IND vs ENG 1st ODI: ಟೀಮ್ ಇಂಡಿಯಾ ಪರ ಇಬ್ಬರು ಪದಾರ್ಪಣೆ; ಕೊಹ್ಲಿ ಅಲಭ್ಯ
ಜೈಸ್ವಾಲ್ ಈಗಾಗಲೇ ಭಾರತ ಪರ 19 ಟೆಸ್ಟ್ ಪಂದ್ಯಗಳಿಂದ 1798ರನ್, 4 ಶತಕ ಮತ್ತು 10 ಅರ್ಧಶತಕ ಬಾರಿಸಿದ್ದಾರೆ. ಟಿ20ಯಲ್ಲಿ 23ಪಂದ್ಯ ಆಡಿ 723 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಶತಕ ಮತ್ತು 5 ಅರ್ಧಶತಕ ದಾಖಲಾಗಿದೆ.
![Yashasvi Jaiswal and Harshit Rana](https://cdn-vishwavani-prod.hindverse.com/media/images/Yashasvi_Jaiswal_and_Harshit_Rana.max-1280x720.jpg)
![Profile](https://vishwavani.news/static/img/user.5c7ca8245eec.png)
ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ(IND vs ENG 1st ODI) ತಂಡದ ಪರ ವೇಗಿ ಹರ್ಷಿತ್ ರಾಣಾ(Harshit Rana) ಮತ್ತು ಆರಂಭಿಕ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಪದಾರ್ಪಣೆಗೈದರು. ಜೈಸ್ವಾಲ್‌ಗೆ ನಾಯಕ ರೋಹಿತ್ ಕ್ಯಾಪ್ ನೀಡಿದರೆ, ಹರ್ಷಿತ್‌ಗೆ ಹಿರಿಯ ವೇಗಿ ಮೊಹಮ್ಮದ್ ಶಮಿ ಕ್ಯಾಪ್ ತೊಡಿಸಿ ತಂಡಕ್ಕೆ ಸ್ವಾಗತಿಸಿದರು. ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಅಭ್ಯಾಸದ ವೇಳೆ ಮೊಣಕಾಲಿಗೆ ಗಾಯವಾದ ಕಾರಣ ವಿರಾಟ್ ಕೊಹ್ಲಿ ಈ ಪಂದ್ಯಕ್ಕೆ ಅಲಭ್ಯರಾದರು. ನಿರೀಕ್ಷೆಯಂತೆ ಕನ್ನಡಿಗ ಕೆ.ಎಲ್ ರಾಹುಲ್‌ಗೆ ಕೀಪಿಂಗ್ ಜವಾಬ್ದಾರಿ ವಹಿಸಲಾಗಿದೆ.
ಜೈಸ್ವಾಲ್ ಅವರು 2023 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಭಾರತ ಪರ ತಮ್ಮ ಚೊಚ್ಚಲ ಟೆಸ್ಟ್ ಮತ್ತು T20I ಪಂದ್ಯಗಳನ್ನು ಆಡಿದ್ದರು. ಆದರೆ ಏಕದಿನದಲ್ಲಿ ಕ್ಯಾಪ್ ಪಡೆಯಲು 2 ವರ್ಷ ಕಾಯಬೇಕಾಯಿತು. ಏತನ್ಮಧ್ಯೆ, ಹರ್ಷಿತ್ ಕಳೆದ ವಾರ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಕ್ಯಾಪ್ ಸ್ವೀಕರಿಸುವ ಮೊದಲು ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.
ಜೈಸ್ವಾಲ್ ಈಗಾಗಲೇ ಭಾರತ ಪರ 19 ಟೆಸ್ಟ್ ಪಂದ್ಯಗಳಿಂದ 1798ರನ್, 4 ಶತಕ ಮತ್ತು 10 ಅರ್ಧಶತಕ ಬಾರಿಸಿದ್ದಾರೆ. ಟಿ20ಯಲ್ಲಿ 23ಪಂದ್ಯ ಆಡಿ 723 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಶತಕ ಮತ್ತು 5 ಅರ್ಧಶತಕ ದಾಖಲಾಗಿದೆ. ಹರ್ಷಿತ್ ರಾಣಾ 2 ಟೆಸ್ಟ್ ಮತ್ತು ಒಂದು ಟಿ20 ಸೇರಿ ಒಟ್ಟು 7 ವಿಕೆಟ್ ಕಿತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಫಿಟ್ ಆಗದ ಕಾರಣ ರಾಣಾ ಅವರನ್ನು ಇಂಗ್ಲೆಂಡ್ ಏಕದಿನ ಸರಣಿಗೆ ಸೇರಿಸಲಾಗಿತ್ತು. ಒಂದೊಮ್ಮೆ ಬುಮ್ರಾ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾದರೆ ಆಗ ಅವರ ಸ್ಥಾನಕ್ಕೆ ಹರ್ಷಿತ್ ರಾಣಾ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ.
𝘼 𝙢𝙤𝙢𝙚𝙣𝙩 𝙩𝙤 𝙘𝙝𝙚𝙧𝙞𝙨𝙝 𝙛𝙤𝙧 𝙔𝙖𝙨𝙝𝙖𝙨𝙫𝙞 𝙅𝙖𝙞𝙨𝙬𝙖𝙡 & 𝙃𝙖𝙧𝙨𝙝𝙞𝙩 𝙍𝙖𝙣𝙖! 👏 👏
— BCCI (@BCCI) February 6, 2025
ODI debuts ✅ ✅ as they receive their ODI caps from captain Rohit Sharma & Mohd. Shami respectively! 👍 👍
Follow The Match ▶️ https://t.co/lWBc7oPRcd#TeamIndia |… pic.twitter.com/b2cT8rz5bO
ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆ.ಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.
ಇಂಗ್ಲೆಂಡ್: ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿ.ಕೀ), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋಫ್ರ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.