ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ Final: ಟಾಸ್‌ ಸೋತು ಲಾರಾ ಜತೆ ಜಂಟಿ ಕೆಟ್ಟ ದಾಖಲೆ ಹಂಚಿಕೊಂಡ ರೋಹಿತ್‌

champions trophy final 2025: ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಟಾಸ್‌ ಸೋಲುವ ಮೂಲಕ ರೋಹಿತ್‌ ಶರ್ಮ(12 ಬಾರಿ) ಅವರು ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಟಾಸ್‌ ಸೋತ ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್‌ ಲಾರಾ(12) ಜತೆ ಜಂಟಿ ಅಗ್ರಸ್ಥಾನಕ್ಕೇರಿದರು.

ಸತತ ಟಾಸ್‌ ಸೋಲು; ಅಗ್ರಸ್ಥಾನಕ್ಕೇರಿದ ರೋಹಿತ್‌ ಶರ್ಮ

Profile Abhilash BC Mar 9, 2025 3:29 PM

ದುಬೈ: ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಟಾಸ್‌ ಸೋಲುವ ರೋಹಿತ್‌ ಶರ್ಮ(Rohit Sharma) ಅವರ ಹಳೇ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌(ICC Champions Trophy 2025 final) ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌(IND vs NZ final) ವಿರುದ್ಧ ಟಾಸ್‌ ಸೋತ ರೋಹಿತ್‌(12 ಬಾರಿ) ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್‌ ಲಾರಾ(12) ಜತೆ ಜಂಟಿ ಅಗ್ರಸ್ಥಾನಕ್ಕೇರಿದರು. ಪೀಟರ್ ಬೊರೆನ್(11) ಮೂರನೇ ಸ್ಥಾನದಲ್ಲಿದ್ದಾರೆ. ಇದು ಮಾತ್ರವಲ್ಲದೆ ಭಾರತ ತಂಡ ಸತತವಾಗಿ ಟಾಸ್‌ ಸೋತ 15ನೇ ಪಂದ್ಯ ಇದಾಗಿದೆ. ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲ್ಯಾಂಡ್‌ ನಾಯಕ ಮಿಚೆಲ್‌ ಸ್ಯಾಂಟ್ನರ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಉತ್ತಮವಾಗಿ ರನ್‌ ಗಳಿಸುತ್ತಿದೆ.

ಟಾಸ್‌ ಪ್ರಕ್ರಿಯೆಗೆ ಮೈದಾನಕ್ಕಿಳಿಯುತ್ತಿದ್ದಂತೆ ನಾಯಕ ರೋಹಿತ್‌ ಶರ್ಮ ದಾಖಲೆಯೊಂದನ್ನು ತಮ್ಮ ಹೆಸೆರಿಗೆ ಬರೆದರು. ಎಲ್ಲ ನಾಲ್ಕು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು. ರೋಹಿತ್‌ ನಾಯಕತ್ವದಲ್ಲಿ ಭಾರತ 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, 2023ರ ಏಕದಿನ ವಿಶ್ವಕಪ್‌, 2024ರ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು. ರೋಹಿತ್‌ ಹೊರತುಪಡಿಸಿ ಮಹೇಂದ್ರ ಸಿಂಗ್‌ ಧೋನಿ ಮತ್ತು ನ್ಯೂಜಿಲ್ಯಾಂಡ್‌ನ ಕೇನ್‌ ವಿಲಿಯಮ್ಸನ್‌ ಮೂರು ಮಾದರಿಯ ಐಸಿಸಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿಗೆ ಇದು 9ನೇ ಐಸಿಸಿ ಫೈನಲ್​.



ಉಭಯ ತಂಡಗಳ ಆಡುವ ಬಳಗ

ಭಾರತ: ರೋಹಿತ್‌ ಶರ್ಮ (ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌ ರಾಹುಲ್‌, ಅಕ್ಷರ್‌ ಪಟೇಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ವರುಣ್‌ ಚಕ್ರವರ್ತಿ.

ಇದನ್ನೂ ಓದಿ IND vs NZ Final: ಟಾಸ್‌ ಸೋತು ಬೌಲಿಂಗ್‌ ಆಹ್ವಾನ ಪಡೆದ ಭಾರತ

ನ್ಯೂಜಿಲೆಂಡ್‌: ವಿಲ್‌ ಯಂಗ್‌, ರಚಿನ್‌ ರವೀಂದ್ರ, ಕೇನ್‌ ವಿಲಿಯಮ್ಸನ್‌, ಡ್ಯಾರಿಲ್‌ ಮಿಚೆಲ್‌, ಟಾಮ್‌ ಲೇಥಮ್‌ (ವಿ ಕಿ), ಗ್ಲೆನ್‌ ಫಿಲಿಪ್ಸ್‌, ಮೈಕಲ್‌ ಬ್ರೇಸ್‌ವೆಲ್‌, ಮಿಚೆಲ್‌ ಸ್ಯಾಂಟ್ನರ್‌ (ನಾಯಕ), ಸ್ಮಿತ್‌, ಕೈಲ್‌ ಜೇಮಿಸನ್‌, ವಿಲಿಯಮ್‌ ರೌರ್ಕಿ.