾ ಭವಿಷ್ಯದಲ್ಲಿಯಾಗಲಿ ವಿರಾಟ್ ಕೊಹ್ಲಿಯನ್ನು ಬಿಳಿ ಜೆರ್ಸಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂಬುದು ನನಗೆ ಬೇಸರ ತಂದಿದೆ. ಅವರು ಈಗ ನಿವೃತ್ತರಾಗುತ್ತಿರುವುದು ನನಗೆ ಆಘಾತ ಮತ್ತು ದುಃಖ ತಂದಿದೆ. ಟೆಸ್ಟ್ ಸ್ವರೂಪಕ್ಕಾಗಿ ಕೊಹ್ಲಿ ನೀಡಿದ್ದಷ್ಟು ಕೊಡುಗೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ನೀಡಿಲ್ಲ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ʻಶ್ರೇಷ್ಠ ಬ್ಯಾಟ್ಸ್‌ಮನ್‌ʼ: ವಿರಾಟ್‌ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಂಡರ್ಸನ್‌!

ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್‌ ಕೊಹ್ಲಿ. ಇವರ ನಾಯಕತ್ವದಲ್ಲಿ ಭಾರತ ತಂಡ ಆಡಿದ 68 ಟೆಸ್ಟ್‌ ಪಂದ್ಯಗಳಲ್ಲಿ 40 ಗೆಲುವು ಪಡದಿದೆ. ಜನರು ಸಾಂಪ್ರದಾಯಿಕ ಸ್ವರೂಪವನ್ನು ಮತ್ತೆ ಪ್ರೀತಿಸುವಂತೆ ಅವರು ಮಾಡಿದ್ದಾರೆ ಮತ್ತು ಅವರಿಲ್ಲದೆ ಈ ಸ್ವರೂಪ ತುಂಬಾ ನೀರಸವಾಗಿರುತ್ತಿತ್ತು ಎಂದು ವಾನ್‌ ತಿಳಿಸಿದ್ದಾರೆ.

"ಒಂದು ದಶಕದ ಹಿಂದೆ ಅವರು ನಾಯಕನಾಗಿದ್ದಾಗ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನನಗೆ ಅನಿಸಿತ್ತು. ಎಂಎಸ್ ಧೋನಿ ಶ್ರೇಷ್ಠ ವೈಟ್-ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದರು, ಆದರೆ ಅವರು ಟೆಸ್ಟ್ ತಂಡವನ್ನು ಮುನ್ನಡೆಸಿದರು ಎಂದು ನಾನು ಭಾವಿಸುತ್ತೇನೆ. ಆದರೆ ಆ ತಂಡವು ಟೆಸ್ಟ್‌ ಕ್ರಿಕೆಟ್‌ ಅನ್ನು ಪ್ರೀತಿಸುತ್ತಿರಲಿಲ್ಲ. ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವುದು ಆಟಕ್ಕೆ ಮುಖ್ಯವಾಗಿದೆ ಮತ್ತು ನಾಯಕನಾಗಿ ವಿರಾಟ್ ಕೊಹ್ಲಿ ಅದನ್ನು ಮಾಡಿದ್ದಾರೆ," ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಸೂಚಿಸಿದ ಅನಿಲ್‌ ಕುಂಬ್ಳೆ!

ಅವರ ನಿರ್ಗಮನ ಟೆಸ್ಟ್ ಕ್ರಿಕೆಟ್‌ಗೆ ದೊಡ್ಡ ಹೊಡೆತ

"ಅವರ ಉತ್ಸಾಹ, ಕೌಶಲ ಮತ್ತು ಟೆಸ್ಟ್ ಕ್ರಿಕೆಟ್ ಬಗ್ಗೆ ಅವರ ಅಭಿಪ್ರಾಯಗಳು ಭಾರಿ ಸಕಾರಾತ್ಮಕ ಪರಿಣಾಮ ಬೀರಿದವು. ಅವರಿಲ್ಲದಿದ್ದರೆ ಟೆಸ್ಟ್‌ ಕ್ರಿಕೆಟ್‌ ತುಂಬಾ ನೀರಸವಾಗಿರುತ್ತಿತ್ತು ಮತ್ತು ಅದರ ಆಕರ್ಷಣೆ ಕಳೆದುಕೊಳ್ಳುತ್ತಿತ್ತು. ಅವರ ನಿರ್ಗಮನದಿಂದ ಟೆಸ್ಟ್ ಕ್ರಿಕೆಟ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಅವರು ಮುಂಬರುವ ಪೀಳಿಗೆಗೆ ಟೆಸ್ಟ್‌ ಕ್ರಿಕೆಟ್‌ ಅನ್ನು ಪ್ರೀತಿಸಲು ಕಲಿಸಿದ್ದಾರೆ. ಟಿ20 ಕ್ರಿಕೆಟ್ ಆರಂಭವಾದಾಗಿನಿಂದ ಅವರು ಮೂರು ಸ್ವರೂಪಗಳಲ್ಲಿ ಶ್ರೇಷ್ಠ ಕ್ರಿಕೆಟಿಗರಾಗಿದ್ದಾರೆ," ಎಂದು ಶ್ಲಾಘಿಸಿದ್ದಾರೆ.